ಮೈಸೂರು, ಜೂ.10- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಜೂ.12ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳ ಲಾಗಿರುವುದರಿಂದ ಗೋಕುಲಂ 1ನೇ ಮತ್ತು 2ನೇ ಹಂತ, ಮಾದೇ ಶ್ವರ ಬಡಾವಣೆ, ವಿಜಯನಗರ 1ನೇ ಮತ್ತು 2ನೇ ಹಂತÀ, ಹಿನಕಲ್, ಯಾದವಗಿರಿ, ಮಂಜುನಾಥಪುರ, ಮಹಾಜನ ಲೇಔಟ್, ಒಂಟಿ ಕೊಪ್ಪಲ್, ಗೋಕುಲಂ 3ನೇ ಹಂತ, ಜಯಲಕ್ಷ್ಮಿಪುರಂ, ಸಿಎಫ್‍ಟಿ ಆರ್‍ಐ, ಡಿ.ಸಿ.ಹೌಸ್, ನರ್ಸ್ ಕ್ವಾಟ್ರಸ್, ಆಕಾಶವಾಣಿ, ಇಎಸ್‍ಐ ಆಸ್ಪತ್ರೆ, ಹಸುಕರು ಪಾರ್ಕ್, ಗೋಕುಲಂ ಪಾರ್ಕ್, ಕಾಳಿದಾಸ ರೋಡ್, ಯಾದವಗಿರಿ ಕೈಗಾರಿಕಾ ಪ್ರದೇಶ, ವಿಜಯನಗರ ವಾಟರ್ ಸಪ್ಲೈ, ಆದಿಪಂಪ ರಸ್ತೆ, ಎಂ.ಎಂ.ಸಿ ಲೇಡಿಸ್ ಹಾಸ್ಟಲ್, ಜನರಲ್ ತಿಮ್ಮಯ್ಯ ರಸ್ತೆ, ಬೃಂದಾವನ, ಯೋಗನರಸಿಂಹಸ್ವಾಮಿ ದೇವಸ್ಥಾನ, ಆಯಿಸ್ಟಾರ್ ಬೇ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅಲ್ಲದೆ, ರಾಮಕೃಷ್ಣನಗರ ಉಪವಿಭಾಗ ವ್ಯಾಪ್ತಿಯಲ್ಲೂ ಕೇಬಲ್ ಅಳವಡಿಸುವ ಕೆಲಸ ಹಮ್ಮಿಕೊಳ್ಳಲಾಗಿರುವುದರಿಂದ ಜನತಾನಗರ, ಟಿ.ಕೆ. ಲೇಔಟ್, ಗಂಗೋತ್ರಿ, ಹುಡ್ಕೋ, ಬಸವೇಶ್ವರನಗರ, ವಿವೇಕಾನಂದನಗರ, ನಾಗಮ್ಮ ಛತ್ರ ರಸ್ತೆ, ನಿಮಿಷಾಂಬ ಬಡಾವಣೆ, ಶ್ರೀರಾಂಪುರ, ದೇವಯ್ಯನಹುಂಡಿ, ಮಧುವನ ಬಡಾವಣೆ, ಕಂದಾಯ ಲೇಔಟ್, ಐIಅ ಕಾಲೋನಿ, ಃಇಒಐ ಲೇಔಟ್, ಶಾರದದೇವಿನಗರ, ನಿವೇದಿತನಗರ, ಆನಂದನಗರ, ಬೋಗಾದಿ ಆಶ್ರಯ ಲೇಔಟ್ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.