ಬೈಲುಕುಪ್ಪೆ ಟಿಬೇಟಿಯನ್ ಶಿಬಿರದಲ್ಲಿ ಕಟ್ಟೆಚ್ಚರ
ಕೊಡಗು

ಬೈಲುಕುಪ್ಪೆ ಟಿಬೇಟಿಯನ್ ಶಿಬಿರದಲ್ಲಿ ಕಟ್ಟೆಚ್ಚರ

March 16, 2020

ಮಡಿಕೇರಿ,ಮಾ.15-ಕೊಡಗು ಜಿಲ್ಲೆ ಯಲ್ಲಿ ಕೊರೊನಾ ವೈರಸ್ ಹರಡುವು ದನ್ನು ತಡೆಯಲು ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಕುಶಾಲನಗರ ಸಮೀಪದ ಬೈಲುಕುಪ್ಪೆಯ ಟಿಬೆಟಿಯನ್ ಶಿಬಿರದಲ್ಲಿ ಆರೋಗ್ಯ ಇಲಾಖೆ ವಿಶೇಷ ನಿಗಾ ಇಟ್ಟಿದೆ.

ಕೊರೊನಾ ಮಹಾಮಾರಿ ಕಾಣಿಸಿ ಕೊಂಡಿರುವ ಚೀನಾ ದೇಶದೊಂದಿಗೆ ಟಿಬೆಟ್ ಗಡಿ ಹಂಚಿಕೊಂಡಿದ್ದು, ಟಿಬೆಟ್ ನಲ್ಲೂ ಕೊರೊನಾ ಸೋಂಕು ಹರಡಿದೆ. ಬೌದ್ಧ ಭಿಕ್ಷುಗಳು ಟಿಬೆಟ್‍ಗೆ ಹೋಗಿ ಬರು ವುದು ಸಾಮಾನ್ಯವಾಗಿರುವ ಹಿನ್ನಲೆಯಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿ ಶಿಬಿರಕ್ಕೂ ತೆರಳಿ ಕೊರೊನಾ ವೈರಸ್ ಮತ್ತು ಶುಚಿತ್ವದ ಬಗ್ಗೆ ಜಾಗೃತಿ ಮೂಡಿ ಸುತ್ತಿದ್ದಾರೆ. ಮಾತ್ರವಲ್ಲದೇ, ಟಿಬೆಟ್‍ಗೆ ಹೋಗಿ ಬಂದಿರುವ ಭಿಕ್ಷುಗಳ ಮೇಲೆ ನಿಗಾ ವಹಿಸಲಾಗಿದೆ. ಬೈಲುಕೊಪ್ಪದಲ್ಲಿ ರುವ ಗೋಲ್ಡನ್ ಟೆಂಪಲ್ ವೀಕ್ಷಿಸಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಿರುವ ಕಾರಣ ವಿದೇಶಿಗರಿಗೂ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗು ತ್ತಿದೆ. ಬೌದ್ಧ ಭಿಕ್ಷುಗಳು ತಂಗಿರುವ ಪ್ರದೇಶ ಗಳಲ್ಲಿ ಆರೋಗ್ಯ ಶಿಬಿರಗಳನ್ನು ಕೂಡ ತೆರೆಯಲಾಗಿದ್ದು, ಶೀತ ಜ್ವರದಿಂದ ಬಳಲುತ್ತಿರು ವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಸಾಂಕ್ರಾಮಿಕ ಕೊರೊನಾ ವೈರಸ್ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳ ಪಿಡಿಓ ಗಳಿಗೆ ಸುತ್ತೋಲೆ ನೀಡಲಾಗಿದೆ. ಬೀದಿ ಬದಿಗಳಲ್ಲಿ ತೆರೆದ ಆಹಾರ ಪದಾರ್ಥ ಗಳನ್ನು ಮಾರುವುದು, ಬಳಸಿ ಬಿಸಾಡುವ ವಸ್ತುಗಳನ್ನು ಬಳಸುವುದು, ಮಾಂಸ ಮಾರುಕಟ್ಟೆಗಳಲ್ಲಿ ತೆರೆದ ರೀತಿಯಲ್ಲಿ ಮಾಂಸಗಳನ್ನು ಇಡದಂತೆ ಹಾಗೂ ಹಣ್ಣು ಗಳನ್ನು ಕತ್ತರಿಸಿ ಮಾರುವುದನ್ನು ತಡೆಯ ಬೇಕೆಂದು ಸೂಚಿಸಲಾಗಿದೆ. ಜನ ನಿಬಿಡ ಪ್ರದೇಶಗಳಿಗೆ ತೆರಳದಂತೆಯೂ, ಮಕ್ಕ ಳನ್ನು ಮಾರುಕಟ್ಟೆಗಳಿಗೆ ಕರೆತರದಂತೆಯೂ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಸೋಮವಾರಪೇಟೆ ಪಟ್ಟಣದಲ್ಲಿ ನಡೆಯಬೇಕಿದ್ದ ವಾರದ ಸಂತೆ ಯನ್ನು ಬಂದ್ ಮಾಡಿ ತಾಲೂಕು ತಹಶೀ ಲ್ದಾರ್ ಗೋವಿಂದರಾಜು ಆದೇಶ ನೀಡಿದ್ದಾರೆ.

ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಕೂಡ ಪತ್ತೆ ಹಚ್ಟಿ ತಪಾಸಣೆ ಮಾಡುವ ಕಾರ್ಯ ವನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ. ಅದರಂತೆ ಶನಿವಾರ ಸಂಜೆಯವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 32, ವಿರಾಜ ಪೇಟೆ ತಾಲೂಕಿನಲ್ಲಿ 23 ಮತ್ತು ಸೋಮ ವಾರಪೇಟೆ ತಾಲೂಕಿನಲ್ಲಿ 11 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 65 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯ ವ್ಯವಸ್ಥೆ ಮಾಡಲಾಗಿದೆ. 1 ಸೋಂಕು ತಗುಲಿರುವ ಶಂಕೆ ಇರುವ ಪ್ರಕರಣದಲ್ಲಿ ಮಾತ್ರ ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸ ಲಾಗುತ್ತಿದೆ. ಸೋಂಕು ತಗುಲಿರುವ ಶಂಕೆ ಇರುವ ಪ್ರಕರಣದ ವೈದ್ಯಕೀಯ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದ ನಾಗರಹೊಳೆ ಬಂದ್
ಮಡಿಕೇರಿ,ಮಾ.15-ಕೊರೊನಾ ಸೋಂಕು ಹರಡುವ ಭೀತಿ ಇರುವ ಹಿನ್ನಲೆಯಲ್ಲಿ ನಾಗರಹೊಳೆಯ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಈ ಬಗ್ಗೆ ಮೈಸೂರು ಮತ್ತು ಕೊಡಗು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಸೂಚನೆಯ ಪ್ರಕಾರ ಹುಣಸುರು ಉಪ ವಲಯ ಅರಣ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರಕಾರ ಮಾ.16ರಿಂದ 23ರ ವರೆಗೆ ಈ ನಿರ್ಬಂಧ ಮುಂದುವರಿಯುತ್ತದೆ. ಈ ಅವಧಿಯಲ್ಲಿ ವನ್ಯಧಾಮಕ್ಕೆ ಪ್ರವಾಸಿಗರು ಆಗಮಿಸದಂತೆ ಸೂಚಿಸಲಾಗಿದ್ದು, ವಿಶ್ರಾಂತಿ ಗೃಹ ಮತ್ತು ಡಾರ್ಮೆಂಟರಿಗಳು ಕೂಡ ಮುಚ್ಚಲಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪರೀಕ್ಷೆ ಮುಂದೂಡಿಕೆ
ಕೊರೊನಾ ಸೋಂಕು ಹರಡುವುದರಿಂದ ಮಕ್ಕಳನ್ನು ರಕ್ಷಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ 7ರಿಂದ 9ನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ಮಾ.31ರ ವರೆಗೆ ಮುಂದೂಡಿದೆ. ಪರೀಕ್ಷೆ ನಡೆಯುವ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿರುವ ಇಲಾಖೆ, ಅಲ್ಲಿಯವರೆಗೆ ಪರೀಕ್ಷಾ ಸಿದ್ಧತೆಯ ರಜೆ ಮುಂದುವರಿಯುವುದಾಗಿ ಹೇಳಿದೆ. 10ನೇ ತರಗತಿಯ ಪರೀಕ್ಷೆಗಳನ್ನು ಈಗಾಗಲೇ ನಿಗಧಿ ಮಾಡಲಾಗಿರುವ ದಿನಾಂಕಗಳಂದು ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Translate »