ಮೈಸೂರಲ್ಲಿ ಐಎಂಎಫ್ ಮುಖ್ಯ  ಸಲಹೆಗಾರ್ತಿ ಗೀತಾ ಗೋಪಿನಾಥ್ ನಗೆಪಾಟಲಿಗೀಡಾಗುತ್ತಿರುವ  ವಿಶ್ವನಾಥ್: ಶಾಸಕ ನಾಗೇಂದ್ರ
ಮೈಸೂರು

ಮೈಸೂರಲ್ಲಿ ಐಎಂಎಫ್ ಮುಖ್ಯ ಸಲಹೆಗಾರ್ತಿ ಗೀತಾ ಗೋಪಿನಾಥ್ ನಗೆಪಾಟಲಿಗೀಡಾಗುತ್ತಿರುವ ವಿಶ್ವನಾಥ್: ಶಾಸಕ ನಾಗೇಂದ್ರ

June 20, 2021

ಮೈಸೂರು,ಜೂ.19(ಎಂಟಿವೈ)-ಸಚಿವ ಸ್ಥಾನ ಸಿಗಲಿಲ್ಲ ಎಂಬ ಏಕೈಕ ಕಾರಣ ದಿಂದಾಗಿ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಾ ನಗೆಪಾಟ ಲಿಗೆ ಈಡಾಗುತ್ತಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ಟೀಕಿಸಿದ್ದಾರೆ.
ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ವಿಶ್ವನಾಥ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಟೀಕಿಸುತ್ತಿದ್ದಾರೆ, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅವರ ಹೇಳಿಕೆ ಗಾಳಿಯಲ್ಲಿ ಗುಂಡು ಹಾರಿಸಿದಂತಾಗಿದೆ. ಅವರ ಮಾತುಗಳಿಂದ ಪP್ಷÀಕ್ಕಷ್ಟೇ ನಷ್ಟವಾಗುತ್ತಿಲ್ಲ. ಅವರ ಇಮೇಜ್‍ಗೂ ಹಾನಿಯಾಗುತ್ತ್ತಿದೆ. ಹೀಗಾಗಿ, ಅನಗತ್ಯ ಹೇಳಿಕೆ ಕೊಟ್ಟು ನಗೆಪಾಟಲಿಗೆ ಈಡಾಗಬೇಡಿ ಎಂದು ಸಲಹೆ ನೀಡಿದರು. ವಿಶ್ವನಾಥ್ ಪದೇ ಪದೆ ಮಾಧ್ಯಮಗಳೆದುರು ಹೋಗುವುದು ನೋಡಿದರೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಹತಾಶೆ ಕಾಣುತ್ತದೆ. ಪP್ಷÀ ಹಾಗೂ ಮುಖಂಡರ ವಿರುದ್ಧ ಈ ರೀತಿ ಮಾತ ನಾಡುವುದು ಸರಿಯಲ್ಲ. ವಿಶ್ವನಾಥ್ ಬಿಜೆಪಿಗೆ ಹೊಸಬರು. ಪP್ಷÀದ ಸಿದ್ಧಾಂತ ಅವರಿಗೆ ಗೊತ್ತಿಲ್ಲ. ಅವರ ಎಲ್ಲ ಆರೋಪಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಅವರು ಇತಿಮಿತಿ ಅರಿತು ಮಾತನಾಡಬೇಕು. ಅವರ ನಡೆನುಡಿಯನ್ನು ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

Translate »