ಮೃಗಾಲಯದ `ಇ-ಯುವ  ಸಂಘಟನೆ’ ಸದಸ್ಯರಾಗುವಿರಾ?
ಮೈಸೂರು

ಮೃಗಾಲಯದ `ಇ-ಯುವ ಸಂಘಟನೆ’ ಸದಸ್ಯರಾಗುವಿರಾ?

July 14, 2021

ಮೈಸೂರು, ಜು.13(ಎಂಟಿವೈ)-ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಯುವ ಸಂಘಟನೆ(ಯೂತ್ ಕ್ಲಬ್) ಕೊರೊನಾ ಹಾವಳಿಯಿಂದಾಗಿ ಈಗ `ಇ-ಯುವ ಸಂಘಟನೆ’ಯಾಗಿ ಪರಿವರ್ತನೆ ಗೊಂಡಿದೆ. ಆಸಕ್ತರು ಜು.25ರೊಳಗೆ ವೆಬ್‍ಸೈಟ್‍ನಲ್ಲಿ ನೋಂದಾಯಿಸಿ ಕೊಳ್ಳಬಹುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಇ-ಯುವ ಸಂಘಟನೆ ಚಟುವಟಿಕೆಗಳು ಇದೇ ಆಗಸ್ಟ್‍ನಿಂದ 2022ರ ಜ.16ರವರೆಗೆ ನಡೆಯಲಿವೆ. ಪ್ರತಿ ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಪರಿಸರ-ವನ್ಯಜೀವಿ ಸಂರಕ್ಷಣೆ ಮೊದಲಾದ ವಿಷಯಗಳ ತಜ್ಞರಿಂದ ಕಾರ್ಯಕ್ರಮ ನಡೆಯಲಿದೆ. ಕನಿಷ್ಠ 12 ವರ್ಷ-ಗರಿಷ್ಠ 18 ವರ್ಷದ ಆಸಕ್ತರು `ಇ-ಯುವ ಸಂಘಟನೆ’ ಸದಸ್ಯರಾಗಬಹುದು. ಸದ್ಯ 60 ಮಂದಿಗಷ್ಟೇ ಮಿತಿ ವಿಧಿಸಿ ರುವುದರಿಂದ ಮೊದಲು ಬಂದವರಿಗಷ್ಟೇ ಅವಕಾಶ ನೀಡಲಾಗುತ್ತದೆ. ವನ್ಯಜೀವಿಗಳ ಬಗ್ಗೆ ಆಸಕ್ತರು hಣಣಠಿs://ಜಿoಡಿms.gಟe/ಃಚಿಘಿಥಿತಿ3ಛಿಞmಎSಟಿಅZಊS6 ಲಿಂಕ್ ಬಳಸಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಮೃಗಾಲಯದ ಬ್ಯಾಂಕ್ ಖಾತೆ: 1720-214-0000028; IಈSಅ ಅoಜe: ಅಓಖಃ0011720 ನಿಗದಿತ ಶುಲ್ಕ 1000 ರೂ. ಜಮೆ ಮಾಡಬೇಕು. ಅರ್ಜಿ ಮತ್ತು ಹಣ ಪಾವತಿಸಿ ದೃಢೀಕರಣ, 2 ಪಾಸ್‍ಪೋರ್ಟ್ ಅಳತೆ ಭಾವಚಿತ್ರ, ಅಂಕಪಟ್ಟಿ, ಆಧಾರ್ ಕಾರ್ಡ್ ಸಂಖ್ಯೆ, ರಕ್ತದ ಗುಂಪು ಮೊದಲಾದ ಮಾಹಿತಿಯನ್ನು eಜumಥಿsoಡಿe99@gmಚಿiಟ.ಛಿomಗೆ ಮೇಲ್ ಮಾಡಲು ಸೂಚಿಸ ಲಾಗಿದೆ. ಮಾಹಿತಿಗೆ 0821-2440752, ಮೊ.9686668099ಗೆ ಸಂಪರ್ಕಿಸಬಹುದಾಗಿದೆ.

Translate »