ಇನ್ನರ್‍ವೀಲ್ ನಿರ್ಮಿತ ಬಸ್ ತಂಗುದಾಣ ಲೋಕಾರ್ಪಣೆ
ಮೈಸೂರು

ಇನ್ನರ್‍ವೀಲ್ ನಿರ್ಮಿತ ಬಸ್ ತಂಗುದಾಣ ಲೋಕಾರ್ಪಣೆ

June 20, 2021

ಮೈಸೂರು, ಜೂ.19(ಎಂಟಿವೈ)- ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಚಾಮರಾಜನಗರ, ಗುಂಡ್ಲು ಪೇಟೆ, ತಮಿಳುನಾಡು, ಕೇರಳ ಮೊದಲಾದೆಡೆ ತೆರಳುವ ಪ್ರಯಾಣಿಕರಿಗಾಗಿ ಗನ್‍ಹೌಸ್ ವೃತ್ತದ ಬಳಿ ನಿರ್ಮಿಸಿದ ಬಸ್ ತಂಗುದಾಣವನ್ನು ಶಾಸಕ ಎಸ್.ಎ.ರಾಮದಾಸ್ ಶನಿವಾರ ಬೆಳಗ್ಗೆ ಉದ್ಘಾಟಿಸಿದರು. ಮೈಸೂರು ಪಾಲಿಕೆ ಸಹಯೋಗದಲ್ಲಿ ಇನ್ನರ್‍ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ 5 ಲಕ್ಷ ರೂ. ವೆಚ್ಚದಲ್ಲಿ ತಂಗುದಾಣ ನಿರ್ಮಿಸಿದೆ.

ಇದೇ ವೇಳೆ ಮಾತನಾಡಿದ ಶಾಸಕರು, ಬಸ್‍ಗಾಗಿ ಗನ್‍ಹೌಸ್ ಬಳಿ ಕಾಯುತ್ತಿದ್ದ ಪ್ರಯಾಣಿಕರಿಗೆ ತಂಗು ದಾಣವಿಲ್ಲದೇ ತೊಂದರೆಯಾಗುತ್ತಿತ್ತು. ಇನ್ನರ್‍ವೀಲ್ ಕ್ಲಬ್ ಆಫ್ ಮೈಸೂರು ತಂಗುದಾಣ ನಿರ್ಮಿಸಿ ಪಾಲಿಕೆ ವಶಕ್ಕೆ ನೀಡಿದೆ. ಪ್ರಯಾಣಿಕರಿಗೆ ಇದರಿಂದ ಬಹಳ ಪ್ರಯೋ ಜನವಾಗಲಿದೆ ಎಂದರು. ಇನ್ನರ್‍ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಅಧ್ಯಕ್ಷೆ ಕವಿತಾ ವಿನೋದ್, ಪ್ರಭಾರ ಮೇಯರ್ ಅನ್ವರ್ ಬೇಗ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀ ಕಾಂತರೆಡ್ಡಿ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಇನ್ನರ್ ವೀಲ್ ಕ್ಲಬ್ ಛೇರ್ಮನ್ ವಾರಿಜಾ ಜಗದೀಶ್, ಕೆ.ಎಸ್. ಪಾರ್ವತಿ ವಿ.ಶೆಟ್ಟಿ, ಸುಶೀಲಾ ಮರೀಗೌಡ, ಇನ್ನರ್‍ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಕಾರ್ಯದರ್ಶಿ ಲಕ್ಷ್ಮಿ ಅರುಣ್, ನಿಯೋಜಿತ ಅಧ್ಯಕ್ಷೆ ಸಂಧ್ಯಾ ದಿನೇಶ್, ಮಾಜಿ ಅಧ್ಯಕ್ಷೆ ಸೌಜನ್ಯ ಅತ್ತಾವರ, ಚಂದ್ರಿಕಾ ಸುರೇಶ್, ರಚನಾ ನಾಗೇಶ್, ಪ್ರಿಯಾ ತಂತ್ರಿ, ಮಮತಾ ಸುಂದರರಾಜ್, ಎನ್. ನಂದಿನಿ, ವಿದ್ಯಾ, ರೀನಾ ಪಾಲ್, ಸುಚೇತ, ಅನಿತಾ ಸುರೇಶ್, ಭಾರತಿ, ಸುಮಿತಾ, ಸುಶೀಲಾ, ಪ್ರೀತಿ ಇದ್ದರು.

Translate »