ಸರ್ಕಾರಿ ನೌಕರಿಗೆ ಕಾಯದೆ ಉದ್ಯೋಗ ಸೃಷ್ಟಿಸಿಕೊಳ್ಳಿ ಯುವಜನರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕರೆ
ಮೈಸೂರು

ಸರ್ಕಾರಿ ನೌಕರಿಗೆ ಕಾಯದೆ ಉದ್ಯೋಗ ಸೃಷ್ಟಿಸಿಕೊಳ್ಳಿ ಯುವಜನರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕರೆ

January 30, 2021

ಮೈಸೂರು,ಜ.29(ಆರ್‍ಕೆಬಿ)-ಯಾರೊಬ್ಬರೂ ಸರ್ಕಾರಿ ನೌಕರಿ ಗಾಗಿ ಕಾಯುವ ಬದಲಿಗೆ ನಿಮಗೆ ನೀವೇ ಉದ್ಯೋಗ ಸೃಷ್ಟಿಸಿಕೊಳ್ಳ ಬೇಕು. ಇತರರಿಗೂ ಉದ್ಯೋಗ ನೀಡುವಂತ ಕೌಶಲ್ಯ ಬೆಳೆಸಿ ಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಯುವಜನತೆಗೆ ಕರೆ ನೀಡಿದರು.

ಮೈಸೂರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂ ಗಣದಲ್ಲಿ ಶುಕ್ರವಾರ ನೆಹರು ಯುವ ಕೇಂದ್ರ, ಎಜ್ಯುಕೇರ್-ಐಟಿಇಎಸ್ ಸಹಯೋಗದಲ್ಲಿ ಏರ್ಪಡಿಸಿದ್ದ `ನೆರೆಹೊರೆ ಯುವ ಸಂಸತ್ತು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಆಯೋಜಿಸಿರುವ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮಗಳನ್ನು ಯುವ ಜನರು ಸದ್ಬಳಕೆ ಮಡಿಕೊಳ್ಳುತ್ತಿಲ್ಲ ಎಂದು ಬೇಸರ ಶಿವಣ್ಣ ವ್ಯಕ್ತಪಡಿಸಿದರು.

ಯುವಜನರು ಸರ್ಕಾರಿ ಉದ್ಯೋಗವನ್ನೇ ನಂಬಿ ಕೂರ ಬಾರದು. ಯುವ ಸಮುದಾಯ ತಾವೇ ಉದ್ಯಮಿಗಳಾಗಬೇಕು. ಉದ್ಯೋಗ ಸೃಷ್ಟಿಯೇ ಅವರ ಗುರಿಯಾಗಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.
ತಾವು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಬಳಿಕ ಅನೇಕ ಪೌರ ಕಾರ್ಮಿಕರ ಕಾಲೋನಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕೆಲವು ವಿದ್ಯಾರ್ಥಿಗಳು ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವುದು ಕಂಡು ಬಂದಿತು. ಕಡುಬಡವರ ಮಕ್ಕಳು ಉನ್ನತ ಹುದ್ದೆ ಪಡೆಯಲು ಶ್ರಮಿಸಬೇಕು. ಇದಕ್ಕೆ ಸಹಕಾರ ಸಿಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಲೋಕಾಯುಕ್ತ ಎಸ್ಪಿ ಪಿ.ವಿ. ಸ್ನೇಹ, ಜಿ¯್ಲÁ ಕೌಶಲ್ಯಾಭಿವೃದ್ಧಿ ಅಧಿಕಾರಿ ಎನ್.ಎಸ್.ಶಿವಣ್ಣ, ರಾಜ್ಯ ಒಕ್ಕಲಿಗರ ವೇದಿಕೆಯ ಎಚ್.ಎಲï.ಯಮುನಾ, ಸಹ ಪ್ರಾಧ್ಯಾಪಕ ಕೆ.ಎನ್.ಪ್ರಸನ್ನಕುಮಾರ್, ಕ್ರೆಡಿಟ್-ಐ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಪಿ.ವರ್ಷ ಇನ್ನಿತರರು ಉಪಸ್ಥಿತರಿದ್ದರು.

 

 

Translate »