ಕೊರೊನಾ ಸೋಂಕಿನ ಹಾವಳಿ: ಸಮುದಾಯ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿರುವ ಜನ
ಮೈಸೂರು

ಕೊರೊನಾ ಸೋಂಕಿನ ಹಾವಳಿ: ಸಮುದಾಯ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿರುವ ಜನ

June 30, 2020

ಮೈಸೂರು, ಜೂ.29(ಆರ್‍ಕೆ)- ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡು ತ್ತಿರುವುದರಿಂದ ತೀವ್ರ ಆತಂಕಗೊಂಡಿ ರುವ ಸಾರ್ವಜನಿಕರು ಸಮುದಾಯ ಸಾರಿಗೆ ಬಳಸಲು ಹಿಂಜರಿಯುತ್ತಿದ್ದಾರೆ.

ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವ ಜನರಿಂದ ಸೋಂಕು ಹರಡುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಮಾತ್ರವಲ್ಲದೆ ಆರೋಗ್ಯ ಇಲಾಖೆ ನೀಡುತ್ತಿರುವ ಹೆಲ್ತ್ ಬುಲೆಟಿನ್‍ನಲ್ಲಿ ಕೂಡ ಹೊರ ರಾಜ್ಯದಿಂದ ಬಂದವರಿಗೆ ಹೆಚ್ಚಾಗಿ ಸೋಂಕು ತಗುಲಿರುವುದನ್ನು ಉಲ್ಲೇಖಿಸ ಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಹೊರ ಜಿಲ್ಲೆಯವರನ್ನು ಕಂಡರೆ ದೂರ ಉಳಿಯು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ಎಚ್ಚರಿಕಾ ನಡೆಯಾಗಿ ಸಾಮೂ ಹಿಕ ಸಾರಿಗೆಗಳಾದ ಬಸ್, ರೈಲು, ಟ್ಯಾಕ್ಸಿ, ಆಟೋ ಮುಂತಾದವುಗಳಲ್ಲಿ ಪ್ರಯಾಣಿ ಸಲು ಜನರು ಹಿಂಜರಿಯುತ್ತಿದ್ದಾರೆ. ತಮಗೆ ಹಣಕಾಸಿನ ಮುಗ್ಗಟ್ಟಿದ್ದರೂ ಕೂಡ ಸ್ವಂತ ವಾಹನ ಹೊಂದುವತ್ತ ಆಸಕ್ತಿ ತೋರಿಸುತ್ತಿದ್ದಾರೆ.

ಮೈಸೂರು ಮತ್ತು ಬೆಂಗಳೂರು ನಡುವೆ 14 ಬೋಗಿಗಳನ್ನೊಳಗೊಂಡ 1650 ಆಸನ ಗಳ ಸಾಮಥ್ರ್ಯವಿರುವ 1 ರೈಲು ಪ್ರತಿನಿತ್ಯ ಸಂಚರಿಸುತ್ತಿದೆ. ಈ ಹಿಂದೆ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಪ್ರತಿ ರೈಲು ತುಂಬಿ ತುಳುಕುತ್ತಿದ್ದವು. ಆದರೆ ಈಗ ಸಂಚರಿಸುತ್ತಿರುವ ಏಕೈಕ ರೈಲಿನಲ್ಲಿ ಕೇವಲ 150 ಮಂದಿ ಮಾತ್ರ ಪ್ರಯಾಣಿಸುತ್ತಿದ್ದಾರೆ. ಲಾಕ್‍ಡೌನ್‍ಗೂ ಮುನ್ನ ಪ್ರತಿದಿನ 670 ಕೆಎಸ್‍ಆರ್‍ಟಿಸಿ ಬಸ್ಸುಗಳು ಸಂಚರಿಸುತ್ತಿ ದ್ದವು. ಈ ಬಸ್‍ಗಳು ಬಹುತೇಕ ಭರ್ತಿ ಯಾಗುತ್ತಿದ್ದವು. ಆದರೆ ಲಾಕ್‍ಡೌನ್ ನಂತರ ಶೇ.50ರಷ್ಟು ಮಾತ್ರ ಪ್ರಯಾಣಿಕ ರೊಂದಿಗೆ ಕೇವಲ 260 ಬಸ್‍ಗಳು ಮೈಸೂರು ಗ್ರಾಮಾಂತರ ಭಾಗದಲ್ಲಿ ಸಂಚ ರಿಸುತ್ತಿವೆ. ಈ ಬಸ್‍ಗಳೂ ಕೂಡ ಪ್ರಯಾ ಣಿಕರ ಕೊರತೆಯನ್ನು ಎದುರಿಸುತ್ತಿವೆ. ಅದೇ ರೀತಿ ಆಟೋ ಮತ್ತು ಟ್ಯಾಕ್ಸಿಗಳೂ ಪ್ರಯಾಣಿಕರಿಲ್ಲದೆ ನಿಂತಲ್ಲೇ ನಿಂತಿವೆ. ಇದು ಸಾರ್ವಜನಿಕರು ಸಮುದಾಯ ಸಾರಿಗೆಯಿಂದ ಸದ್ಯಕ್ಕೆ ದೂರ ಸರಿಯು ತ್ತಿರುವುದರ ಸೂಚಕವಾಗಿದೆ.

ಮತ್ತೊಂದೆಡೆ ಹಣದ ಮುಗ್ಗಟ್ಟಿದ್ದರೂ ಸ್ವಂತ ವಾಹನ ಖರೀದಿಸಲು ಜನರು ಆಸಕ್ತಿ ತೋರುತ್ತಿದ್ದು, ಹೊಸ ವಾಹನ ಖರೀದಿಸಲು ಶಕ್ತಿ ಇಲ್ಲದವರು ಹಳೆ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಕುಟುಂಬ ಸದಸ್ಯರೆಲ್ಲಾ ಪ್ರಯಾಣಿಸಲು ಅನುಕೂಲವಾಗುವಂತೆ ಕಾರು ಖರೀದಿಗೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ. ಮೈಸೂರಿನ ತಿಲಕ್ ನಗರ, ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆ, ಗೋಕುಲಂ ಮುಖ್ಯ ರಸ್ತೆ, ಅಗ್ರಹಾರ ಸರ್ಕಲ್ ಸುತ್ತಮುತ್ತ, ಕೃಷ್ಣಮೂರ್ತಿಪುರಂ, ಬೋಗಾದಿ ರಸ್ತೆ, ಹುಣಸೂರು ರಸ್ತೆ, ಮಂಡಿ ಮೊಹಲ್ಲಾ, ಮಿಷನ್ ಆಸ್ಪತ್ರೆ ರಸ್ತೆ, ಸಯ್ಯಾಜಿ ರಾವ್ ರಸ್ತೆಯ ಹೈವೆ ಸರ್ಕಲ್ ಮುಂತಾದ ಕಡೆಗಳಲ್ಲಿನ ಉಪಯೋಗದ ಹಳೆ ವಾಹನ ಗಳ ಮಾರಾಟ ಮಳಿಗೆಗಳಿಗೆ ಜನರು ಎಡ ತಾಕುತ್ತಿರುವುದು ಕಂಡು ಬರುತ್ತಿದೆ.

.
ಲಾಕ್‍ಡೌನ್ ನಿರ್ಬಂಧ ಸಡಿಲಗೊಂಡಿದ್ದರೂ ಇನ್ನಿತರ ವಾಣಿಜ್ಯ ವ್ಯವಹಾರ ಹಿಂದಿನಂತೆ ನಡೆಯದೆ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದರೆ, ಹಳೆ ಕಾರುಗಳ ಮಾರಾಟ ಮಳಿಗೆಗಳಲ್ಲಿ ಖರೀದಿ ಮತ್ತು ವಿಚಾರಣೆ ಈ ಹಿಂದಿ ಗಿಂತಲೂ ಹೆಚ್ಚಾಗಿದೆ ಎಂದು ಯೂಸ್ಡ್ ಕಾರ್ ಡೀಲರ್‍ವೊಬ್ಬರು ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಭಯದಿಂದಾಗಿ ಜನರು ಸಾರ್ವಜನಿಕ ಸಾರಿಗೆ ಬಳಕೆಗೆ ಸದ್ಯಕ್ಕೆ ಹಿಂದೇಟು ಹಾಕುತ್ತಿರುವಂತಿದೆ. ಮಹಿಳೆಯರೂ ಸೇರಿದಂತೆ ಹಲವರು 2ರಿಂದ 4 ಲಕ್ಷ ರೂ. ಒಳಗಿನ ಬೆಲೆಯ ವಿವಿಧ ಕಾರುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಕೆಲವರು ಒಡವೆಗಳನ್ನು ಅಡವಿಟ್ಟಿಯೂ ಕಾರ್‍ಗಳನ್ನು ಖರೀದಿಸುತ್ತಿದ್ದಾರೆ. ಕಳೆದ ಶನಿವಾರವೂ 4 ಕಾರ್‍ಗಳು ಮಾರಾಟ ಆದವು. – ಇರ್ಫಾನ್ ಷರೀಫ್, ಯೂಸ್ಡ್ ಕಾರ್ ಷೋರೂಂ ಮಾಲೀಕ

ಲಾಕ್‍ಡೌನ್ ತೆರವು ನಂತರ 5 ಲಕ್ಷ ರೂ. ಒಳಗಿನ ಕಾರ್‍ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಯಾರೂ ಅಧಿಕ ಬೆಲೆಯ ಐಷಾರಾಮಿ ಕಾರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಕೊರೊನಾ ಸೋಂಕಿಗೆ ಹೆದರಿ ಜನರು ಸಾರ್ವಜನಿಕ ಸಾರಿಗೆ ಉಪಯೋಗಿಸುತ್ತಿಲ್ಲ. ಆದ್ದರಿಂದ ಕಡಿಮೆ ಬಜೆಟ್ಟಿನ ಯೂಸ್ಡ್ ಕಾರ್ ಹೊಂದಲು ಪ್ರಯತ್ನಿಸುತ್ತಿದ್ದಾರೆ. – ಅಮೀನ್, ಯೂಸ್ಡ್ ಕಾರ್ ಷೋರೂಂ ಮಾಲೀಕ.