ಮೈಸೂರು,ಜೂ.29(ಎಸ್‍ಪಿಎನ್)-ಮೈಸೂರಿನ ಶಾರದಾದೇವಿನಗರದ 2ನೇ ಕ್ರಾಸಿನ ಸೀಲ್‍ಡೌನ್ ಪ್ರದೇಶದ ನಿವಾಸಿ ಗಳಿಗೆ ನಗರ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ನೇತೃತ್ವದಲ್ಲಿ ಸೋಮವಾರ ದಿನಸಿ ಕಿಟ್ ವಿತರಿಸಲಾಯಿತು.
ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಶಾರದಾದೇವಿನಗರದ 2ನೇ ಕ್ರಾಸ್ ಅನ್ನು ಕಳೆದ 4 ದಿನಗಳ ಹಿಂದೆ ಕಂಟೇ ನ್ಮೆಂಟ್ ಜೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ ಝೋನ್‍ಗಳಲ್ಲಿ 13 ಕುಟುಂಬ ಗಳು ವಾಸವಿದ್ದು, ಇಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳಾದ 10 ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ ಹಾಗೂ ಇತರೆ ಪದಾರ್ಥಗಳನ್ನು ವಿತರಿಸಲಾಗಿದೆ. ಅಗತ್ಯವಿದ್ದರೆ, ಇಲ್ಲಿನ ನಿವಾಸಿ ಗಳಿಗೆ ಮತ್ತಷ್ಟು ಅಗತ್ಯ ವಸ್ತುಗಳು ಸೇರಿ ದಂತೆ ಇನ್ನಿತರೆ ಪದಾರ್ಥಗಳನ್ನು ನೀಡ ಲಾಗುವುದು. ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಹಸಿವಿ ನಿಂದ ವಿತರಿಸಲಾಗಿದೆ ಎಂದು ತಿಳಿಸಿದರು