ಫೆ.19, ಸಾಮೂಹಿಕ ಸೂರ್ಯ ನಮಸ್ಕಾರ
ಮೈಸೂರು

ಫೆ.19, ಸಾಮೂಹಿಕ ಸೂರ್ಯ ನಮಸ್ಕಾರ

January 30, 2021

ಮೈಸೂರು, ಜ.29-ರಥಸಪ್ತಮಿ ಅಂಗವಾಗಿ ಫೆ.19ರಂದು ಬೆಳಗ್ಗೆ 5.45ರಿಂದ 7.15 ರವರೆಗೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ 108 ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೈಸೂರಿನ ಯೋಗ ಒಕ್ಕೂಟದಿಂದ ಏರ್ಪಡಿಸಲಿ ರುವ ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಎಲ್ಲಾ ಯೋಗ ಸಂಸ್ಥೆಗಳು, ಯೋಗ ಫೆಡರೇಷನ್ ಆಫ್ ಮೈಸೂರು ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲಾ ಯೋಗಾಭಿಮಾನಿಗಳು ಭಾಗವಹಿಸಲಿದ್ದಾರೆ. ಕಾರ್ಯ ಕ್ರಮದಲ್ಲಿ ಭಾಗವಹಿಸುವ ಎಲ್ಲಾ ಯೋಗಪಟುಗಳಿಗೂ ಉಚಿತ ಪ್ರವೇಶ ವಿದ್ದು, ಎಲ್ಲರಿಗೂ ಪ್ರಾತಿನಿಧ್ಯ ಪತ್ರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Translate »