55 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ 
ಮೈಸೂರು

55 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ 

September 20, 2020

ಮೈಸೂರು, ಸೆ.19(ಪಿಎಂ)- ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪಾಲಿಕೆಯ ವಾರ್ಡ್ 52 ಮತ್ತು 53ರಲ್ಲಿÀ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕ ಎಸ್.ಎ.ರಾಮದಾಸ್ ಶನಿವಾರ ಚಾಲನೆ ನೀಡಿದರು.

ಪಾಲಿಕೆ ಅನುದಾನದ 25 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಾರ್ಥ ನಗರದ ದಾಮೋ ದರ್ ಬಡಾವಣೆಯ ಒಳಚರಂಡಿ ಕಾಮ ಗಾರಿಗೆ ಇಲ್ಲಿನ ಮೆಗಾಡೈರಿ ಬಳಿ ಶಾಸ ಕರು ಗುದ್ದಲಿಪೂಜೆ ನೆರವೇರಿಸಿದರು. ಪಾಲಿಕೆ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ಜೆಸಿ ನಗರದ ಚಾಮುಂಡೇಶ್ವರಿ ದೇವಸ್ಥಾನ ಮುಂಭಾಗ ಶುದ್ಧ ಕುಡಿ ಯುವ ನೀರಿನ ಘಟಕ ನಿರ್ಮಾಣಕ್ಕೆ, 20 ಲಕ್ಷ ರೂ. ವೆಚ್ಚದಲ್ಲಿ ಜಾಕಿ ಕ್ವಾಟ್ರಸ್ ನಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮ ಗಾರಿಗೆ ಚಾಲನೆ ನೀಡಿದರು.

ಪಾಲಿಕೆ ಸದಸ್ಯರಾದ ಛಾಯಾದೇವಿ, ರೂಪಾ ಯೋಗೇಶ್ವರ್, ಮುಖಂಡರಾದ ವಿನಯ್ ಪಾಂಚಜನ್ಯ, ಪಟೇಲ್, ಚಿದಂ ಬರ್, ಮಹದೇವಸ್ವಾಮಿ, ನವೀನ್, ಪ್ರಸನ್ನ, ಹರೀಶ್, ಸಂತೋಷ್ ಮತ್ತಿತರರಿದ್ದರು.

 

 

Translate »