ಮೈಸೂರಲ್ಲಿ ಕೋವಿಡ್ ಸೋಂಕು ಇಳಿಮುಖ; ವಾರ್ ರೂಂ ಕರೆಗಳಲ್ಲೂ ಇಳಿಕೆ: ರಘು ಕೌಟಿಲ್ಯ
ಮೈಸೂರು

ಮೈಸೂರಲ್ಲಿ ಕೋವಿಡ್ ಸೋಂಕು ಇಳಿಮುಖ; ವಾರ್ ರೂಂ ಕರೆಗಳಲ್ಲೂ ಇಳಿಕೆ: ರಘು ಕೌಟಿಲ್ಯ

June 20, 2021

ಮೈಸೂರು, ಜೂ.19(ಪಿಎಂ)- ಮೈಸೂರಿನಲ್ಲೂ ಕೋವಿಡ್ ಇಳಿಮುಖಗೊಂಡಿದ್ದು, ಇಲ್ಲಿನ ಕೋವಿಡ್ ವಾರ್ ರೂಂಗೆ ಬರುವ ಕರೆಗಳಲ್ಲೂ ಗಣನೀಯ ಇಳಿಕೆಯಾಗಿದೆ ಎಂದು ಮೈಸೂರು ವಾರ್ ರೂಂ ಮೇಲುಸ್ತುವಾರಿಗಳೂ ಆದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ತಿಳಿಸಿದ್ದಾರೆ.

ಮೈಸೂರಿನ ಕೋವಿಡ್ ವಾರ್ ರೂಂಗೆ ಶನಿವಾರ ಭೇಟಿ ನೀಡಿದ್ದ ಅವರು, ಪರಿಶೀಲನೆ ನಡೆಸಿ, ಈ ಸಂಬಂಧ ಮಾಧ್ಯಮ ಗಳಿಗೆ ಮಾಹಿತಿ ನೀಡಿದರು. ಮೈಸೂರಿನಲ್ಲೂ ದಿನೇ ದಿನೆ ಸೋಂಕು ಕಡಿಮೆ ಆಗುತ್ತಿದ್ದು, ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರ ಮಾರ್ಗದರ್ಶನದಲ್ಲಿ ಸೋಂಕು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಯಶಸ್ಸಿನ ಹೆಜ್ಜೆಯಿಡುತ್ತಿದೆ ಎಂದು ತಿಳಿಸಿದರು.

ಮೈಸೂರಿನ ಆಸ್ಪತ್ರೆಗಳಲ್ಲಿ ಬೆಡ್‍ಗಳು ಖಾಲಿ ಖಾಲಿಯಾಗಿವೆ. ವಾರ್ ರೂಂಗೆ ಬರುತ್ತಿದ್ದ ಕರೆಗಳಲ್ಲೂ ಗಣನೀಯ ಪ್ರಮಾಣ ದಲ್ಲಿ ಇಳಿಕೆಯಾಗಿದೆ. ನಿತ್ಯವೂ ಸರಾಸರಿ 500ಕ್ಕೂ ಹೆಚ್ಚು ಕರೆ ಸ್ವೀಕರಿಸುತ್ತಿದ್ದ ವಾರ್ ರೂಂ ಸಿಬ್ಬಂದಿಯು, ವಾರದಿಂದ ಈಚೆಗೆ ಕೇವಲ 80ರಿಂದ 100 ಕರೆ ಮಾತ್ರ ಸ್ವೀಕರಿಸುತ್ತಿದ್ದಾರೆ ಎಂದರು.

ಆಕ್ಸಿಜನ್, ವೆಂಟಿಲೇಟರ್ ಹಾಸಿಗೆಗಳನ್ನು ಬಹುತೇಕ ಕೇಳು ವವರೇ ಇಲ್ಲವಾಗಿದೆ. ದಿನದಿಂದ ದಿನಕ್ಕೆ ಕೋವಿಡ್ ಇಳಿಕೆಯಾಗು ತ್ತಿದ್ದು, ಸಾರ್ವಜನಿರಲ್ಲಿ ಆತಂಕ ದೂರವಾಗುತ್ತಿದೆ. ಈವರೆಗೆ ವಾರ್ ರೂಂನಿಂದ ಖಾಸಗಿ ಆಸ್ಪತ್ರೆಗಳಲ್ಲಿ 3,977 ಸೇರಿದಂತೆ ಒಟ್ಟು 17,191 ಸೋಂಕಿತರಿಗೆ ಬೆಡ್ ಬ್ಲಾಕ್ (ಹಾಸಿಗೆ ಕಲ್ಪಿಸಿರು ವುದು) ಮತ್ತು ಉಚಿತ ಚಿಕಿತ್ಸೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಪ್ರತಿದಿನ ಶೇ.50 ರಷ್ಟು ಸೋಂಕಿತರಿಗೆ ಮಾತ್ರ ಬೆಡ್ ಬ್ಲಾಕಿಂಗ್ ಪ್ರಕ್ರಿಯೆ ನಡೆಯು ತ್ತಿದೆ. ವಾರ್ ರೂಂನಲ್ಲಿ ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಎನ್‍ಸಿಸಿ, ಸ್ವಯಂ ಸೇವಕರು ಇದೀಗ ನಿರಾಳವಾಗಿ ಕಾರ್ಯನಿರ್ವಹಿಸುವಂತಾಗಿದೆ ಎಂದರು.

ಬೆಂಗಳೂರು ನಂತರ ಮೈಸೂರಿನಲ್ಲಿ ಕೋವಿಡ್ ಸೋಂಕು ಹೆಚ್ಚಿತ್ತು. ಮೈಸೂರಿನಲ್ಲಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಲಭ್ಯವಿರುವ ಆರೋಗ್ಯ ಮತ್ತು ಆಸ್ಪತ್ರೆಯನ್ನು ಅತ್ಯಂತ ಸಮರ್ಪಕ ವಾಗಿ ಜಿಲ್ಲಾಡಳಿತ ಕಾರ್ಯ ನಿರ್ವಹಿಸಿದೆ. ಕೋವಿಡ್ ಸೋಂಕಿನ ಆತಂಕದ ಕರೆಗಳನ್ನು ನಮ್ಮ ವಾರ್ ರೂಂ ಸಿಬ್ಬಂದಿ ಸ್ವೀಕರಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಇಂದು ಜನತೆಯಲ್ಲಿ ಆತಂಕ ದೂರವಾಗುತ್ತಿದೆ ಎಂದರು. ಸೋಂಕಿನ ಪ್ರಮಾಣ ಹೆಚ್ಚಿದ್ದಂ ತಹ ಸಂದರ್ಭದಲ್ಲಿ ಗಂಭೀರ ಸಮಸ್ಯೆಗೆ ತುತ್ತಾಗಿದ್ದ ಸೋಂಕಿ ತರಿಗೆ ಆಕ್ಸಿಜನ್, ವೆಂಟಿಲೇಟ್ ಹಾಸಿಗೆ ವ್ಯವಸ್ಥೆ ಕಲ್ಪಿಸುವುದು ಸವಾಲಿನ ಕೆಲಸವಾಗಿತ್ತು. ಇಂತಹ ಸವಾಲನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲಿಯೂ ಅಪವಾದ ಬಾರದ ರೀತಿಯಲ್ಲಿ ವಾರ್ ರೂಂ ಸಿಬ್ಬಂದಿ ಕೆಲಸ ಮಾಡಿದ್ದಾರೆ ಎಂದರು.

Translate »