ಕೋವಿಡ್ ಹಿನ್ನೆಲೆ ಈ ವರ್ಷ ಪಿಹೆಚ್.ಡಿ ಆನ್‍ಲೈನ್ ತರಗತಿ ನಡೆಸಲು ಸಭೆ ಸಮ್ಮತಿ
ಮೈಸೂರು

ಕೋವಿಡ್ ಹಿನ್ನೆಲೆ ಈ ವರ್ಷ ಪಿಹೆಚ್.ಡಿ ಆನ್‍ಲೈನ್ ತರಗತಿ ನಡೆಸಲು ಸಭೆ ಸಮ್ಮತಿ

July 14, 2021

ಮೈಸೂರು, ಜು.13(ಆರ್‍ಕೆಬಿ)- ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಿಹೆಚ್.ಡಿ ತರಗತಿಗಳನ್ನು ನಡೆಸಲಾಗಿಲ್ಲ. ಹಾಗಾಗಿ ಪಿಹೆಚ್.ಡಿ ಕೋರ್ಸ್ ವರ್ಕ್ ತರಗತಿಗಳನ್ನು ಆನ್‍ಲೈನ್‍ನಲ್ಲಿ ನಡೆ ಸಲು ಮಂಗಳವಾರ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಮೊದಲನೇ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗುವವರೆಗೆ ಈ ವರ್ಷ ಮಾತ್ರ ಆನ್‍ಲೈನ್ ತರಗತಿಗಳನ್ನು ನಡೆಸಲು ಸಭೆ ಯಲ್ಲಿ ತೀರ್ಮಾನಿಸಲಾಯಿತು. 2020-21ನೇ ಸಾಲಿನಲ್ಲಿ ನಡೆಯಬೇಕಾಗಿದ್ದ ಪಿಹೆಚ್.ಡಿ ಕೋರ್ಸ್ ವರ್ಕ್ ತರಗತಿಗಳನ್ನು ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡ ಲಾಗಿತ್ತು. ಈ ಸಂಬಂಧ ಕೆಲವು ವಿದ್ಯಾರ್ಥಿ ಗಳು ತರಗತಿ ವಿಳಂಬವಾಗುತ್ತಿರುವ ಕಾರಣ ಆನ್‍ಲೈನ್‍ನಲ್ಲಿ ನಡೆಸಲು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಭೆ ಈ ನಿರ್ಧಾರ ಕೈಗೊಂಡಿತು.

ಎಲ್ಲಾ ವಿಷಯಗಳು ಸೇರಿದಂತೆ 200 ವಿದ್ಯಾರ್ಥಿಗಳಿರುವ ಪಿಹೆಚ್‍ಡಿ.ಯಲ್ಲಿ ಕೋರ್ಸ್ ವರ್ಕ್ ತೆಗೆದುಕೊಳ್ಳಬೇಕು. ಆದರೆ ಕೋವಿಡ್‍ನಿಂದಾಗಿ ತರಗತಿ ನಡೆಸ ಲಾಗಿಲ್ಲ. ಹಾಗಾಗಿ ಈಗ ಆನ್‍ಲೈನ್‍ನಲ್ಲಿ ತರಗತಿ ಆರಂಭಿಸಿದರೆ ಆನ್‍ಲೈನ್ ಮತ್ತು ಆಫ್‍ಲೈನ್ ಎರಡರಲ್ಲೂ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಾಗುತ್ತದೆ. ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿದ್ದು, ಅವರು ಕೋವಿಡ್ ಕಾರಣದಿಂದಾಗಿ ಭಾರತಕ್ಕೆ ಬರಲು ಅವಕಾಶ ಸಿಕ್ಕಿಲ್ಲ. ಇದ ರಿಂದಾಗಿ ಆನ್‍ಲೈನ್ ಕೋರ್ಸ್ ವರ್ಕ್ ತರಗತಿಗಳನ್ನು ಆರಂಭಿಸಿದರೆ ವಿದೇಶ ಮತ್ತು ಹೊರಗಿರುವ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಅಲ್ಲದೆ ವಿದ್ಯಾರ್ಥಿ ಗಳು ಪರೀಕ್ಷೆಗಳಿಗೆ ಮಾತ್ರ ಖುದ್ದಾಗಿ ಹಾಜ ರಾಗಬೇಕಾಗುತ್ತದೆ ಎಂದು ಕುಲಪತಿ ಪ್ರೊ.ಹೇಮಂತಕುಮಾರ್ ತಿಳಿಸಿದರು. ಇದಕ್ಕೆ ಸದಸ್ಯರು ಅನುಮತಿ ನೀಡಿದರು.

ಬೌದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೂ ಮುನ್ನ ತಜ್ಞರ ಸಲಹೆ ಪಡೆಯಲು ನಿರ್ಧಾರ: ಮೈಸೂರು ವಿಶ್ವ ವಿದ್ಯಾ ನಿಲಯದಲ್ಲಿ `ಬೌದ್ಧ ಅಧ್ಯಯನ ಕೇಂದ್ರ’ ಸ್ಥಾಪಿಸುವ ಸಂಬಂಧ ಅದರ ರೂಪುರೇಷೆ ಸಿದ್ಧಪಡಿಸಿ, ಅಂದಾಜು ವೆಚ್ಚದ ಮಾಹಿತಿ ಯನ್ನು ಸರ್ಕಾರಕ್ಕೆ ಸಲ್ಲಿಸಿ, ಅನುಮೋ ದನೆ ಪಡೆಯುವುದಕ್ಕಾಗಿ ಪ್ರಸ್ತಾವನೆ ಸಿದ್ಧ ಪಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಸಂಶೋ ಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇ ಶಕ ಪ್ರೊ.ಜೆ. ಸೋಮಶೇಖರ್ ಅವರಿಗೆ ವಹಿಸಲಾಗಿತ್ತು. ಅದರನ್ವಯ ಬೌದ್ಧ ಅಧ್ಯ ಯನ ಕೇಂದ್ರ ಸ್ಥಾಪಿಸಿ, ಸ್ನಾತಕ ಹಂತದಲ್ಲಿ ಬೌದ್ಧ ಅಧ್ಯಯನವನ್ನು ಒಂದು ಐಚ್ಛಿಕ ವಿಷಯವಾಗಿ ಮತ್ತು ಬೌದ್ಧ ಅಧ್ಯಯನ ದಲ್ಲಿ ಸ್ನಾತಕೋತ್ತರ ಎಂಎ ಪದವಿಯನ್ನು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಕಾರ್ಯಾ ನುಷ್ಠಾನಗೊಳಿಸುವ ಬಗ್ಗೆ ಪ್ರಸ್ತಾವನೆ ಹಾಗೂ ಅನುದಾನ, ಬೋಧಕ, ಬೋಧ ಕೇತರ ಹುದ್ದೆಗಳ ಬೇಡಿಕೆಗಾಗಿ ಪ್ರಸ್ತಾ ವನೆಯಲ್ಲಿ ತಿಳಿಸಿದ್ದಾರೆ. ಇದರ ಅನು ಮೋದನೆಗಾಗಿ ಸಭೆಯಲ್ಲಿ ಮಂಡಿಸಿದರು.

ಈ ಕುರಿತು ಸಲಹೆ ನೀಡಿದ ಪ್ರೊ. ಮುಜಾಫರ್ ಅಸ್ಸಾದಿ, ಬೌದ್ಧ ಅಧ್ಯಯನ ಕೇಂದ್ರ ಎಂಬುದರ ಬದಲಾಗಿ ಬೌದ್ಧ ಧಮ್ಮ ಅಧ್ಯಯನ ಕೇಂದ್ರ ಎಂದಾಗಬೇಕು. ಈ ಬಗ್ಗೆ ಪ್ರಸ್ತಾವನೆ ಅಂತಿಮವಾಗುವ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ, ಬೌದ್ಧ ಅಧ್ಯಯನಗಳ ಪ್ರಸ್ತಾಪವನ್ನು ತಜ್ಞರು ಪರಿಶೀಲಿಸಿದ ನಂತರ ಸರ್ಕಾರಕ್ಕೆ ಕಳು ಹಿಸಲಾಗುವುದು ಎಂದು ಹೇಳಿದರು.

ಸರ್ಕಾರದಿಂದ ಹಣ ಬರುವವರೆಗೆ ಇದನ್ನು ಮಾಡುವುದಿಲ್ಲ ಎಂದರು. ಮಧ್ಯ ಪ್ರವೇಶಿಸಿದ ಎಂಎಲ್‍ಸಿ ಆರ್.ಧರ್ಮ ಸೇನಾ, ಬೌದ್ಧ ಅಧ್ಯಯನ ಕೇಂದ್ರದ ರೀತಿ ಯಲ್ಲಿಯೇ ಹಿಂದೂ ಧರ್ಮ ಅಧ್ಯಯನ ಕೇಂದ್ರವನ್ನೂ ಸ್ಥಾಪಿಸುವಂತೆ ಸಲಹೆ ನೀಡಿ ದರು. ಕ್ಲಿನಿಕಲ್ ಎಂಬ್ರಿಯಾಲಜಿ ಅಂಡ್ ಪ್ರೀ ಇಂಪ್ಲಾಂಟೇಷನ್ ಜೆನೆಟಿಕ್ಸ್‍ನಲ್ಲಿ ಎಂ.ಎಸ್ಸಿ.ಯ ಇಬ್ಬರು ಅಭ್ಯರ್ಥಿಗಳಿಗೆ ಕೋವಿಡ್ ಕಾರಣದಿಂದಾಗಿ ಅಂತಾ ರಾಷ್ಟ್ರೀಯ ವಿಮಾನಗಳು ರದ್ದಾಗಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಹಾಗಾಗಿ ಆ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ನಡೆಸುವ ವಿಷಯವನ್ನು ಶಿಕ್ಷಣ ಮಂಡಳಿ ಸಭೆ ಅಂಗೀಕರಿಸಿತು. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದನ್ನು ವಿಶೇಷ ಪ್ರಕರಣ ಎಂದು ಪರಿ ಗಣಿಸಲಾಯಿತು. ಸಭೆಯಲ್ಲಿ ಕುಲಸಚಿವ ರಾದ ಪ್ರೊ.ಆರ್.ಶಿವಪ್ಪ, ಪ್ರೊ.ಎ.ಪಿ. ಜ್ಞಾನಪ್ರಕಾಶ್, ಗುಂಡ್ಲುಪೇಟೆ ಶಾಸಕ ನಿರಂಜನ್‍ಕುಮಾರ್, ಎಂಎಲ್‍ಸಿ ಆರ್. ಧರ್ಮಸೇನಾ ಮತ್ತು ಶಿಕ್ಷಣ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Translate »