ರಾಜ್ಯದಲ್ಲಿ ಕೊರೊನಾ ಅಬ್ಬರ
ಮೈಸೂರು

ರಾಜ್ಯದಲ್ಲಿ ಕೊರೊನಾ ಅಬ್ಬರ

May 11, 2020
  • ಒಂದೇ ದಿನ 54 ಮಂದಿಗೆ ಸೋಂಕು
  • ಹಸಿರು ವಲಯ ಶಿವಮೊಗ್ಗಕ್ಕೂ ಅಂಟಿದ ಜಾಡ್ಯ

ಬೆಂಗಳೂರು, ಮೇ 10-ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ಹೆಚ್ಚಾಗಿದÀ್ದು, ಭಾನುವಾರ ಒಂದೇ ದಿನ 22 ಮಹಿಳೆಯರೂ ಸೇರಿದಂತೆ ಒಟ್ಟು 54 ಮಂದಿಗೆ ಸೋಂಕು ಪತ್ತೆಯಾಗಿದೆ. ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕು ಪ್ರವೇಶಿಸಿದ್ದು, ಅಲ್ಲಿ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 848ಕ್ಕೆ ಏರಿದೆ. ಗುಜರಾತ್‍ನ ಅಹಮದಾಬಾದ್‍ನಿಂದ ಹಿಂತಿರುಗಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ 8 ಮಂದಿಗೆ ಸೋಂಕು ಪತ್ತೆಯಾಗಿದೆ. ಗುಜರಾತ್‍ನಿಂದ ಹಿಂತಿರುಗಿದವರನ್ನು ಅವರ ಊರುಗಳಿಗೆ ಕಳುಹಿಸದೆ ಶಿವಮೊಗ್ಗದಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಇದರಿಂದಾಗಿ ಹೆಚ್ಚಿನ ಜನರಿಗೆ ಸೋಂಕು ಹರಡು ವುದನ್ನು ತಡೆಗಟ್ಟಿದಂತಾಗಿದೆ. ಬೆಳಗಾವಿಯಲ್ಲಿ ಇಂದು 22 ಮಂದಿಗೆ ಸೋಂಕು ಪತ್ತೆಯಾಗಿದ್ದು, ಅವರಲ್ಲಿ 14 ಮಹಿಳೆಯರೂ ಸೇರಿ ದ್ದಾರೆ. 3 ಮತ್ತು 14 ವರ್ಷದ ಹೆಣ್ಣು ಮಕ್ಕಳಿಗೆ ಸೋಂಕು ಪತ್ತೆಯಾ ಗಿದೆ. ಇವರೆಲ್ಲರೂ ರಾಜಾಸ್ತಾನದ ಅಜ್ಮೀರ್‍ಗೆ ಹೋಗಿ ಬಂದಿದ್ದ ವರು. ಅದೇ ರೀತಿ ಅಜ್ಮೀರ್‍ನಿಂದ ಹಿಂತಿರುಗಿದ 8 ಮಂದಿಗೆ ಬಾಗಲಕೋಟೆಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನುಳಿದಂತೆ ಉತ್ತರಕನ್ನಡದಲ್ಲಿ 7, ಕಲಬುರಗಿಯಲ್ಲಿ 4, ಬೆಂಗಳೂರಿನಲ್ಲಿ 3, ದಾವಣಗೆರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 848 ಸೋಂಕಿತರ ಪೈಕಿ 422 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ, 394 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 36 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೆ ರಾಜ್ಯದಲ್ಲಿ 31 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

Translate »