ಆನೆ ದಂತ, ಜಿಂಕೆ ಬುರುಡೆ, ಕೊಂಬು ಮಾರಾಟಕ್ಕೆ ಯತ್ನಿಸಿದ ಐವರ ಬಂಧನ
ಮೈಸೂರು

ಆನೆ ದಂತ, ಜಿಂಕೆ ಬುರುಡೆ, ಕೊಂಬು ಮಾರಾಟಕ್ಕೆ ಯತ್ನಿಸಿದ ಐವರ ಬಂಧನ

August 20, 2020

ಮೈಸೂರು, ಆ.19(ಎಂಟಿವೈ)- ಒಂದು ಜೋಡಿ ಆನೆ ದಂತ, ಜಿಂಕೆ ಯೊಂದರ ತಲೆ ಬುರುಡೆ ಹಾಗೂ ಒಂದು ಜೋಡಿ ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿ ಸುತ್ತಿದ್ದ ಐವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿ ಎರಡು ಡಿಯೋ ಸ್ಕೂಟರ್ ಹಾಗೂ ಮಾರಾಟಕ್ಕೆ ತಂದಿದ್ದ ದಂತ, ಜಿಂಕೆ ತಲೆ ಬುರುಡೆ ಹಾಗೂ ಕೊಂಬನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬೆಂಗಳೂರಿನ ಚಂದ್ರ ಲೇಔಟ್ ನಿವಾಸಿ ವಿನೋದ್, ಮೈಸೂರಿನ ಗಾಯತ್ರಿಪುರಂ ನಿವಾಸಿ ಅಬ್ದುಲ್ ರಜಾಕ್, ತಿಲಕ್‍ನಗರದ ನಿವಾಸಿ ನಾಗರಾಜು, ಅಗ್ರ ಹಾರದ ನಿವಾಸಿ ರವಿಕುಮಾರ್, ಮೇಟ ಗಳ್ಳಿ ನಿವಾಸಿ ಗೌತಮ್ ಎಂದು ಗುರುತಿಸ ಲಾಗಿದೆ. ಬಂಧಿತರು ರಿಂಗ್ ರಸ್ತೆ ಸಮೀಪದ ಅಬ್ದುಲ್ ಕಲಾಂ ನಗರದ ರೈಲ್ವೆ ಟ್ರ್ಯಾಕ್ ಬಳಿ 2 ಡಿಯೋ ಸ್ಕೂಟರ್‍ನಲ್ಲಿ ಚೀಲ ದಲ್ಲಿ 1 ಜೋಡಿ ಆನೆ ದಂತ, 1 ಜೋಡಿ ಜಿಂಕೆ ಕೊಂಬು ಹಾಗೂ ಒಂದು ಜಿಂಕೆ ತಲೆ ಬುರುಡೆಯನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಪಡೆದು ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಡಿಯೋ ಸ್ಕೂಟರ್(ಕೆಎ.55, ವೈ.6299, ಕೆಎ.09, ಹೆಚ್‍ಝಡ್.0403) ವಶಪಡಿಸಿಕೊಂಡಿದ್ದಾರೆ.

ಬಂಧಿತರಲ್ಲಿ ಬೆಂಗಳೂರಿನ ವಿನೋದ್ ಕೊಡಗು ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ ತಾತನ ಕಾಲದಿಂದಲೂ ಇಟ್ಟಿದ್ದ ಆನೆ ದಂತ ವನ್ನು ಹಣದ ಅವಶ್ಯಕತೆ ಇರುವುದರಿಂದ ಮಾರಾಟ ಮಾಡಲು ಪ್ರಯತ್ನಿಸುತ್ತಿರುವು ದಾಗಿ ತಿಳಿಸಿದ್ದಾನೆ. ಮೈಸೂರಿನ ಗಾಯತ್ರಿ ಪುರಂ ನಿವಾಸಿ ಅಬ್ದುಲ್ ರಜಾಕ್ ತನ್ನ ಬಳಿಯಿದ್ದ ಜಿಂಕೆ ತಲೆ ಬುರುಡೆ ಹಾಗೂ 2 ಕೊಂಬನ್ನು ಮಾರಾಟ ಮಾಡುಲು ಉದ್ದೇ ಶಿಸಲಾಗಿದ್ದು, ಪರಿಚಯಿಸ್ಥನಾಗಿದ್ದ ವಿನೋದ್ ನೊಂದಿಗೆ ಹಾಗೂ ಇತರೆ ಮೂವರು ಸ್ನೇಹಿತರೊಂದಿಗೆ ಸೇರಿ ಮಾರಾಟ ಮಾಡು ತ್ತಿರುವುದಾಗಿ ತಿಳಿಸಿದ್ದಾನೆ. ಪ್ರಾಥಮಿಕ ತನಿಖೆ ವೇಳೆ ಆನೆ ದಂತ ಹಾಗೂ ಜಿಂಕೆ ಕೊಂಬು ಮತ್ತು ತಲೆಬುರುಡೆ ಹತ್ತಾರು ವರ್ಷದ ಹಳೆದಾಗಿರುವುದು ಸ್ಪಷ್ಟವಾಗಿದೆ.

ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವ ವಹಿಸಿದ್ದ ದಾಳಿ ಯಲ್ಲಿ ಪ್ರಭಾರಿ ಆರ್‍ಎಫ್‍ಓ ಲಕ್ಷ್ಮೀಶ್, ಡಿಆರ್‍ಎಫ್‍ಓಗಳಾದ ಮೋಹನ್, ನಾಗ ರಾಜು, ಸುಂದರ್, ಪ್ರಮೋದ್, ಸಿಬ್ಬಂದಿ ಗಳಾದ ಸತೀಶ್, ಚನ್ನಬಸವಯ್ಯ, ಗೋವಿಂದ್, ಮಹಂತೇಶ್, ರವಿನಂದನ್, ರವಿಕುಮಾರ್, ಶರಣಬಸಪ್ಪ, ಕೊಟ್ರೇಶ್, ಚಾಲಕರಾದ ಮಧು ಹಾಗೂ ಪುಟ್ಟ ಸ್ವಾಮಿ ಪಾಲ್ಗೊಂಡಿದ್ದರು.

Translate »