ಬೈಕಿಗೆ ಗೂಡ್ಸ್ ವಾಹನ ಡಿಕ್ಕಿ; ಯುವಕ ಸಾವು
ಮೈಸೂರು

ಬೈಕಿಗೆ ಗೂಡ್ಸ್ ವಾಹನ ಡಿಕ್ಕಿ; ಯುವಕ ಸಾವು

January 30, 2021

ಮೈಸೂರು,ಜ.29(ಆರ್‍ಕೆ)-ಸರಕು ಸಾಗಣೆ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನ ಪ್ಪಿದ್ದು, ಮತ್ತೋರ್ವ ಗಾಯಗೊಂಡಿ ರುವ ಘಟನೆ ಮೈಸೂರಿನ ಹುಣಸೂರು ರಸ್ತೆಯ ಹಳೇ ತಹಸೀಲ್ದಾರ್ ಕಚೇರಿ ಬಳಿ ಗುರುವಾರ ಮಧ್ಯರಾತ್ರಿ ಸಂಭವಿ ಸಿದೆ. ಹಾಸನದ ವಿಶ್ವೇಶ್ವರನಗರ ನಿವಾಸಿ ಸುಪ್ರೀತ ಜೈನ್ (26) ಸಾವನ್ನಪ್ಪಿದವರು. ಗಾಯಗೊಂಡಿರುವ ಬೈಕ್ ಹಿಂಬದಿ ಸವಾರ ರಕ್ಷಿತ್‍ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅನಿಮೇಷನ್ ವಿದ್ಯಾರ್ಥಿಯಾದ ಸುಪ್ರೀತ ಜೈನ್ ಅಪಾಚಿ ಬೈಕ್ (ಕೆಎ 13, ಇಎಂ 3012)ನಲ್ಲಿ ಎಸ್‍ಜೆ ಸಿಇ ಕಡೆಯಿಂದ ಬರುತ್ತಿದ್ದಾಗ ಬಿ.ಎಂ. ಆಸ್ಪತ್ರೆ ಕಡೆಯಿಂದ ಹಿನಕಲ್ ಕಡೆಗೆ ಹೋಗುತ್ತಿದ್ದ ಸರಕು ಸಾಗಣೆ ವಾಹನ (ಕೆಎ 55, 7882) ಹಳೇ ತಹಸೀಲ್ದಾರರ ಕಚೇರಿ ಜಂಕ್ಷನ್‍ನಲ್ಲಿ ಮಧ್ಯರಾತ್ರಿ 12.30 ಗಂಟೆಯಲ್ಲಿ ಡಿಕ್ಕಿ ಹೊಡೆದು, ಬೈಕ್ ಅನ್ನು ಸ್ವಲ್ಪ ದೂರದವರೆಗೆ ಎಳೆದೊಯ್ಯಿತು. ತೀವ್ರವಾಗಿ ಗಾಯ ಗೊಂಡಿದ್ದ ಸುಪ್ರೀತ ಜೈನ್‍ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿ ಕೊಂಡಿರುವ ವಿವಿ ಪುರಂ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಅರುಣ ಕುಮಾರಿ ತಿಳಿಸಿದರು.

 

 

Translate »