ಕೊಳ್ಳೇಗಾಲ, ಮಾ.21 (ಎನ್.ನಾಗೇಂದ್ರ)- ‘ನಾವು ಚೆನ್ನಾಗಿ ಓದಿದ್ದೇವೆ. ಪರೀಕ್ಷೆಯನ್ನು ಬರೆಯಲು ನಾವು ಸಿದ್ಧರಾಗಿದ್ದೇವೆ. ನೀವು ಪರೀಕ್ಷೆ ನಡೆಸಿ’ ಎನ್ನುವ ಮೂಲಕ ಎಸ್‍ಎಸ್ ಎಲ್‍ಸಿ ವಿದ್ಯಾರ್ಥಿಗಳು ಶಿಕ್ಷಣ ಸಚಿವ ಸುರೇಶ್‍ಕುಮಾರ್‍ಗೆ ಅಭಯ ನೀಡಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿ ರುವ ಜಿಲ್ಲೆಯ ಕೆಲ ಭಾಗಗಳಲ್ಲಿರುವ ವಿದ್ಯಾರ್ಥಿಗಳ ಮನೆಗಳಿಗೆ ಶನಿವಾರ ಸಚಿವರು ಭೇಟಿ ನೀಡಿ ಸಮಾಲೋಚಿಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ, ಅವರ ಅಭಿಪ್ರಾಯ ಕಲೆ ಹಾಕಿದರು.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾ ರ್ಥಿನಿ ಭಾನುಪ್ರಿಯ ಎಂಬುವವರ ಮನೆಗೆ ತೆರಳಿದ ಉಸ್ತುವಾರಿ ಸಚಿವರು ವ್ಯಾಸಂ ಗದ ಬಗ್ಗೆ ವಿದ್ಯಾರ್ಥಿಯಿಂದಲೇ ತಿಳಿದರು. ಕಲಿಕೆಯಲ್ಲಿ ಏನಾದರೂ ತೊಂದರೆ, ಗೊಂದಲ ಇದೆಯೇ ಎಂದು ಪ್ರಶ್ನಿಸಿದರು. ಪರೀಕ್ಷೆÀಗೆ ಸಿದ್ಧರಾಗುತ್ತಿರುವ ಬಗ್ಗೆ ತಿಳಿದುಕೊಂಡರು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ನೀಡಿದರು.
ಸತ್ತೇಗಾಲ ಗ್ರಾಮದ ಸಂತೋಷ್ ಎಂಬ ವಿದ್ಯಾರ್ಥಿ ಮನೆಗೂ ಭೇಟಿ ನೀಡಿದ ಸಚಿವರು ಓದಿನ ಕುರಿತು ಸಮಾಲೋಚಿ ಸಿದರು. ಶ್ರದ್ಧೆ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಜ್ಜಾಗುವಂತೆ ಸಚಿವರು ತಿಳಿಸಿದರು. ಅದೇ ಗ್ರಾಮದ ಮೋನಿಕಾ ಎಂಬ ವಿದ್ಯಾರ್ಥಿನಿ ಮನೆಗೂ ತೆರಳಿದ ಸಚಿವರು ವಿದ್ಯಾರ್ಥಿನಿಯೊಂದಿಗೆ ಪರೀಕ್ಷಾ ಸಿದ್ಧತಾ ಸಂಬಂಧ ಸಮಾಲೋಚಿಸಿದರು. ಇದೇ ವೇಳೆ ವಿದ್ಯಾರ್ಥಿನಿಯ ಪೋಷಕ ರೊಂದಿಗೂ ಮಾತನಾಡಿ ಹೆಚ್ಚಿನ ಶಿಕ್ಷಣ ಅಧ್ಯಯನಕ್ಕೆ ಉತ್ತೇಜಿಸಬೇಕು ಎಂದು ಸಚಿವರು ಸಲಹೆ ಮಾಡಿದರು.
ಭೇಟಿಯ ವೇಳೆ ಸತ್ತೇಗಾಲ ಗ್ರಾಮದ ಶಾಲೆಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಕಟ್ಟಡ ನಿರ್ಮಾಣ ಕಾಮಗಾರಿ ವೀಕ್ಷಿಸಿ ದರು. ಶಾಲಾ ಅವರಣದಲ್ಲಿರುವ ಮರ ಗಿಡ ಗಳನ್ನು ಉಳಿಸಿಕೊಳ್ಳುವಂತೆ ಉಸ್ತುವಾರಿ ಸಚಿವರು ತಿಳಿಸಿದರು. ಬಳಿಕ, ಯಳಂ ದೂರಿನ ಗೌತಮ್ ಬಡಾವಣೆಯಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಕೀರ್ತನಾ ಮನೆಗೆ ಭೇಟಿ ನೀಡಿ ಆತ್ಮವಿಶ್ವಾಸ ತುಂಬಿದರು. ಶಾಸಕ ರಾದ ಆರ್.ನರೇಂದ್ರ, ಎನ್.ಮಹೇಶ್, ಉಪ ವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇ ಶಕರಾದ ಜವರೇಗೌಡ, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಬೇಕೇ ಅಥವಾ ಮುಂದೂಡಬೇಕೆ ಎಂಬುದು ನಾಳೆ ನಿರ್ಧಾರ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್
ಚಾಮರಾಜನಗರ, ಮಾ.21(ಎಸ್‍ಎಸ್)- ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾ. 27ರಿಂದ ರಾಜ್ಯಾದ್ಯಂತ ಆರಂಭವಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಿಗದಿತ ದಿನಾಂಕದಂದು ನಡೆಸಬೇಕೇ ಅಥವಾ ಮುಂದೂಡಬೇಕೆ ಎಂಬ ಬಗ್ಗೆ ನಾಳೆ(ಮಾ.23) ನಿರ್ಧರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಆರಂಭವಾಗಲು ಇನ್ನೂ ಐದಾರು ದಿನಗಳಿವೆ. ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆÉ್ಷಯನ್ನು ನಿಗದಿತ ದಿನಾಂಕದಂದು ನಡೆಸಬೇಕೆ ಅಥವಾ ಮುಂದೂಡಬೇಕೇ ಎಂಬುದರ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳ ಹಿತ ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪರೀಕ್ಷೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ವಿದ್ಯಾರ್ಥಿಗಳು, ಪೋಷಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಮನವಿ ಮಾಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಸ್‍ಎಸ್ ಎಲ್‍ಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪರೀಕ್ಷೆಗೆ ಇನ್ನೂ ಕಾಲಾವಕಾಶ ಇರುವುದರಿಂದ ಮುಖ್ಯಮಂತ್ರಿಗಳು ಹೀಗೆ ಹೇಳಿರಬೇಕು. ಸೋಮವಾರ ಅವರೊಂದಿಗೂ ಸಹ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.