ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಸಂಸ್ಥಾಪನಾ ದಿನಾಚರಣೆ ಭವಿಷ್ಯದಲ್ಲಿ ಸುಸ್ಥಿರ ಆಹಾರ ಭದ್ರತೆ ಸಾಧಿಸುವುದು ಅತ್ಯಗತ್ಯ
ಮೈಸೂರು

ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಸಂಸ್ಥಾಪನಾ ದಿನಾಚರಣೆ ಭವಿಷ್ಯದಲ್ಲಿ ಸುಸ್ಥಿರ ಆಹಾರ ಭದ್ರತೆ ಸಾಧಿಸುವುದು ಅತ್ಯಗತ್ಯ

October 22, 2022

ಮೈಸೂರು, ಅ.21(ಆರ್‍ಕೆಬಿ)- ದೇಶದ ಸಮಸ್ತ ಜನತೆಗೆ ಸುಸ್ಥಿರ ಆಹಾರ ಭದ್ರತೆಯನ್ನು ಸಾಧಿಸು ವುದು ಅತ್ಯಗತ್ಯ, sಆಹಾರದ ಮುಂದಿನ ಸವಾಲು ಗಳನ್ನು ಎದುರಿಸಿ, ಆಹಾರ ಪೂರೈಸಲು ಸಿಎಸ್‍ಐಆರ್ – ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋ ಧನಾಲಯ (ಸಿಎಫ್‍ಟಿಆರ್‍ಐ) ಸಜ್ಜಾಗಬೇಕು ಎಂದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಪದ್ಮಭೂಷಣ ಡಾ.ಟಿ.ರಾಮಸ್ವಾಮಿ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಐಎಫ್‍ಟಿಟಿಸಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿ ಸಿದ್ದ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಅಪ್‍ಡೇಟ್ ಮಾಡಲು ಸಿಎಫ್‍ಟಿಆರ್‍ಐನಂತಹ ಉನ್ನತ ಶಿಕ್ಷಣಗಳ ಅಗತ್ಯವನ್ನು ಒತ್ತಿ ಹೇಳಿದರು. ಸಂಸ್ಥೆಗಳು ಹಿಂದಿನದನ್ನು ಮಾತನಾಡುವ ಬದಲು ಭವಿಷ್ಯಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಆಹಾರ ಆಮದು ಮಾಡಿಕೊಳ್ಳುವ ದೇಶವಾಗಿ ಪರಿವರ್ತನೆಗೊಂಡಿದ್ದ ಭಾರತ, ಸ್ವಾತಂತ್ರ್ಯದ ನಂತರದ ಕೆಲವು ದಶಕಗಳ ಅವಧಿಯಲ್ಲಿ ಸಂಪೂರ್ಣ ಸ್ವಾವಲಂಬಿಯಾಗುತ್ತಿದೆ ಎಂದು ಹೇಳಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕರಿಗೂ ಆಹಾರ ಭದ್ರತೆಯನ್ನು ಖಾತರಿಪಡಿ ಸುವ ಅಗತ್ಯವಿದೆ. ಇದಕ್ಕಾಗಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದರು. ಐದು ದಶಕಗಳ ಹಿಂದೆ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ನಡೆದ ಹಸಿರುಕ್ರಾಂತಿಯಿಂದ ಭಾರತದ ಸ್ವಾವಲಂಬ ನೆಯ ಕಥೆ ಪ್ರಾರಂಭವಾಯಿತು. ಭಾರತವು 1950 ಮತ್ತು 1990 ರ ನಡುವೆ ಆಹಾರ ಉತ್ಪಾದನೆಯಲ್ಲಿ ವೇಗದ ಬೆಳವಣಿಗೆಯನ್ನು ಕಂಡಿತು ಎಂದು ಹೇಳಿದರು. ಆಹಾರ ಉತ್ಪಾದನೆಯಲ್ಲಿ ಭಾರತವು ಈಗ ಅಮೆರಿಕದ ನಂತರದ ಸ್ಥಾನದಲ್ಲಿದೆ. ನಮ್ಮ ನೆರೆಯ ಚೀನಾ ಬಹಳ ಹಿಂದೆ ಉಳಿದಿದೆ. ಸಂಯುಕ್ತ ರಾಷ್ಟ್ರಗಳ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ದೇಶವು ಮುಂಚೂಣಿಯಲ್ಲಿ ಸಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಿಎಫ್‍ಟಿಆರ್‍ಐ ಹೊಂದಿದೆ ಎಂದು ತಿಳಿಸಿದರು.

ತಾಂತ್ರಿಕ ಪ್ರಗತಿಯ ಹೊರತಾಗಿಯೂ, ಎಲ್ಲಾ ಉದ್ದೇಶಿತ ಸಮುದಾಯಗಳು ಮತ್ತು ಗುಂಪುಗಳಿಗೆ ಸಾಕಷ್ಟು ಆಹಾರ ತಲುಪಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದ ಅವರು, 2030 ರ ವೇಳೆಗೆ ಜಗತ್ತನ್ನು ಹಸಿವು ಮುಕ್ತಗೊಳಿಸುವ ವಿಶ್ವಸಂಸ್ಥೆಯ ಕರೆಯನ್ನು ಪೂರೈಸಲು ಸಿಎಫ್‍ಟಿಆರ್‍ಐ ಕೆಲಸ ಮಾಡಿ, ಯಶಸ್ವಿಯಾಗಬೇಕು ಎಂದು ಹೇಳಿದರು.

ಸಿಎಫ್‍ಟಿಆರ್‍ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಸಂಸ್ಥೆಯ ಸಂಸ್ಥಾಪನಾ ದಿನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಸಂಸ್ಥೆಯು 1950 ರ ದಶಕದಲ್ಲಿ ಸ್ಥಾಪನೆಯಾದ ನಂತರದ ವರ್ಷಗಳಲ್ಲಿ ಕಂಡ ಬೆಳವಣಿಗೆ ಮತ್ತು ಸಾಧನೆಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ 20 ಮಂದಿ ಅತ್ಯುತ್ತಮ ವಿಜ್ಞಾನಿಗಳು ಮತ್ತು ಸಂಸ್ಥೆಯ ವಿವಿಧ ವಿಭಾಗಗಳಿಗೆ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ವಾರ್ಷಿಕ ಪ್ರಶಸ್ತಿ(2021-22)ಗಳನ್ನು ವಿತರಿಸಲಾಯಿತು. ಮುಖ್ಯ ವಿಜ್ಞಾನಿ ಡಾ.ಉಮೇಶ ಹೆಬ್ಬಾರ್ ಸ್ವಾಗತಿಸಿ ದರು. ಡಾ.ಪಿ.ವಿಜಯಾನಂದ್ ಇನ್ನಿತರರು ಉಪಸ್ಥಿತ ರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ವಿಜ್ಞಾನಿ ಡಾ. ಪಿ.ವಿಜಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Translate »