ರೋಗಿಗಳ ಸಂಬಂಧಿಕರು ಮೆಡಿಕಲ್ ಬಿಲ್ ಪಾವತಿಸಲ್ಲ;  ಪ್ರಶ್ನಿಸಿದರೆ ದೌರ್ಜನ್ಯ ನಡೆಸುತ್ತಾರೆ: `ಮಹಾನ್’ ದೂರು
ಮೈಸೂರು

ರೋಗಿಗಳ ಸಂಬಂಧಿಕರು ಮೆಡಿಕಲ್ ಬಿಲ್ ಪಾವತಿಸಲ್ಲ; ಪ್ರಶ್ನಿಸಿದರೆ ದೌರ್ಜನ್ಯ ನಡೆಸುತ್ತಾರೆ: `ಮಹಾನ್’ ದೂರು

June 20, 2021

ಮೈಸೂರು, ಜೂ.19(ಆರ್‍ಕೆ)-ರೋಗಿಗಳಿಗೆ ನೀಡಿದ ಚಿಕಿತ್ಸಾ ವೆಚ್ಚದ ಬಿಲ್‍ಗಳನ್ನು ಸಂಬಂಧಿಕರು ಸರಿಯಾಗಿ ಪಾವತಿಸದೇ ವಿಳಂಬ ಮಾಡುತ್ತಿರು ವುದರಿಂದ ಖಾಸಗಿ ಆಸ್ಪತ್ರೆಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದಿ ಮೈಸೂರ್ ಅಸೋಸಿಯೇಷನ್ ಆಫ್ ಹಾಸ್ಪಿಟಲ್ಸ್, ನರ್ಸಿಂಗ್ ಹೋಮ್ಸ್, ಕ್ಲಿನಿಕ್ಸ್ ಅಂಡ್ ಡಯಾಗ್ನೊಸ್ಟಿಕ್ ಸೆಂಟರ್ಸ್ (ಒಂಊಂಓ) ಪದಾಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‍ರನ್ನು ಸಂಪರ್ಕಿ ಸಿದ ಮಹಾನ್ ಅಧ್ಯಕ್ಷ ಡಾ. ಕೆ.ಜಾವಿದ್ ನಯೀಮ್ ನೇತೃತ್ವದ ನಿಯೋಗವು, ಸುದೀರ್ಘ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ವೈದ್ಯಕೀಯ ಚಿಕಿತ್ಸಾ ಬಿಲ್ ಪಾವತಿಸಲು ಸಂಬಂಧಿಕರು ನಿರಾಕರಿಸುತ್ತಿದ್ದು, ಅದರಿಂದ ಖಾಸಗಿ ಆಸ್ಪತ್ರೆಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ನಂತರ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಡಾ.ಜಾವಿದ್ ನಯೀಮ್ ಅವರು, ಸರ್ಕಾರ ದಿಂದ ನಿಗದಿಪಡಿಸಿರುವ ಮಾರ್ಗಸೂಚಿಯನ್ವಯ ಚಿಕಿತ್ಸಾ ವೆಚ್ಚದ ಬಿಲ್ ನೀಡಿದರೂ ರೋಗಿಗಳ ಸಂಬಂ ಧಿಕರು ಪಾವತಿ ಮಾಡಲು ನಿರಾಕರಿಸುತ್ತಿದ್ದಾರೆ ಎಂದರು.

ತಮ್ಮ ಆರ್ಥಿಕ ಪರಿಸ್ಥಿತಿಯನ್ನಷ್ಟೇ ಹೇಳಿಕೊಂಡು, ಮಾಧ್ಯಮದವರ ಸಹಾಯ ಪಡೆದು, ಖಾಸಗಿ ಆಸ್ಪತ್ರೆಗಳ ವಿರುದ್ಧ ಆರೋಪ ಹೊರಿಸಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕೆಲ ಸಮಾಜಘಾತುಕ ವ್ಯಕ್ತಿಗಳ ನೆರವಿನಿಂದ ಧಮ್ಕಿ ಹಾಕುತ್ತಾರೆ ಎಂದರು.

ಅದರಿಂದಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ಕೊರೊನಾ ಸೇರಿದಂತೆ ಸುದೀರ್ಘ ಕಾಲ ಐಸಿಯುನಲ್ಲಿ ಚಿಕಿತ್ಸೆ ಅಗತ್ಯವಿರುವ ರೋಗಿಗಳ ವೈದ್ಯಕೀಯ ಸೇವೆ ಒದಗಿಸಲು ಸಾಧ್ಯ ವಾಗದ ಸ್ಥಿತಿ ಬಂದಿದೆ ಎಂದ ಡಾ. ಜಾವಿದ್, ಇದೇ ಪರಿಸ್ಥಿತಿ ಮುಂದುವರೆದಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ದಾಖಲಿಸಿಕೊಳ್ಳದೇ ಸರ್ಕಾರಿ ಆಸ್ಪತ್ರೆ ಗಳಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂಬುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.

ಈ ಕುರಿತು ಸಂಬಂಧಪಟ್ಟ ಜಾರಿ ಪ್ರಾಧಿಕಾರ ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಖಾಸಗಿ ಆಸ್ಪತ್ರೆ ಗಳ ಮೇಲಿನ ದೌರ್ಜನ್ಯ ತಪ್ಪಿಸಲು ಕ್ರಮ ವಹಿಸುವು ದಾಗಿ ಡಿಸಿ ಡಾ.ಬಗಾದಿ ಗೌತಮ್ ಅವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು. ನಿಯೋಗದಲ್ಲಿ ಐಎಂಎ ಕಾರ್ಯದರ್ಶಿ ಡಾ. ಚಂದ್ರಬಾನ್ ಸಿಂಗ್ ಸೇರಿದಂತೆ ಮಹಾನ್ ಪದಾಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಜರಿದ್ದರು.

Translate »