ಮೈಸೂರು: ಚಿಪ್ಪು ಹಂದಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳ ಬಂಧಿಸಿದೆ. ನಾಗರಾಜು ಪುತ್ರ ಬಸವರಾಜು(30), ಮಧು ಪುತ್ರ ಯೋಗೇಶ್(29) ಹಾಗೂ ಸಿದ್ದಯ್ಯ ಪುತ್ರ ಬಸವರಾಜು(31) ಬಂಧಿತ ಆರೋಪಿಗಳು. ಇವರು ಚೀಲದಲ್ಲಿ ಚಿಪ್ಪು ಹಂದಿಯನ್ನು ಇಟ್ಟುಕೊಂಡು ನಂಜನ ಗೂಡು-ಚಾಮರಾಜನಗರ ರಸ್ತೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಚಿಪ್ಪು ಹಂದಿಯನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಕೃತ್ಯಕ್ಕೆ ಬಳಸಿದ್ದ ಪ್ಯಾಷನ್ ಪ್ರೋ(ಕೆಎ-45, ವೈ-2711) ಹಾಗೂ ಹೀರೋ ಸ್ಪ್ಲೆಂಡರ್(ಕೆಎ-09), ಇಎಕ್ಸ್-7462) ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸಿಎಫ್ ಪೂವಯ್ಯ, ಡಿಆರ್‍ಎಫ್ ಮೋಹನ್, ಗಾರ್ಡ್‍ಗಳಾದ ಸತೀಶ್ ಹಾಗೂ ಶರಣಪ್ಪ ತಂಡ ದಾಳಿ ನಡೆಸಿ, ಅಪರೂಪದ ಪ್ರಾಣಿ ಚಿಪ್ಪು ಹಂದಿ ಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ