ಭಾರತದ ಲೆಜೆಂಡರಿ ಕ್ರೀಡಾಪಟು  ಮಿಲ್ಖಾ ಸಿಂಗ್ ನಿಧನ  ರಾಷ್ಟ್ರಪತಿ, ಪ್ರಧಾನಿ ಸಂತಾಪ
News

ಭಾರತದ ಲೆಜೆಂಡರಿ ಕ್ರೀಡಾಪಟು ಮಿಲ್ಖಾ ಸಿಂಗ್ ನಿಧನ ರಾಷ್ಟ್ರಪತಿ, ಪ್ರಧಾನಿ ಸಂತಾಪ

June 20, 2021

ನವದೆಹಲಿ: ಭಾರತದ ಲೆಜೆಂಡರಿ ಕ್ರೀಡಾ ಪಟು, ಓಟಗಾರ ಮಿಲ್ಖಾ ಸಿಂಗ್ ವಿಧಿವಶ ರಾಗಿದ್ದಾರೆ. ಪತ್ನಿ ನಿರ್ಮಲ್ ಅವರು ಮೃತರಾದ 5 ದಿನಗಳಲ್ಲೇ ಮಿಲ್ಖಾ ಸಿಂಗ್ ಕೂಡ ನಿಧನರಾಗಿದ್ದಾರೆ.

ಮಿಲ್ಖಾ ಸಿಂಗ್ ಅವರಿಗೆ ಮೇ 19ರಂದು ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ರೋಗಲಕ್ಷಣ ವಿಲ್ಲದ ಕಾರಣ ಅವರು ಮನೆಯಲ್ಲೇ ಕ್ವಾರಂಟೈನ್‍ನಲ್ಲಿ ದ್ದರು. ನಂತರ ಮೇ 24ರಂದು ಕೋವಿಡ್ ನ್ಯೂಮೋ ನಿಯಾದ ಕಾರಣ ಮೊಹಾಲಿಯ ಫೆÇೀರ್ಟಿಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬಳಿಕ ಕೊರನೋತ್ತರ ಅನಾರೋಗ್ಯದ ಹಿನ್ನೆಲೆ ಜೂನ್ 3ರಂದು ಚಂಢೀಘಡದ ಪೆÇೀಸ್ಟ್ ಗ್ರಾಜುಯೇಟ್ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್‍ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ 91 ವರ್ಷದ ಮಿಲ್ಖಾ ಸಿಂಗ್ ಕೊನೆಯುಸಿರೆಳೆದಿದ್ದಾರೆ. ಸಿಂಗ್ ಅವರ ಪತ್ನಿ ನಿರ್ಮಲ್ ಕೂಡ 5 ದಿನಗಳ ಹಿಂದೆ ಕೊರನೋತ್ತರ ಅನಾರೋಗ್ಯದಿಂದಾಗಿ ಮೃತರಾಗಿದ್ದರು.
‘ಫ್ಲೈಯಿಂಗ್ ಸಿಖ್’ ಎಂದೇ ಜನಪ್ರಿಯರಾಗಿದ್ದ ಮಿಲ್ಖಾ ಸಿಂಗ್ ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಹೆಸರು ಮಾಡಿದ್ದರು. 1958ರಲ್ಲಿ ಕಾರ್ಡಿಫ್‍ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ಒಲಿಂಪಿಕ್ಸ್‍ನಲ್ಲಿ ಪದಕ ಗೆಲ್ಲೋದು ಸ್ವಲ್ಪದರಲ್ಲೇ ಮಿಸ್ ಆಗಿತ್ತು. 1960ರ ರೋಮ್ ಕ್ರೀಡಾಕೂಟದಲ್ಲಿ 400 ಮೀಟರ್ ಫೈನಲ್ಸ್‍ನಲ್ಲಿ ಸಿಂಗ್ 4ನೇ ಸ್ಥಾನ ಪಡೆದಿದ್ದರು. ಮಿಲ್ಖಾ ಸಿಂಗ್ ಅವರು 45.73 ಸೆಕೆಂಡುಗಳಲ್ಲಿ ಓಟವನ್ನು ಮುಗಿಸಿದ್ದು 40 ವರ್ಷಗಳ ಕಾಲ ನ್ಯಾಷನಲ್ ರೆಕಾರ್ಡ್ ಆಗಿತ್ತು. 1998ರಲ್ಲಿ ಪರಮ್‍ಜೀತ್ ಸಿಂಗ್ ಈ ದಾಖಲೆ ಮುರಿದಿದ್ದರು. ಮಿಲ್ಖಾ ಸಿಂಗ್ 1956 ಮತ್ತು 1964ರ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ್ದರು. 1959ರಲ್ಲಿ ಅವರಿಗೆ ಭಾರತದ 4ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮಿಲ್ಖಾ ಸಿಂಗ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Translate »