ಬೆಂಗಳೂರು, ಜೂ. 28- ರಾಜ್ಯದಲ್ಲಿ ಭಾನುವಾರ ಕೊರೊನಾ ಮಹಾಸ್ಫೋಟಗೊಂಡಿದ್ದು, 1267 ಮಂದಿಗೆ ಸೋಂಕು ತಗುಲಿದೆ. ರಾಜಧಾನಿ ಬೆಂಗಳೂರು ಒಂದರಲ್ಲೇ 783 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆ 13,190ಕ್ಕೆ ಏರಿಕೆಯಾಗಿದೆ. ಇಂದು 220 ಸೇರಿದಂತೆ ಈವರೆಗೆ 7507 ಮಂದಿ ಗುಣಮುಖ ರಾಗಿದ್ದು, ಉಳಿದ 5472 ಮಂದಿ ಸಕ್ರಿಯ ಸೋಂಕಿತರಿದ್ದಾರೆ.
ಮೈಸೂರಿನಲ್ಲಿ ಒಬ್ಬರು, ಬೆಂಗಳೂರಿನಲ್ಲಿ ಸಬ್ ಇನ್ಸ್‍ಪೆಕ್ಟರ್ ಸೇರಿದಂತೆ ಇಂದು 16 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. 243 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು, ಚಿಕಿತ್ಸೆ ನೀಡಲಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ 97, ಬಳ್ಳಾರಿ 71, ಉಡುಪಿ 40, ಕಲಬುರಗಿ-34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಧಾರವಾಡ ಮತ್ತು ಮೈಸೂರು ತಲಾ 18, ಬಾಗಲಕೋಟೆ 17, ಉತ್ತರ ಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್ ಮತ್ತು ಚಿತ್ರದುರ್ಗ ತಲಾ 7, ರಾಯಚೂರು, ಮಂಡ್ಯ ಮತ್ತು ದಾವಣಗೆರೆ ತಲಾ 6. ವಿಜಯಪುರ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು ತಲಾ 3, ತುಮಕೂರು 2, ಕೊಡಗು ಮತ್ತು ಯಾದಗಿರಿ ತಲಾ 1 ಪ್ರಕರಣ ದಾಖಲಾಗಿದೆ. ಸೋಂಕಿತರ ಪ್ರಥಮ ಸಂಪರ್ಕದ 19,195, ದ್ವಿತೀಯ ಸಂಪರ್ಕದ 16,314 ಮಂದಿ ಸೇರಿ ದಂತೆ 35,509 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.