ಕೊರೊನಾ ವೇಳೆ ಸೇವೆ; ಟಿವಿ ಕ್ಯಾಮರಾಮನ್, ಪತ್ರಿಕಾ ಛಾಯಾಗ್ರಾಹಕರಿಗೆ  ಸನ್ಮಾನ
ಮೈಸೂರು

ಕೊರೊನಾ ವೇಳೆ ಸೇವೆ; ಟಿವಿ ಕ್ಯಾಮರಾಮನ್, ಪತ್ರಿಕಾ ಛಾಯಾಗ್ರಾಹಕರಿಗೆ  ಸನ್ಮಾನ

September 20, 2020

ಮೈಸೂರು, ಸೆ.19 (ಎಂಟಿವೈ)- ಕೊರೊನಾ ಭೀತಿ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ಸುದ್ದಿವಾಹಿನಿಗಳ ವಿಡಿಯೋ ಗ್ರಾಫರ್ಸ್ ಹಾಗೂ ಪತ್ರಿಕೆಗಳ ಛಾಯಾ ಗ್ರಾಹಕರಿಗೆ ಬಿಜೆಪಿ ಮೈಸೂರು ನಗರ ಮಾಧ್ಯಮ ಘಟಕದಿಂದ ಸನ್ಮಾನಿಸಲಾಯಿತು.

ಮೈಸೂರಿನ ಗನ್‍ಹೌಸ್ ಬಳಿಯ ಶಂಕರ ಮಠ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ ನಡೆದ `ಮಾಧÀ್ಯಮ ಸೇನಾನಿಗಳಿಗೆ ಅಭಿ ನಂದÀನೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಸನ್ಮಾನಿಸಿ, ಅಭಿನಂದಿಸಿದರು. ಕೊರೊನಾ ವೇಳೆ ಜನಜಾಗೃತಿಗೆ ಪತ್ರಕರ್ತರ ಸೇವೆ ಶ್ಲಾಘನೀಯ. ಅವರ ಸೇವೆ ಗುರುತಿಸಿ ಸನ್ಮಾನಿ ಸುತ್ತಿರುವುದು ಒಳ್ಳೆ ಬೆಳವಣಿಗೆ ಎಂದರು.

ಕೊರೊನಾ ಸಂದರ್ಭ ತಮ್ಮ ಆರೋಗ್ಯ ವನ್ನೂ ಲೆಕ್ಕಿಸದೆ ಮಾಧ್ಯಮದ ಫೆÇೀಟೋ ಗ್ರಾಫರ್, ವಿಡಿಯೋಗ್ರಾಫರ್ಸ್ ದುಡಿ ಯುತ್ತಿದ್ದಾರೆ. ಸುದ್ದಿವಾಹಿನಿ ಕ್ಯಾಮರಾ ಮೆನ್‍ಗಳು ಕಾರ್ಯಕ್ರಮಗಳ ನೇರ ಪ್ರಸಾ ರಕ್ಕೆ ಬಹಳ ಶ್ರಮಿಸಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಪ್ರಶಂಸಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮಾತನಾಡಿ, ಪತ್ರಕರ್ತರ ಕೆಲಸವನ್ನು ಬಿಜೆಪಿ ಗುರುತಿಸಿರುವುದು ಸಂತಸದ ವಿಷಯ. ಸರ್ಕಾರ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರನ್ನು ಕೊರೊನಾ ವಾರಿಯರ್ಸ್ ಎಂದು ಗುರುತಿಸಿದೆ. ಪತ್ರಕರ್ತರನ್ನೂ ಕೊರೊನಾ ವಾರಿಯರ್ಸ್ ಎಂದು ಪರಿ ಗಣಿಸಬೇಕು. ಮಾಧ್ಯಮದವರು ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದಾಗ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿ. ಪತ್ರಕರ್ತರಿಗೆ ಆಸ್ಪತ್ರೆ ಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಿ ಎಂದು ಮನವಿ ಪತ್ರ ಸಲ್ಲಿಸಿದರು. ಕೊರೊನಾದಿಂದ ಮಾಧ್ಯಮ ಸಂಸ್ಥೆಗಳೂ ಸಂಕಷ್ಟಕ್ಕೆ ಸಿಲುಕಿವೆ. ಇದು ಪತ್ರಕರ್ತರ ಮೇಲೂ ದುಷ್ಪರಿಣಾಮ ಬೀರಿದೆ ಎಂದರು. ಶಾಸಕ ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ  ಶ್ರೀವತ್ಸ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಾ, ಮುಖಂಡರಾದ ಹೆಚ್.ಪಿ.ಗಿರಿಧರ್, ಪಾಲಿಕೆ ಮಾಜಿ ಸದಸ್ಯ ಎಂ.ಕೆ.ಶಂಕರ್, ರಮೇಶ್, ಕೇಬಲ್ ಮಹೇಶ್, ಜೋಗಿ ಮಂಜು, ಕಾರ್ಯಕ್ರಮದಲ್ಲಿದ್ದರು.

 

Translate »