ನಿರಾಣಿ `ಖಾಸಗೀಕರಣ’ ಹೇಳಿಕೆಗೆ ಕುರುಬೂರು ಟೀಕೆ
ಮೈಸೂರು

ನಿರಾಣಿ `ಖಾಸಗೀಕರಣ’ ಹೇಳಿಕೆಗೆ ಕುರುಬೂರು ಟೀಕೆ

June 11, 2020

ಮೈಸೂರು, ಜೂ.10(ಆರ್‍ಕೆಬಿ)- ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸಲಿ ಎಂಬ ಮುರುಗೇಶ್ ನಿರಾಣಿಯವರ ಹೇಳಿಕೆ ಹಾಸ್ಯಾಸ್ಪದ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದ್ದಾರೆ.

ಹಿಂದಿನ ಸರ್ಕಾರಗಳ ವೈಫಲ್ಯಗಳು, ಅಸಮರ್ಪಕ ಆಡಳಿತ ವ್ಯವಸ್ಥೆ ಯಿಂದಾಗಿ ಸರ್ಕಾರಿ, ಸಹಕಾರಿ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿ ಸಿವೆಯೇ ಹೊರತು, ಇದಕ್ಕೆ ರೈತರು ಕಾರಣರಲ್ಲ. ಗುಜರಾತ್‍ನ 17 ಸಹಕಾರಿ ಸಕ್ಕರೆ ಕಾರ್ಖಾನೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಾ ದೇಶದಲ್ಲಿಯೇ ಮಾದರಿ ಸಕ್ಕರೆ ಕಾರ್ಖಾನೆಗಳು ಎನಿಸಿಕೊಂಡಿವೆ. ಆದರೆ ಕರ್ನಾಟಕದಲ್ಲೇಕೆ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸಬೇಕು. ನಿರಾಣಿ ಗುತ್ತಿಗೆ ಪಡೆದಿರುವ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ತಕ್ಷಣವೇ ಆರಂಭಿಸಿ, ಕಬ್ಬು ನುರಿಸಲು ಮುಂದಾಗಲಿ. ರೈತರಿಗೆ ಸಕಾಲಕ್ಕೆ ಕಬ್ಬಿನ ಹಣ ಪಾವತಿಸಲಿ ಎಂದು ಆಗ್ರಹಿಸಿದ್ದಾರೆ.

Translate »