`ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿ ಪ್ರಸಾರಕ್ಕೆ ವಂದನೆ ಸಲ್ಲಿಸಲು ಇಂದು ಸೈಕಲ್ ಜಾಥಾ
ಮೈಸೂರು

`ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿ ಪ್ರಸಾರಕ್ಕೆ ವಂದನೆ ಸಲ್ಲಿಸಲು ಇಂದು ಸೈಕಲ್ ಜಾಥಾ

August 20, 2020

ಮೈಸೂರು, ಆ.19(ಪಿಎಂ)- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತ `ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿ ಪ್ರಸಾರ ಮಾಡುತ್ತಿ ರುವ ಖಾಸಗಿ ವಾಹಿನಿಗೆ ವಂದನೆ ಸಲ್ಲಿಸಲು ಕ್ಯಾತಮಾರನಹಳ್ಳಿಯ ಜೈಭೀಮ್ ಪ್ರಜ್ಞಾವಂತ ಯುವಕರ ಬಳಗ ಆ.20ರಂದು ಮೈಸೂರಿನಿಂದ ಬೆಂಗಳೂರಿನಲ್ಲಿರುವ ವಾಹಿನಿಯ ಮುಖ್ಯ ಕಚೇರಿಗೆ ಸೈಕಲ್ ಜಾಥಾ ಹಮ್ಮಿಕೊಂಡಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬಳಗದ ಅಧ್ಯಕ್ಷ ಹರೀಶ್, ಮೈಸೂರು ಪುರಭವನದ ಎದುರಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಬೆಳಗ್ಗೆ 8ಕ್ಕೆ ಪುಷ್ಪ ನಮನ ಸಲ್ಲಿಸಿ ಬಳಗದ ಐವರು ಬೆಂಗಳೂರಿಗೆ ಸೈಕಲ್ ಜಾಥಾ ಹೊರಡಲಿದ್ದೇವೆ. ಉಪ ಮೇಯರ್ ಶ್ರೀಧರ್, ಮಾಜಿ ಮೇಯರ್ ಪುರುಷೋ ತ್ತಮ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಅಸ್ಪøಶ್ಯತೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮುಂಬೈನ ಡಾ.ಅಂಬೇಡ್ಕರ್ ನಿವಾಸ ರಾಜಗೃಹದ ಮೇಲೆ ದಾಳಿ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುವ ಉದ್ದೇಶದಿಂದಲೂ ಜಾಥಾ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಬಳಗದ ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಭಾಸ್ಕರ್, ಸಹ ಕಾರ್ಯದರ್ಶಿ ಸೋಮಶೇಖರ್ ಗೋಷ್ಠಿಯಲ್ಲಿದ್ದರು.

Translate »