ಅನಗತ್ಯ ಚುನಾವಣೆಯಿಂದ ಮತದಾರರ ನಿರಾಸಕ್ತಿ: ಸಾಲಿಗ್ರಾಮದಲ್ಲಿ ಮತ ಚಲಾಯಿಸಿದ ಸಚಿವ ಸಾ.ರಾ.ಮಹೇಶ್ ವ್ಯಾಖ್ಯಾನ
ಮೈಸೂರು

ಅನಗತ್ಯ ಚುನಾವಣೆಯಿಂದ ಮತದಾರರ ನಿರಾಸಕ್ತಿ: ಸಾಲಿಗ್ರಾಮದಲ್ಲಿ ಮತ ಚಲಾಯಿಸಿದ ಸಚಿವ ಸಾ.ರಾ.ಮಹೇಶ್ ವ್ಯಾಖ್ಯಾನ

November 4, 2018

ಚುಂಚನಕಟ್ಟೆ: ಜನಾ ದೇಶಕ್ಕೆ ವಿರುದ್ಧವಾಗಿ ಚುನಾವಣಾ ಆಯೋಗವು ನಡೆಸುತ್ತಿರುವ ಚುನಾವಣೆಯಿಂದ ಮತ ದಾರರಿಗೆ ಮತದಾನ ಮಾಡಲು ಆಸಕ್ತಿ ಇಲ್ಲದಂತಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದರು.

ಸಾ.ರಾ.ಮಹೇಶ್ ಅವರ ಹುಟ್ಟೂರು ಸಾಲಿಗ್ರಾಮದ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ-79ರಲ್ಲಿ ಪತ್ನಿ ಅನಿತಾ ಹಾಗೂ ಪುತ್ರ ಡಾ.ಧನುಷ್ ಅವರೊಂದಿಗೆ ಮತದಾನ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಅಭ್ಯರ್ಥಿ ಶಿವರಾಮೇಗೌಡ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳ ಅಂತರ ದಿಂದ ಜಯಭೇರಿ ಬಾರಿಸಲಿದ್ದು, ಪ್ರಸ್ತುತ ನಡೆಯುತ್ತಿರುವ ಉಪ ಚುನಾವಣೆಯ 5 ಕ್ಷೇತ್ರಗಳಲ್ಲಿಯೂ ಮೈತ್ರಿಕೂಟ ಗೆಲುವು ಸಾಧಿ ಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ತಾಲೂಕಿನ ಎರಡು ಮೂರು ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸುವ ಬೆದರಿಕೆಯನ್ನು ಒಡ್ಡಿದ್ದರು. ಈಗಾಗಲೇ ಆ ಗ್ರಾಮ ಗಳಲ್ಲೂ ಸಹ ಮತದಾನ ನಡೆಯುತ್ತಿದೆ. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪರಸ್ಪರ ಬೆಂಬಲ: ಕಾಂಗ್ರೆಸ್ ಅಭ್ಯರ್ಥಿ ಇರುವ ಕಡೆ ಜೆಡಿಎಸ್ ಬೆಂಬಲಿಸಲಿದ್ದು, ಜೆಡಿಎಸ್ ಅಭ್ಯರ್ಥಿ ಇರುವೆಡೆ ಕಾಂಗ್ರೆಸ್ ಬೆಂಬಲಿಸಬೇಕು. ಇದನ್ನು ಬಿಟ್ಟು, ವೈಯಕ್ತಿಕ ದ್ವೇಷಕ್ಕೆ ಮತದಾನ ಮಾಡುವುದು ಮತ್ತು ವಿರೋಧ ಪಕ್ಷಕ್ಕೆ ಮತ ನೀಡುವುದಾಗಿ ಹೇಳಿಕೆ ನೀಡುತ್ತಿರುವ ಕಾರ್ಯಕರ್ತರನ್ನು ಪಕ್ಷದ ಮುಖಂಡರು ಸರಿಪಡಿಸಲಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ದಲ್ಲಿದ್ದಾಗ ಆ ಪಕ್ಷದ ಮುಖಂಡರು ಕುರುಬ ಸಮುದಾಯ ಹೆಚ್ಚಿರುವ ಗ್ರಾಮಗಳಿಗೆ 40 ಕೋಟಿ ರೂ. ಅನುದಾನ ಸಿಗುವಂತೆ ನೋಡಿ ಕೊಂಡಿದ್ದರು. ಅವುಗಳಲ್ಲಿ ಕೆಲವು ಕಾಮಗಾರಿಗಳು ಪ್ರಾರಂಭದ ಹಂತ ದಲ್ಲಿದ್ದು, ಒಂದೆರಡು ಕಾಮಗಾರಿಗಳನ್ನು ಚುನಾವಣೆ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಸಚಿವರ ತಂದೆ ಎಸ್.ಆರ್. ರಾಮೇಗೌಡ, ಮುಖಂಡರಾದ ಪೂರ್ಣಚಂದ್ರ, ಗುತ್ತಿಗೆದಾರ ಎಸ್.ಆರ್.ಮಹೇಂದ್ರ, ಅಯಾಜ್ ಪಾಷ, ಮಂಜುನಾಥ್, ಎಲ್‍ಐಸಿ ಭಾಸ್ಕರ, ದಿನೇಶ್, ನರಸಿಂಹ, ಮಂಜುನಾಥ್, ಎಸ್.ಆರ್.ರವೀಶ್ ಮತ್ತಿತರರಿದ್ದರು.

ಶಾಸಕನಾಗಿ, ಮಂತ್ರಿಯಾಗಿ ಪ್ರಾಮಾಣಿಕ ಹಾಗೂ ಜಾತ್ಯಾತೀತವಾಗಿ ಕೆಲಸ ಮಾಡು ತ್ತಿದ್ದೇನೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ನೀಡಿದ ಗ್ರಾಮಗಳಲ್ಲಿ ಎರಡು ಗ್ರಾಮಗಳು ಈಗ ಚುನಾವಣೆ ಬಹಿಷ್ಕಾರದ ಬೆದರಿಕೆ ಒಡ್ಡುತ್ತಿರುವುದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ತಂತ್ರ. ಈ ಬಗ್ಗೆ ಚುನಾ ವಣೆ ನಂತರ ಕಾಂಗ್ರೆಸ್ ವರಿಷ್ಠರು ವಿವರಣೆ ನೀಡಲಿದ್ದಾರೆ. – ಸಾ.ರಾ.ಮಹೇಶ್, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರು.

Translate »