ರೈತರನ್ನು ಭಯೋತ್ಪಾದಕರಂತೆ ಬಿಂಬಿಸದಿರಿ
ಮೈಸೂರು

ರೈತರನ್ನು ಭಯೋತ್ಪಾದಕರಂತೆ ಬಿಂಬಿಸದಿರಿ

January 30, 2021

ಮೈಸೂರು, ಜ.29(ಆರ್‍ಕೆಬಿ)- ಗಣ ರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಕೃತ್ಯಕ್ಕೂ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ. ರೈತರನ್ನು ಭಯೋತ್ಪಾದ ಕರಂತೆ ಬಿಂಬಿಸುವುದನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ ಒತ್ತಾಯಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, 70 ದಿನಗಳಿಂದ ಶಾಂತಿ ಯುತವಾಗಿ ರೈತರು ಧರಣಿ ನಡೆಸುತ್ತಿದ್ದಾರೆ. ಕೆಂಪುಕೋಟೆಯಲ್ಲಿ ನಡೆದ ಕೃತ್ಯದ ರೂವಾರಿ ಕೇಂದ್ರ ಸರ್ಕಾರ ಎಂದು ಆರೋಪಿಸಿದರು.

ದೆಹಲಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿ ಸಿದ ಅವರು, ರೈತರ ಹೆಸರಿನಲ್ಲಿ ಚಳವಳಿ ಮಾಡಿಸುವ ಯಾರೇ ಆಗಲಿ ಚಳವಳಿ ಯನ್ನು ಶಾಂತಿಯುತವಾಗಿ ಸಂಘಟಿಸ ಬೇಕು. ರೈತರ ಹೆಸರಿನಲ್ಲಿ ದುಷ್ಕರ್ಮಿಗಳು ಇಂತಹ ಕೃತ್ಯ ಎಸಗುವುದನ್ನು ರೈತ ಸಂಘ ಟನೆಗಳು ಸಹಿಸುವುದಿಲ್ಲ. ಈ ಕೃತ್ಯದಲ್ಲಿ ಭಾಗಿಯಾದ ಯಾರೇ ಅಗಿರಲಿ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ, ಶಿಕ್ಷಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಚಳುವಳಿಗಾರರನ್ನು ನೈತಿಕವಾಗಿ ಎದು ರಿಸಲಾಗದ ಕೇಂದ್ರ ಸರ್ಕಾರ ಕೆಂಪು ಕೋಟೆ ಯಲ್ಲಿ ಕೆಲವು ದುಷ್ಕರ್ಮಿಗಳು ನಡೆಸಿದ ಗಲಭೆಯನ್ನು ದುರುಪಯೋಗಪಡಿಸಿಕೊಂಡು ಶಾಂತಿಯುತವಾಗಿ ಚಳವಳಿನಿರತರನ್ನು ಬಲವಂತವಾಗಿ ಖಾಲಿ ಮಾಡಿಸುವುದು, ಗೂಂಡಾಗಳ ಮೂಲಕ ಬೆದರಿಕೆ ಒಡ್ಡುವು ದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ಅತ್ಯಂತ ಕ್ರೂರ, ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇಂತಹ ಕ್ರಮಗಳಿಂದ ರೈತ ಚಳವಳಿಯನ್ನು ನಾಶ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದರು.

ದೆಹಲಿ ಗಲಭೆಯ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರಬೀಳಬೇಕು. ಇದ ಕ್ಕಾಗಿ ಸತ್ಯಶೋಧನಾ ಸಮಿತಿ ರಚಿಸಿ, ನಿಷ್ಪಕ್ಷ ಪಾತವಾಗಿ ಸತ್ಯಾಂಶ ಬಹಿರಂಗಪಡಿಸಬೇಕು. ಕೆಂಪುಕೋಟೆ ಪ್ರವೇಶ ಮಾಡಿ ಧ್ವಜಾ ರೋಹಣ ಮಾಡುವ ಉದ್ದೇಶ ಚಳು ವಳಿಗಾರರಲ್ಲಿ ಇದೆ ಎಂದು ಸುಪ್ರಿಂ ಕೋರ್ಟ್ ಮುಂದೆ ಕೇಂದ್ರದ ಅಟಾರ್ನಿ ಜನರಲ್ ಹೇಳಿದ್ದರು. ಈ ಮಾಹಿತಿ ಇದ್ದಲ್ಲಿ ಕೆಂಪು ಕೋಟೆಗೆ ಸುರಕ್ಷಿತ ರಕ್ಷಣೆ ಏಕೆ ನೀಡಲಿಲ್ಲ? ಕೆಂಪುಕೋಟೆಗೆ ಪ್ರವೇಶ ಮಾಡ ಬೇಕಾದರೆ 4 ಗೇಟ್‍ಗಳನ್ನು ದಾಟಿ ಹೋಗ ಬೇಕಾಗು ತ್ತದೆ. ಆದರೆ ಅದನ್ನು ತಡೆಗಟ್ಟಲು ಪ್ರಯತ್ನ ಗಳನ್ನೇಕೆ ಮಾಡಲಿಲ್ಲ? ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಮುಂಚಿತವಾಗಿ ಕೆಲವು ದುಷ್ಕರ್ಮಿಗಳು ರೈತರ ಹೆಸರಿನಲ್ಲಿ ಇಂತಹ ಕೃತ್ಯ ಎಸಗುವ ಸಾಧ್ಯತೆ ಇದೆ. ಇಂತ ಹವರ ಮೇಲೆ ಅನುಮಾನವಿದೆ ಎಂದು ಸ್ಥಳೀಯ ಪೊಲೀಸರಿಗೆ ಮುಂಚಿತವಾಗಿ ತಿಳಿಸಿದ್ದರೂ, ಅಂಥವರ ವಿರುದ್ಧ ಮುನ್ನೆಚ್ಚ ರಿಕೆ ಕ್ರಮ ತೆಗೆದುಕೊಳ್ಳಲಿಲ್ಲವೇಕೆ? ಎಂದು ಪ್ರಶ್ನಿಸಿದರು. ಆದಷ್ಟು ಶೀಘ್ರ ಇದರ ಸಮಗ್ರ ತನಿಖೆ ಮೂಲಕ ಸತ್ಯಾಂಶ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದ ಜನರು ಈಗವರ ಸರ್ವಾ ಧಿಕಾರ ನೋಡಿದ್ದಾರೆ. ಅವರನ್ನು ಅಧಿಕಾರ ದಿಂದ ಕೆಳಗಿಳಿಸುವ ಕಾಲ ಹತ್ತಿರ ಬರುತ್ತಿದೆ ಎಂದರು. ಗೋಷ್ಠಿಯಲ್ಲಿ ರೈತ ಸಂಘದ ಗೌರ ವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ, ಉಪಾಧ್ಯಕ್ಷ ಚನ್ನಪಟ್ಟಣ ಎಂ.ರಾಮು, ರಾಜ್ಯ ಕಾರ್ಯ ದರ್ಶಿ ರವಿಕಿರಣ್ ಪೂಣಚ, ಮೈಸೂರು ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವ ರಾಜು, ತಾಲೂಕು ಅಧ್ಯಕ್ಷ ಪಿ.ಮರಂ ಕಯ್ಯ ಇನ್ನಿತರರು ಉಪಸ್ಥಿತರಿದ್ದರು.

Translate »