ಕ್ರೆಡೈ ಯೂತ್ ವಿಂಗ್ ಉದ್ಘಾಟನೆ
ಮೈಸೂರು

ಕ್ರೆಡೈ ಯೂತ್ ವಿಂಗ್ ಉದ್ಘಾಟನೆ

November 4, 2018

ಮೈಸೂರು: ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ ಅಸೋಸಿಯೇಷÀನ್ ಆಫ್ ಇಂಡಿಯಾ(ಕ್ರೆಡೈ)ನ ಅಂಗ ಸಂಸ್ಥೆ ‘ಕ್ರೆಡೈ ಯೂತ್ ವಿಂಗ್’ ಇಂದು ಉದ್ಘಾಟನೆಯಾಯಿತು. ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾ ರಂಭದಲ್ಲಿ ಕ್ರೆಡೈ ರಾಜ್ಯಾಧ್ಯಕ್ಷ ಡಾ.ವಿ.ಕೆ.ಜಗದೀಶ್ ಬಾಬು ಉದ್ಘಾಟಿಸಿದರು.

ದೇಶದ ಎಲ್ಲಾ ವರ್ಗದ ಜನರಿಗೆ ಮನೆಯನ್ನು ಕಲ್ಪಿಸಿಕೊಡುವ ಸಂಸ್ಥೆಯ ಧ್ಯೇಯವನ್ನು ಪಾಲಿಸಬೇಕು. ದೇಶದಲ್ಲಿ ಭ್ರಷ್ಟಾಚಾರ ಮುಕ್ತವಾಗಿ ನಮ್ಮ ಸಂಸ್ಥೆ ಕಾರ್ಯ ನಿರ್ವಹಿ ಸುತ್ತಿದೆ. ಅದಕ್ಕೆ ಸದಸ್ಯರೆಲ್ಲರೂ ಸಹಕಾರ ನೀಡಬೇಕು ಎಂದರು. ಕ್ರೆಡೈನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಕೆ.ಶ್ರೀರಾಮ್ ಮಾತನಾಡಿ, ನಮ್ಮದು ಯುವ ದೇಶ. ಪ್ರಪಂಚಕ್ಕೆ ಮಾನವ ಸಂಪನ್ಮೂಲವನ್ನು ನೀಡಿದ್ದು, ನಾವು ಆರ್ಥಿಕವಾಗಿ ಬೆಳೆಯುತ್ತಿದ್ದೇವೆ ಎಂದರು. ರಿಯಲ್ ಎಸ್ಟೇಟ್‍ನಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಅದಕ್ಕೆ ವಿರುದ್ಧವಾಗಿ ಹಾಗೂ ಜನ ಸ್ನೇಹಿಯಾಗಿ ಕ್ರೆಡೈ ಸಂಸ್ಥೆ ಕೆಲಸ ಮಾಡುತ್ತಿದೆ. ಯುವಕರು ಭ್ರಷ್ಟಾಚಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು. ದೇಶದ 23 ರಾಜ್ಯದಲ್ಲಿ ಕ್ರೆಡೈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಅಂಗ ಸಂಸ್ಥೆ ಸ್ಥಾಪನೆಯಾಗಿರುವುದು ಖುಷಿ ತಂದಿದೆ ಎಂದರು. ಕ್ರೆಡೈ ಮೈಸೂರು ಘಟಕದ ಅಧ್ಯಕ್ಷ ವೈ.ಜಿ.ಚಿನ್ನಸ್ವಾಮಿ, ಕ್ರೆಡೈ ಯೂತ್ ವಿಂಗ್ ಅಧ್ಯಕ್ಷ ಸಂದೀಪ್ ಸುಬ್ರಹ್ಮಣ್ಯ, ಮುರಳಿ, ರಾಜೀವ್ ಕೃಷ್ಣ, ಶ್ರದ್ಧಾ ಪಾಠಕ್ ಉಪಸ್ಥಿತರಿದ್ದರು.

Translate »