ಕೆ.ಆರ್.ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಕೆ.ಆರ್.ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಶಾಸಕ ರಾಮದಾಸ್ ಚಾಲನೆ

October 22, 2022

ಮೈಸೂರು, ಅ.21(ಎಸ್‍ಪಿಎನ್)-ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಹೈಟೆಕ್ ಬಸ್ ನಿಲ್ದಾಣ ಕಾಮ ಗಾರಿ ಸೇರಿದಂತೆ ಒಟ್ಟು 12 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಸ್.ಎ. ರಾಮದಾಸ್ ಚಾಲನೆ ನೀಡಿದರು.

ಮೈಸೂರು ನಗರ ಪಾಲಿಕೆ ವಾರ್ಡ್ ವಾರ್ಡ್ ನಂ- 47, 57, 59 ಮತ್ತು 64 ರಲ್ಲಿ ಒಟ್ಟು ರೂ. 12 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಅಪೆÇೀಲೋ ಆಸ್ಪತ್ರೆಯಿಂದ ಆದಿ ಚುಂಚನಗಿರಿ ಮುಖ್ಯರಸ್ತೆ ಮಾರ್ಗವಾಗಿ ಜಯಮ್ಮ ಗೋವಿಂದೇಗೌಡ ವೃತ್ತದವರಗೆ ಡಾಂಬರೀಕರಣ, ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಗ್ರಂಥಾಲಯದಿಂದ ಮಾರುತಿ ದೇವಸ್ಥಾನ ಮಾರ್ಗದ ರಸ್ತೆ ಅಭಿವೃದ್ಧಿ, ನ್ಯೂ ಕಾಂತ ರಾಜ ಅರಸ್ ರಸ್ತೆಯಲ್ಲಿರುವ ಕವಿತಾ ಬೇಕರಿ ರಸ್ತೆಯಿಂದ ವಿಶ್ವಮಾನವ ಜೋಡಿ ರಸ್ತೆ ಹಾಗೂ ಉದಯ ರವಿ ರಸ್ತೆ ಮಾರ್ಗದ ರಸ್ತೆ, ಸರ್ವೋದಯ ರಸ್ತೆಯಿಂದ ವಿವೇಕಾನಂದ ವೃತ್ತದ ಮಾರ್ಗವಾಗಿ ಶ್ರೀರಾಂಪುರ ಬಡಾವಣೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು.

ನಂತರ ಕುವೆಂಪುನಗರದಲ್ಲಿರುವ ಶಾಂತಿಸಾಗರ್ ಕಾಂಪ್ಲೆಕ್ಸ್‍ನಿಂದ ಉದಯರವಿ ರಸ್ತೆ ಮಾರ್ಗವಾಗಿ ಕುವೆಂಪುನಗರದ ಬಸ್ ಡಿಪೆÇೀ ರಸ್ತೆ ಅಭಿವೃದ್ಧಿ, ವಿವೇಕಾನಂದ ವೃತ್ತದಿಂದ ಬನಶಂಕರಿ ದೇವಸ್ಥಾನದವರೆಗಿನ ರಸ್ತೆ, ವಿವೇಕಾನಂದ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತ ನಾಡಿದ ಶಾಸಕ ಎಸ್.ಎ.ರಾಮದಾಸ್, ನಮ್ಮ ಜೊತೆ ಮೇಯರ್ ಶಿವಕುಮಾರ್, ಈ ಭಾಗದ ನಗರ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಮುಖಂಡರು ಅಭಿವೃದ್ಧಿ ವಿಚಾರವಾಗಿ ಸಾಥ್ ನೀಡಿದ್ದಾರಲ್ಲದೆ, ವಿಶೇಷವಾಗಿ ಈ ಪ್ರದೇಶದಲ್ಲಿ ಯುಜಿಡಿ ಸಮಸ್ಯೆ ಹಲವು ದಿನಗಳಿಂದ ಇತ್ತು. ಈ ಕಾಮಗಾರಿಗೆ 7 ಕೋಟಿ ರೂ. ವೆಚ್ಚದಲ್ಲಿ ಈ ಹಿಂದೆ ಚಾಲನೆ ನೀಡಲಾಗಿದ್ದು, ಆ ಕೆಲಸ ಅಂತಿಮ ಹಂತ ತಲುಪಿದೆ ಎಂದರು.

ಹಾಗಾಗಿ ಅಪೆÇೀಲೋ ಮುಂದಿನ ರಸ್ತೆ ಸೇರಿದಂತೆ ಒಟ್ಟು ಆರು ರಸ್ತೆಗಳ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗೆ ಪಾಲಿಕೆ ನಗರೋತ್ಥಾನದಿಂದ 5 ಕೋಟಿ ರೂ. ಬಿಡುಗಡೆಗೊಂಡಿದ್ದು, ಈ ಅನುದಾನದಲ್ಲಿ ವಿವೇಕಾನಂದ ವೃತ್ತ ಸುಸಜ್ಜಿತ ಬಸ್ ಶೆಲ್ಟರ್ ನಿರ್ಮಾಣ ಸೇರಿದೆ ಎಂದು ತಿಳಿಸಿದರು.

ನಮ್ಮ ಕ್ಷೇತ್ರದಲ್ಲಿರುವ 472 ಕಿಮೀ ರಸ್ತೆಯನ್ನು ಇನ್ನು 3 ತಿಂಗಳ ಒಳಗೆ ಡಾಂಬ ರೀಕರಣ ಮಾಡಲಾಗುವುದು. ಹಲವು ದಿನಗಳಿಂದ ಮೈಸೂರಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ರಸ್ತೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಸಾರ್ವ ಜನಿಕರಲ್ಲಿ ಕ್ಷಮೆಯಾಚಿಸುತ್ತೇನೆ. ಅಂತೆಯೇ ನಮ್ಮ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 216 ಕೋಟಿ ರೂ. ಅನುದಾನ ಬಿಡುಗಡೆ ಗೊಂಡಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಭರವಸೆ ನೀಡಿದರು.
ಈ ವೇಳೆ ನಗರ ಪಾಲಿಕೆ ಸದಸ್ಯೆ ಚಂಪಕ, ಸ್ಥಳೀಯ ಮುಖಂಡರಾದ ಜಗದೀಶ್, ಶಾಂತ ವೀರಪ್ಪ, ಮಾಯಾ ಜಗದೀಶ್ ಪ್ರಸಾದ್, ಪಚ್ಚು, ಗಿರೀಶ್, ಡಿಪೆÇೀ ರವಿ, ಗೋಪಾಲ್, ಉಪೇಂದ್ರ, ಕೇಬಲ್ ಸೋಮು, ಸಂಪತ್, ಅಶೋಕ್ ಅರಸ್, ಸಂಪತ್, ರವಿ ಜೋಡಿ ಬಸವ, ಶ್ರೀಧರ, ರೋಹಿತ್, ವಿನಯ್, ರಮೇಶ್, ಬಸವರಾಜು, ರೂಪ, ಪ್ರಪುಲ್ಲ, ವರಲಕ್ಷ್ಮಿ, ಅನ್ನಪೂರ್ಣ, ಉಮಾ, ಪದ್ಮ, ಆಶಾ, ಕಮಲಮ್ಮ, ಛಾಯಾ, ಗಿರಿಧರ್ ಯಾಧವ್, ಪ್ರದೀಪ್, ಪ್ರಸನ್ನ, ರಾಜೇಶ್, ಮುರಳಿ, ನಾಗರಾಜ್, ಸಂಪತ್, ಚಂದ್ರು, ಗುರುಸ್ವಾಮಿ, ಚಂದ್ರಶೇಖರ್, ಶೋಭ, ಠಾಗೂರ್, ದಿನಕರ್ ವಾಜಪೇಯಿ, ಚಿನ್ನಗಿರಿ ಕೊಪ್ಪಲ್ ಗೀರೀಶ್, ಅನಿಲ್, ರಾಜೀವ್, ಕಾರ್ತಿಕ್, ಮಹೇಶ್, ಮನು ಹೊಯ್ಸಳ, ನಾಗೇಶ, ನಗರಪಾಲಿಕೆ, ಮುಡಾ ಮತ್ತು ಪೆÇೀಲಿಸ್ ಅಧಿಕಾರಿಗಳು ಹಾಜರಿದ್ದರು.

Translate »