ಕೊರೊನಾ ವೈರಸ್ ಸೋಂಕು ಹಿನ್ನೆಲೆ: ಪ್ರತೀ ಭಾನುವಾರ ಸಂತೆಪೇಟೆ, ಶಿವರಾಂಪೇಟೆಯ ಕೃತಕ ಆಭರಣ, ಬ್ಯಾಂಗಲ್ ಸ್ಟೋರ್ ಬಂದ್
ಮೈಸೂರು

ಕೊರೊನಾ ವೈರಸ್ ಸೋಂಕು ಹಿನ್ನೆಲೆ: ಪ್ರತೀ ಭಾನುವಾರ ಸಂತೆಪೇಟೆ, ಶಿವರಾಂಪೇಟೆಯ ಕೃತಕ ಆಭರಣ, ಬ್ಯಾಂಗಲ್ ಸ್ಟೋರ್ ಬಂದ್

June 7, 2020

ಸಗಟು ಮಾರಾಟಗಾರರ ನಿರ್ಧಾರ
ಮೈಸೂರು, ಜೂ.6(ಆರ್‍ಕೆ)-ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಮೈಸೂರಿನ ಸಂತೇಪೇಟೆ, ಶಿವರಾಂಪೇಟೆ, ಓಲ್ಡ್ ಬ್ಯಾಂಕ್ ರಸ್ತೆ, ಕೆ.ಟಿ.ಸ್ಟ್ರೀಟ್‍ನ ಬ್ಯಾಂಗಲ್ ಸ್ಟೋರ್, ಸ್ಟೇಷನರಿ, ಕೃತಕ ಆಭರಣಗಳ ಸಗಟು ವ್ಯಾಪಾ ರದ ಅಂಗಡಿಗಳನ್ನು ನಾಳೆ (ಜೂ.7)ಯಿಂದ ಪ್ರತೀ ಭಾನುವಾರ ಬಂದ್ ಮಾಡಲು ವರ್ತ ಕರು ನಿರ್ಧರಿಸಿದ್ದಾರೆ. ಶುಕ್ರವಾರ ಮೈಸೂರಿನ ಶಿವರಾಂಪೇಟೆಯ ಪ್ರವೀಣ್ ಜೈನ್ ಅವರ ಅಂಗಡಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು ಎಂದು ಸಗಟು ಮಾರಾಟಗಾರ ಗೌರವ್ ಜೈನ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಅದರಂತೆ ಬ್ಯಾಗ್, ಪೇಪರ್, ಲೇಖನ ಸಾಮಗ್ರಿ, ಇಮಿಟೇಷನ್ ಜುವೆಲರಿ, ಬ್ಯಾಂಗಲ್ಸ್, ಕಾಸ್ಮೆಟಿಕ್ಸ್, ಟೈಲರಿಂಗ್ ಮೆಟೀರಿಯಲ್ಸ್, ಟಾಯ್ಸ್, ವೆಡ್ಡಿಂಗ್ ಇನ್ವಿಟೇಷನ್, ಪ್ಲಾಸ್ಟಿಕ್ ಐಟಂಗಳ ಸಗಟು ಮಾರಾಟದ ಅಂಗಡಿಗಳನ್ನು ಪ್ರತೀ ಭಾನುವಾರ ಬಂದ್ ಮಾಡಲು ವರ್ತಕರು ನಿರ್ಧರಿಸಿದ್ದಾರೆ. ಆ ಭಾಗದ ಇತರ ಅಂಗಡಿ ಮಾಲೀಕರನ್ನೂ ವ್ಯಾಪಾರ ಬಂದ್ ಮಾಡಿ ಸಹಕರಿಸುವಂತೆ ಕೇಳಿಕೊಳ್ಳಲಾಗಿದೆ. ನಾವಂತೂ ಪ್ರತೀ ಭಾನು ವಾರ ಅಂಗಡಿ ತೆರೆಯದಿರಲು ನಿರ್ಧಾರ ಕೈಗೊಂಡಿದ್ದೇವೆ ಎಂದು ಗೌರವ್ ಜೈನ್ ತಿಳಿಸಿದರು.

.

Translate »