ಮೈಸೂರು ಜಿಲ್ಲೆಯಲ್ಲಿ ಗುರುವಾರ 19 ಮಂದಿಗೆ ಕೊರೊನಾ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಗುರುವಾರ 19 ಮಂದಿಗೆ ಕೊರೊನಾ ಸೋಂಕು

January 29, 2021

ಮೈಸೂರು,ಜ.28(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗು ತ್ತಿದ್ದು, ಉತ್ತರ ಕರ್ನಾಟಕದ 3 ಜಿಲ್ಲೆಗಳಲ್ಲಿ ಇಂದು ಒಂದೂ ಕೊರೊನಾ ಪ್ರಕರಣ ದಾಖಲಾಗಿಲ್ಲ. ರಾಜ್ಯದಲ್ಲಿ ಕೊರೊನಾದಿಂದ ಸಾವಿಗೀಡಾಗುವವರ ಸಂಖ್ಯೆಯೂ ಬಹಳ ಕಡಿಮೆಯಾಗಿದೆ. ಗುರುವಾರ ರಾಜ್ಯದಲ್ಲಿ ಕೊರೊನಾದಿಂದ ಇಬ್ಬರಷ್ಟೇ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಗುರುವಾರ 19 ಮಂದಿಗೆ ಮಾತ್ರ ಸೋಂಕು ತಗುಲಿದೆ. 26 ಸೋಂಕಿತರು ಗುಣ ಕಂಡಿದ್ದಾರೆ. ಇಂದು ಕೊರೊನಾದಿಂದ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಕೊರೊನಾ ಸೋಂಕಿ ತರ ಒಟ್ಟು ಸಂಖ್ಯೆ 53,318ಕ್ಕೆ ಏರಿಕೆಯಾಗಿದೆ. ಇದೇ ವೇಳೆ, 52,080 ಮಂದಿಗೆ ಗುಣವಾಗಿದೆ. ಈವರೆಗೆ ಕೊರೊನಾಗೆ 1,026 ಮಂದಿ ಬಲಿಯಾಗಿದ್ದಾರೆ. 212 ಮಂದಿ ಇನ್ನೂ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 64 ಮಂದಿ ಸೋಂಕಿತರು ಮನೆಯಲ್ಲೇ ಶುಶ್ರೂಷೆ ಪಡೆಯು ತ್ತಿದ್ದರೆ, 42 ಮಂದಿ ಸರ್ಕಾರಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ, 106 ಮಂದಿ ಖಾಸಗಿ ಆಸ್ಪತ್ರೆಗಳು ಹಾಗೂ ನಿಗಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಖಾಸಗಿ ಲ್ಯಾಬ್‍ಗಳಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿ ಕೊಂಡ 59,991 ಮಂದಿ ಸೇರಿ, ಈವರೆಗೆ ಒಟ್ಟು 7,96,584 ಮಂದಿಗೆ ಪರೀಕ್ಷೆ ಮಾಡಿದಂತಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿ ಗುರುವಾರ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಗದಗ, ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ ಕೊರೊನಾದ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಇನ್ನು ಬಾಗಲಕೋಟೆ 4, ಬಳ್ಳಾರಿ 2, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 311, ಬೀದರ್ 5, ಚಾಮರಾಜನಗರ 5, ಚಿಕ್ಕಬಳ್ಳಾ ಪುರ 15, ಚಿಕ್ಕಮಗಳೂರು 2, ಚಿತ್ರದುರ್ಗ 15, ದಕ್ಷಿಣ ಕನ್ನಡ 34, ದಾವಣಗೆರೆ 3, ಧಾರವಾಡ 5, ಹಾಸನ 12, ಕಲಬುರಗಿ 16, ಕೊಡಗು 22, ಕೋಲಾರ 9, ಮಂಡ್ಯ 4, ಮೈಸೂರು 19, ಶಿವಮೊಗ್ಗ 10, ತುಮ ಕೂರು 18, ಉಡುಪಿ 13, ಉತ್ತರ ಕನ್ನಡ 9, ವಿಜಯ ಪುರ 2, ಯಾದಗಿರಿ 2 ಮಂದಿ ಸೇರಿ ರಾಜ್ಯದಲ್ಲಿ ಗುರುವಾರ 550 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. 664 ಸೋಂಕಿತರು ಗುಣ ಹೊಂದಿ ಆಸ್ಪತ್ರೆ ಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ರಾಜ್ಯ ದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 9,37, 933ಕ್ಕೆ ಏರಿಕೆಯಾಗಿದೆ. 9,19,503 ಸೋಂಕಿತರು ಗುಣ ಕಂಡಂತಾಗಿದೆ. ಇಂದು ವರದಿಯಾದ 2 ಸಾವಿನ ಪ್ರಕರಣ ಸೇರಿ ಈವರೆಗೆ 12,209 ಮಂದಿ ಮೃತಪಟ್ಟಂತಾಗಿದೆ. ಇನ್ನೂ 6,202 ಸಕ್ರಿಯ ಪ್ರಕರಣಗಳಿವೆ.

 

Translate »