ಜಿಲ್ಲೆಯಲ್ಲಿ ವರ್ಗಾವಣೆ ದಂಧೆ
ಮೈಸೂರು

ಜಿಲ್ಲೆಯಲ್ಲಿ ವರ್ಗಾವಣೆ ದಂಧೆ

June 6, 2020

ಮೈಸೂರು, ಜೂ.5(ಆರ್‍ಕೆಬಿ)- ಮೈಸೂರು ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ. ಒಬ್ಬರು ಆಕ್ಟಿವ್, ಮತ್ತೊಬ್ಬರು ಅಧಿಕೃತ. ಅಧಿಕೃತ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದ ರೀತಿಯಲ್ಲಿ ವರ್ಗಾವಣೆ ದಂಧೆ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಮಾಜಿ ಸಚಿವ ಹೆಚ್.ವಿಶ್ವ ನಾಥ್ ಹೆಸರು ಹೇಳದೇ ಟೀಕಿಸಿದರು.

ಮೈಸೂರಿನ ರಮಾವಿಲಾಸ ರಸ್ತೆಯ ಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆ ಸಿದ ಅವರು, ವರ್ಗಾವಣೆ ದಂಧೆ ಎಷ್ಟರ ಮಟ್ಟಿಗಿದೆ ಎಂದರೆ, 9 ತಿಂಗಳ ಹಿಂದಷ್ಟೇ ಮೈಸೂರಿಗೆ ವರ್ಗಾವಣೆಗೊಂಡಿದ್ದ ಅಬ ಕಾರಿ ಡಿಸಿ ಏಕಾಏಕಿ ವರ್ಗಾವಣೆಯಾದರು. ಈ ವರ್ಗಾವಣೆಯಲ್ಲಿ ಹಣಕಾಸಿನ ವ್ಯವ ಹಾರ ನಡೆದಿದೆ ಎಂಬ ಮಾಹಿತಿ ಇದೆ. ಲೋಕೋಪಯೋಗಿ ಇಲಾಖೆಯ ಎಇ ಹುದ್ದೆಗೂ ಇತ್ತೀಚೆಗೆ ನೇಮಕವಾಗಿದ್ದು, ಲಕ್ಷಗಟ್ಟಲೆ ಅವ್ಯವಹಾರ ನಡೆದಿರುವ ಮಾಹಿತಿ ಇದೆ. ಈ ಹಣ ಯಾರಿಗೆ ಹೋಗಿದೆ ಎಂಬುದು ಬಹಿರಂಗ ವಾಗ ಬೇಕು ಎಂದು ಆಗ್ರಹಿಸಿದರು.

90 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದ ಹುಣಸೂರಿನ ಜನತೆ ಮತ್ತೆ ಅವರನ್ನು ಅದರ ಅರ್ಧದಷ್ಟು ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರ ಹೆಸರು ಹೇಳಲು ನಾನು ಇಚ್ಛಿಸುವುದಿಲ್ಲ. ರೈಸ್‍ಮಿಲ್‍ಗಳಿಂದ ಲಾರಿಗಟ್ಟಲೆ ಅಕ್ಕಿ ಸಂಗ್ರ ಹಿಸಿದ್ದರು. ಅದು ಎಲ್ಲಿ ಹೋಯಿತು ಎಂಬುದನ್ನು ಬಹಿರಂಗಪಡಿಸಬೇಕು. ಈ ಕುರಿತು ತಾವು ಜಿಲ್ಲಾಧಿಕಾರಿಗೆ ಪತ್ರ ಬರೆದಿ ದ್ದೇನೆ. ಮಾಹಿತಿ ಬಹಿರಂಗಗೊಳ್ಳದಿದ್ದರೆ ದಾಖಲೆ ಬಿಡುಗಡೆ ಮಾಡುವೆ ಎಂದು ಎಚ್ಚ ರಿಕೆ ನೀಡಿದರು. ಸಮ್ಮಿಶ್ರ ಸರ್ಕಾರ ಇದ್ದಿ ದ್ದರೆ 50 ಸಾವಿರ ಜನ ಸಾಯಬೇಕಿತ್ತು ಎಂಬ ಹೇಳಿಕೆ ನೀಡಿದವರು ಮಾಜಿ ಮುಖ್ಯಮಂತ್ರಿ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸ ಬೇಕು. ಕೊಡಗಿನಲ್ಲಿ ನಿನ್ನೆ ಕೊಟ್ಟ ಮನೆ ಗಳ ಹಿಂದೆ ಯಾರ ಶ್ರಮ ಇದೆ ಎಂಬುದು ತಿಳಿದಿದ್ದವರು ಅವರ ಹೆಸರೇಳಲಿಲ್ಲ ಎಂದು ಸಾರಾ ಕಿಡಿಕಾರಿದರು.

ಜೆಡಿಎಸ್ ನಗರಾಧ್ಯಕ್ಷ ಚೆಲುವೇಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »