ಮೈಸೂರು ಗಾಲ್ಫ್ ಕ್ಲಬ್ ಅಧ್ಯಕ್ಷರಾಗಿ ಸಿ.ಎಸ್.ರವಿಶಂಕರ್ ಆಯ್ಕೆ
ಮೈಸೂರು

ಮೈಸೂರು ಗಾಲ್ಫ್ ಕ್ಲಬ್ ಅಧ್ಯಕ್ಷರಾಗಿ ಸಿ.ಎಸ್.ರವಿಶಂಕರ್ ಆಯ್ಕೆ

July 30, 2018

ಮೈಸೂರು: ಮೈಸೂರಿನ ಜಯ ಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಸಿ.ಎಸ್.ರವಿಶಂಕರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚಲಾವಣೆಯಾದ ಒಟ್ಟು 772 ಮತಗಳ ಪೈಕಿ ರವಿಶಂಕರ್ 331 ಮತ ಪಡೆದು ಜಯಶೀಲರಾದರೆ, ವಿ.ಪ್ರಕಾಶ್ 311 ಮತ್ತು ಡಾ.ಬಿ.ಪ್ರಸನ್ನ ಶಂಕರ್ 130 ಮತ ಪಡೆದರು. ಕ್ಲಬ್‍ನ ಕ್ಯಾಪ್ಟನ್ ಆಗಿ ಡಾ. ವೆಂಕಟೇಶ್ ಜೋಷಿ ಅವರು 473 ಮತ ಪಡೆದು ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ಕೆ.ಎಂ.ವೀರ ಮೋಹನ್ 239 ಮತ ಪಡೆದರು. ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಹೆಚ್.ಡಿ.ತಿಮ್ಮಪ್ಪಗೌಡ 387 ಮತ ಪಡೆದು ಆಯ್ಕೆಯಾದರೆ, ಅವರ ಪ್ರತಿಸ್ಪರ್ಧಿ ಎಂ.ಆರ್.ಮೋಹನ್‍ಕುಮಾರ್ 385 ಮತ ಪಡೆದರು. ಖಜಾಂಚಿ ಸ್ಥಾನಕ್ಕೆ ನಡೆದ ಡಾ.ಎಸ್.ಎಲ್.ನಾರಾಯಣ್ 365 ಮತ ಪಡೆದು ಜಯಶೀಲರಾದರೆ, ಎಂ.ಎಸ್. ಯಶವಂತ್ 258 ಮತ್ತು ರಮೇಶ್‍ಕುಮಾರ್ ಜೈನ್ 149 ಮತ ಪಡೆದರು. ಪ್ಲೈಯಿಂಗ್ ಕಮಿಟಿ ಸದಸ್ಯರಾಗಿ ಬಿ.ಎಂ.ಪ್ರಕಾಶ್ (637 ಮತ), ಕೆ.ಎಲ್.ಅರುಣ್ ಕುಮಾರ್ (622 ಮತ), ಬಿ.ರವೀಂದ್ರನಾಥ ರೆಡ್ಡಿ (586 ಮತ) ಮತ್ತು ಎ.ಎಂ. ನಾಗಣ್ಣ (471 ಮತ) ಆಯ್ಕೆಯಾದರು. ನಾನ್ ಪ್ಲೈಯಿಂಗ್ ಕಮಿಟಿ ಸದಸ್ಯರಾಗಿ ಕೀರ್ತಿಕುಮಾರ್ (571), ಆರ್.ಎಸ್.ನಿತೀಶ್ (552), ಎಂ.ಸಿ.ಎಸ್.ಮನೋಹರ (506), ಎಂ.ಎ.ಮಂಜುನಾಥ್ (435) ಮತ್ತು ಸತೀಶ್ ಎಂ. ಧರೀರ (252) ಮತ ಪಡೆದು ಆಯ್ಕೆಯಾಗಿದ್ದಾರೆ.

Translate »