ಕೊರೊನಾ ವಾರಿಯರ್ಸ್ ಕುರಿತ ವಿಡಿಯೋ ಸಾಂಗ್ ಡಿವಿಡಿ ಬಿಡುಗಡೆ
ಮೈಸೂರು

ಕೊರೊನಾ ವಾರಿಯರ್ಸ್ ಕುರಿತ ವಿಡಿಯೋ ಸಾಂಗ್ ಡಿವಿಡಿ ಬಿಡುಗಡೆ

August 20, 2020

ಮೈಸೂರು, ಆ.19(ಪಿಎಂ)- ಕೊರೊನಾ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿರು ವಾಗ ಜನರಲ್ಲಿ ಧೈರ್ಯ ತುಂಬುವ ಹಾಗೂ ಕೊರೊನಾ ವಾರಿಯರ್ಸ್‍ಗೆ ವಂದನೆ ಸಲ್ಲಿ ಸುವ ಸಲುವಾಗಿ ಆನಂದ್ ಸಿನಿಮಾಸ್ ವಿಡಿಯೋ ಸಾಂಗ್ ನಿರ್ಮಿಸಿದ್ದು, ಡಿವಿಡಿ ಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಬಿಡುಗಡೆ ಮಾಡ ಲಾಯಿತು. `ಕೊರೊನಾ ನಮಗಾಗಿ ಜೀವ ಕೊಟ್ಟವರು’ ಶೀರ್ಷಿಕೆಯ ವಿಡಿಯೋ ಗೀತೆಯ ಡಿವಿಡಿಯನ್ನು ರಂಗಭೂಮಿಯ ಹಿರಿಯ ಕಲಾವಿದ ಬಾಲ್‍ರಾಜ್ ವಾಡಿ ಬಿಡುಗಡೆ ಮಾಡಿದರು.

ವಿಡಿಯೋ ನಿರ್ದೇಶಕ ಬಿ.ಪಿ.ಹರಿ ಹರನ್ ಮಾತನಾಡಿ, ಹಾಡಿಗೆ ರೇವಣ್ಣ ನಾಯಕ್ ಸಾಹಿತ್ಯ, ಎ.ಟಿ.ರವೀಶ್ ಸಂಗೀತ ನಿರ್ದೇಶನ, ಮುತ್ತುರಾಜ್ ಸಂಕಲನ, ಸಚಿನ್ ಎಸ್.ನಗರ್ತ ಗಾಯನ, ಜಾನ್ ಮತ್ತು ವಿನಾಯಕ ಛಾಯಾಗ್ರಹಣದಲ್ಲಿ ಗೀತೆ ಮೂಡಿಬಂದಿದೆ. ಮಹೇಂದ್ರ ಮನೂತ್ ನಿರ್ಮಾಪಕರಾಗಿದ್ದು, 3 ಲಕ್ಷ ರೂ. ವೆಚ್ಚದಲ್ಲಿ 5 ನಿಮಿಷ 19 ಸೆಕೆಂಡ್ ಗಳ ವಿಡಿಯೋ ನಿರ್ಮಿಸಲಾಗಿದೆ. 20 ನಟರು ಅಭಿನಯಿಸಿದ್ದರೆ, 200 ಮಂದಿ ವಿವಿಧ ವಿಭಾಗಗಳಲ್ಲಿ ಶ್ರಮಿಸಿದ್ದಾರೆ. ಆಸಕ್ತರು ಫೇಸ್‍ಬುಕ್, ಯು-ಟ್ಯೂಬ್‍ನಲ್ಲಿ ವೀಕ್ಷಿಸಬಹುದು. ಡಿವಿಡಿ ಮಾರಾಟದ ಉದ್ದೇಶವಿಲ್ಲ ಎಂದು ವಿವರಿಸಿದರು.
ಚಿತ್ರ ಸಾಹಿತಿ ರೇವಣ್ಣ ನಾಯಕ್, ಛಾಯಾಗ್ರಾಹಕ ಜಾನ್, ನಟಿ ಗುಣವಂತಿ ಮತ್ತಿತರರು ಹಾಜರಿದ್ದರು.

Translate »