ದಲಿತ ಕವಿ ಸಿದ್ದಲಿಂಗಯ್ಯರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು
ಮೈಸೂರು

ದಲಿತ ಕವಿ ಸಿದ್ದಲಿಂಗಯ್ಯರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು

June 21, 2021

ಮೈಸೂರು, ಜೂ.20(ಆರ್‍ಕೆಬಿ)- ಇತ್ತೀ ಚೆಗೆ ನಿಧನರಾದ ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ಪೇಟೆ ಕೃಷ್ಣ, ದಲಿತ ಕವಿ ಸಿದ್ದ ಲಿಂಗಯ್ಯ ಅವರಿಗೆ ಮೈಸೂರು ಜಿಲ್ಲಾ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿ ಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರಿನ ಕಾಂಗ್ರೆಸ್ ಆಯೋಜಿಸಿದ್ದ `ನಮನ ಸಂಗಮ’ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾ ಯಣ, ಮಾಜಿ ಶಾಸಕ ವಾಸು, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರ್ ನಾಥ್ ಅವರು ಅಗಲಿದ ಹಿರಿಯ ಚೇತನ ಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್. ಧ್ರುವನಾರಾಯಣ, ಸ್ವಾತಂತ್ರ್ಯ ಹೋರಾಟ ಗಾರ ಹೆಚ್.ಎಸ್.ದೊರೆಸ್ವಾಮಿ ಸರ್ಕಾರ ಗಳಿಗೆ ಎಚ್ಚರಿಕೆ ಗಂಟೆಂiÀiಂತಿದ್ದರು. ಭ್ರಷ್ಟಾ ಚಾರ, ಭೂ ಒತ್ತುವರಿ ಇತ್ಯಾದಿ ವಿಚಾರಗಳ ಕುರಿತಂತೆ ಸರ್ಕಾರವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಅವರು ನಡೆ ಸಿದ ಹೋರಾಟಗಳ ಬಗ್ಗೆ ವಿವರಿಸಿದರು.

ದಲಿತ ಕವಿ ಸಿದ್ದಲಿಂಗಯ್ಯ ಡಾ.ಬಿ.ಆರ್. ಅಂಬೇಡ್ಕರ್, ಪೆರಿಯಾರ್, ಲೋಹಿಯಾರ ವಿಚಾರಧಾರೆಗಳಿಂದ ಪ್ರೇರೇಪಿತರಾಗಿ ಬಂಡಾಯ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯದ ದಿಕ್ಕನ್ನು ಬದಲಿಸಿದರು. `ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’, `ದಲಿತರು ಬಂದರು ದಾರಿ ಬಿಡಿ…’, ನನ್ನ ಜನಗಳು..’ ಇತ್ಯಾದಿ ಕ್ರಾಂತಿ ಕಾರಿ ಕವಿತೆಗಳ ಮೂಲಕ ಜನರನ್ನು ಬಡಿ ದೆಬ್ಬಿಸಿದರು. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು ಎಂದರು.
ಮಾಜಿ ಸ್ಪೀಕರ್ ಕೃಷ್ಣ ಗಾಂಧೀವಾದಿ ಯಾಗಿದ್ದು, ಸರಳ-ಸಜ್ಜನಿಕೆಗೆ ಹೆಸರಾಗಿ ದ್ದರು. ವಿಧಾನಸಭಾಧ್ಯಕ್ಷರಾದ ಬಳಿಕ ಯುವ ಶಾಸಕರನ್ನು ಗುರ್ತಿಸಿ ಮಾತನಾಡಲು ಹೆಚ್ಚು ಅವಕಾಶ ಕಲ್ಪಿಸಿಕೊಟ್ಟಿದ್ದರು ಎಂದು ಸ್ಮರಿಸಿದರು. ಮಾಜಿ ಶಾಸಕ ವಾಸು ಮಾತನಾಡಿ, ಸಿದ್ದಲಿಂಗಯ್ಯನವರು ನಿಧನ ರಾದಾಗ ಮಾಧ್ಯಮಗಳು ಸಾಹಿತಿಗೆ ನಿರೀ ಕ್ಷೆಗೂ ಮೀರಿ ಹೆಚ್ಚು ಲೇಖನಗಳನ್ನು ನೀಡಿದ್ದು ನೋಡಿದರೆ ಅವರ ವ್ಯಕ್ತಿತ್ವ ಎಂಥಹದ್ದು ಎಂಬುದು ತಿಳಿದು ಬರುತ್ತದೆ. ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರದ್ದು ದೊಡ್ಡ ವ್ಯಕ್ತಿತ್ವ. ಸರ್ಕಾರದ ತಪ್ಪು ಒಪ್ಪುಗಳನ್ನು ವಿರೋಧಿಸುತ್ತಿದ್ದರು. ಅವ ರಂತಹ ಸ್ವಾತಂತ್ರ್ಯ ಸೇನಾನಿಗಳು ಸ್ವಾತಂತ್ರ್ಯ ಕ್ಕಾಗಿ ಲಾಠಿ ಏಟು, ಗುಂಡಿನ ಏಟು ತಿಂದಿ ದ್ದರಿಂದಲೇ ನಾವಿಂದು ದೇಶದಲ್ಲಿ ನೆಮ್ಮದಿ ಯಿಂದ ಬದುಕಲು ಸಾಧ್ಯವಾಗಿದೆ. ಹಾಗಾಗಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ವಾಗಿದೆ ಎಂದರು. ಮಾಜಿ ಸ್ಪೀಕರ್ ಕೃಷ್ಣ ಅವರೂ ಸಹ ಸರಳ, ಸಜ್ಜನಿಕೆ, ಸತ್ಯ, ಪ್ರಾಮಾಣಿಕತೆ, ಸರಳತೆಗೆ ಹೆಸರಾದವರು ಎಂದು ಸ್ಮರಿಸಿದರು.

ವಿಧಾನಪರಿಷತ್ ಸದಸ್ಯ ಆರ್.ಧರ್ಮ ಸೇನಾ ಮಾತನಾಡಿ, ಹಿರಿಯರ ಅನುಭವ ಅವರ ಕಾಲಾನಂತರ ಅವರೊಂದಿಗೆ ಹೋಗಿಬಿಡುತ್ತವೆ ಎನ್ನಲು ಮಾಜಿ ಸ್ಪೀಕರ್ ಕೃಷ್ಣ ಸ್ಪಷ್ಪ ನಿದರ್ಶನ. ಕೆಲವು ವ್ಯಕ್ತಿಗಳನ್ನು ಕಳೆದುಕೊಂಡ ನಂತರವೇ ಅವರನ್ನು ಕಳೆದುಕೊಂಡ ನೋವು ಗೊತ್ತಾಗುತ್ತದೆ. ಹುಟ್ಟುವಾಗ ಹೆಸರಿಟ್ಟುಕೊಂಡು ಹುಟ್ಟುವುದಿಲ್ಲ. ಆದರೆ ಸತ್ತ ಮೇಲೂ ಹೆಸರುಳಿಸಿಕೊಂಡ ವರು ಹೆಚ್.ಎಸ್.ದೊರೆಸ್ವಾಮಿ, ದಲಿತ ಕವಿ ಸಿದ್ದಲಿಂಗಯ್ಯ, ಕೆ.ಆರ್.ಪೇಟೆ ಕೃಷ್ಣನಂತ ಹವರು ಎಂದು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕಾಂಗ್ರಸ್ ಸೇವಾದಳದ ನಗರಾಧ್ಯಕ್ಷ ಗಿರೀಶ್, ಮುಖಂಡರಾದ ಡೈರಿ ವೆಂಕಟೇಶ್, ಶಿವ ಲಿಂಗಯ್ಯ ಇನ್ನಿತರರು ಉಪಸ್ಥಿತರಿದ್ದರು.

Translate »