ಕೋವಿಡ್-19 ಸೋಂಕು ಹಿನ್ನೆಲೆ ಕೆ.ಆರ್.ಆಸ್ಪತ್ರೆ ಸ್ವಚ್ಛತೆ ಪರೀಕ್ಷಿಸಿದ ಸಚಿವ ಸೋಮಣ್ಣ
ಮೈಸೂರು

ಕೋವಿಡ್-19 ಸೋಂಕು ಹಿನ್ನೆಲೆ ಕೆ.ಆರ್.ಆಸ್ಪತ್ರೆ ಸ್ವಚ್ಛತೆ ಪರೀಕ್ಷಿಸಿದ ಸಚಿವ ಸೋಮಣ್ಣ

March 22, 2020

ಮೈಸೂರು, ಮಾ. 21(ಆರ್‍ಕೆ)- ಕೋವಿಡ್-19 ಮಾರಕ ರೋಗ ಹರಡಿ ರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಇಂದು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು.

ಆಸ್ಪತ್ರೆಯ ಹೊರರೋಗಿ ವಿಭಾಗದ ಕಟ್ಟಡದ ಸಭಾಂಗಣದಲ್ಲಿ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಸಚಿವರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಕುರಿತು ಮಾಹಿತಿ ಪಡೆದರು.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಮೈಕ್ರೋಬಯಾ ಲಜಿ ಪ್ರಯೋಗಾಲಯದಲ್ಲಿ ಕೋವಿಡ್-19 ಸೋಂಕಿನ ಮಾದರಿ ಪರೀಕ್ಷೆ ಮಾಡ ಲಾಗುತ್ತಿದ್ದು, ಈವರೆಗೆ 42 ಪರೀಕ್ಷೆ ಮಾಡಿದ ಪೈಕಿ ಕೊಡಗು ಜಿಲ್ಲೆಯ ಒಂದು ಪಾಸಿಟಿವ್ ಬಂದಿದೆ (ಸಂಜೆ ವೇಳೆಗೆ ಮೈಸೂರಿನ ಒಂದು ಪ್ರಕರಣ ದಾಖಲಾಯಿತು) ಎಂದು ಎಂಎಂಸಿಆರ್‍ಐ ನಿರ್ದೇಶಕ ಡಾ. ಸಿ.ಪಿ. ನಂಜರಾಜ್ ಮಾಹಿತಿ ನೀಡಿದರು.

ಮೈಸೂರು, ಚಾಮರಾಜನಗರ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳ ಕೋವಿಡ್-19 ಮಾದರಿಗಳನ್ನು ಈ ಪ್ರಯೋಗಾಲ ಯದಲ್ಲಿ ಪರೀಕ್ಷಿಸಲು ವ್ಯವಸ್ಥೆ ಮಾಡಲಾ ಗಿದೆ. ಅದಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳ ಲಾಗಿದೆ ಎಂದು ಅವರು ತಿಳಿಸಿದರು.
ನಂತರ ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎನ್. ನಂಜುಂಡಸ್ವಾಮಿ, ಕೊರೊನಾ ಶಂಕಿತರಿಗಾಗಿ ಐಪಿಡಿ-ಓಪಿಡಿ (ಜಯದೇವ ಬಿಲ್ಡಿಂಗ್) ಕಟ್ಟಡದಲ್ಲಿ ಕೊರೊನಾ ವೈರಸ್ ವಾರ್ಡ್ ತೆರೆಯಲಾ ಗಿದ್ದು, ಐಸೋಲೇಷನ್‍ನಲ್ಲಿರಿಸಿ ರೋಗಿಗಳ ಮೇಲೆ ತೀವ್ರ ನಿಗಾ ವಹಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ತುರ್ತು ಚಿಕಿತ್ಸೆಯನ್ನೊರತುಪಡಿಸಿ ಉಳಿದ ಸಾಮಾನ್ಯ ರೋಗ ಲಕ್ಷಣಗಳಿ ದ್ದಲ್ಲಿ ಅಂತಹ ರೋಗಿಗಳನ್ನು ಅವರವರ ಸ್ಥಳಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಚಿಕಿತ್ಸೆ ಪಡೆಯಲು ಸಲಹೆ ನೀಡಿ ಹೆಚ್ಚು ಮಂದಿ ಕೆ.ಆರ್. ಆಸ್ಪತ್ರೆಗೆ ಬಾರದಂತೆ ನೋಡಿಕೊಳ್ಳಿ ಎಂದು ಸಚಿವ ಸೋಮಣ್ಣ ಅವರು ಆಸ್ಪತ್ರೆ ವೈದ್ಯರಿಗೆ ಸಲಹೆ ನೀಡಿದರು.

ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಬೇಕು, ಐಸೋಲೇ ಷನ್ ವಾರ್ಡ್‍ಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿ, ಕೊರೊನಾ ಸೋಂಕು ಇತರರಿಗೆ ಹರಡದಂತೆ ಎಚ್ಚರ ವಹಿಸಿ ಎಂದು ಅವರು ತಾಕೀತು ಮಾಡಿದರು.

ಮಾಸ್ಕ್ ಧರಿಸಿದ ಸಚಿವರೊಂದಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಸಂಸದ ಪ್ರತಾಪ್ ಸಿಂಹ, ಮೇಯರ್ ತಸ್ನೀಂ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ, ಎಸ್ಪಿ ಸಿ.ಜಿ. ರಿಷ್ಯಂತ್, ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ್ ಸೇರಿ ದಂತೆ ಅಧಿಕಾರಿಗಳೂ ಮಾಸ್ಕ್ ಧರಿಸಿದ್ದರು.ಕೊರೊನಾ ವೈರಸ್ ವಾರ್ಡ್‍ಗೆ ಭೇಟಿ ನೀಡಲು ಮುಂದಾದ ಸಚಿವರು, ಅಧಿಕಾರಿ ಗಳ ಸಲಹೆ ಮೇರೆಗೆ ಹಿಂದಿರುಗಿದರು.

Translate »