ಮೈಸೂರು, ಜು.22(ಪಿಎಂ)- ಮೈಸೂರಿನಲ್ಲಿ ಬುಧವಾರ 50 ವರ್ಷದ ವಕೀಲ ರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪರಿಣಾಮ ಮೈಸೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮತ್ತು ಮಳಲವಾಡಿಯ ನ್ಯಾಯಾಲಯದ ಹೊಸ ಕಟ್ಟಡ ವನ್ನು ಇಂದಿನಿಂದ 2 ದಿನ ಸೀಲ್‍ಡೌನ್ ಮಾಡಿ, ನ್ಯಾಯಾಲಯದ ಕಲಾಪಗಳನ್ನು ಮುಂದೂಡಲಾಗಿದೆ. ಆರೋಗ್ಯ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಬುಧವಾರ ಎರಡೂ ನ್ಯಾಯಾ ಲಯ ಸಂಕೀರ್ಣಗಳಿಗೆ ರಾಸಾಯನಿಕ ಸಿಂಪಡಿಸಿ, ಸಂಪೂರ್ಣ ಸ್ಯಾನಿಟೈಸ್ ಮಾಡಿ ದ್ದಾರೆ. ಬುಧವಾರ ಬೆಳಿಗ್ಗೆಯಿಂದ ಸಂಜೆವ ರೆಗೂ ಸ್ಯಾನಿಟೈಸ್ ಕಾರ್ಯ ನಡೆದಿದೆ.
ಈ ಮೊದಲು ಸಹ ವಕೀಲರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ ಯಲ್ಲಿ ಎರಡೂ ನ್ಯಾಯಾಲಯ ಸಂಕೀರ್ಣ ಗಳು ಜು.8 ಮತ್ತು 9ರಂದು ಸೀಲ್‍ಡೌನ್ ಆಗಿದ್ದವು. ಈವರೆಗೆ ಮೈಸೂರಿನ ಮೂವರು ಪುರುಷ ವಕೀಲರಿಗೆ ಕೊರೊನಾ ಪಾಸಿಟಿವ್ ಆಗಿದೆ. ಮೊದಲಿಗೆ 53 ವರ್ಷದ ವಕೀಲ ರಿಗೆ ಕೊರೊನಾ ಸೋಂಕು ತಗುಲಿತ್ತು. ಅವರೀಗ ಗುಣಮುಖರಾಗಿದ್ದು, ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಬ್ಬ ಸೋಂಕಿತರು ಯುವ ವಕೀಲರು. ಅವರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಅವರು ಹಲವು ದಿನಗಳಿಂದ ಈ ಎರಡೂ ಕೋರ್ಟ್‍ಗಳಿಗೆ ಭೇಟಿ ನೀಡಿರಲಿಲ್ಲ. ಹೀಗಾಗಿ ಕೋರ್ಟ್ ಸಂಕೀರ್ಣಗಳ ಸ್ಯಾನಿಟೈಸ್ ಮಾಡುವ ಅಗತ್ಯತೆ ಕಂಡುಬರಲಿಲ್ಲ.