ಮೈವಿವಿ ಪಿಹೆಚ್.ಡಿಗಾಗಿ   ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ
ಮೈಸೂರು

ಮೈವಿವಿ ಪಿಹೆಚ್.ಡಿಗಾಗಿ  ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ

August 20, 2020

ಮೈಸೂರು, ಆ.19 (ಎಂಕೆ)- ಕೋವಿಡ್-19 ಹಿನ್ನೆಲೆ ಮೈಸೂರು ವಿಶ್ವವಿದ್ಯಾ ಲಯದ ಇತಿಹಾಸದಲ್ಲಿಯೇ ಪಿಹೆಚ್‍ಡಿ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ನಾಲ್ಕು ಬಾರೀ ಅವಧಿ ವಿಸ್ತರಣೆ ಮಾಡಿದಂತಾಗಿದೆ.

ಕೊರೊನಾ ಸೋಂಕು ಹರಡುವುದನ್ನು ನಿಯಂ ತ್ರಿಸುವ ಹಿನ್ನೆಲೆ ಲಾಕ್‍ಡೌನ್ ಜಾರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇನ್ನಿತರೆ ನಿಯಮಗಳ ಜಾರಿಯಾದ್ದರಿಂದ ಪಿಹೆಚ್‍ಡಿ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ 2020ರ ಫೆಬ್ರವರಿ 18ರಿಂದ ಮಾರ್ಚ್ 16ರವರೆಗೆ ನೀಡಿದ್ದ ಅವಕಾಶ ವನ್ನು ಮೊದಲ ಬಾರಿಗೆ ವಿಸ್ತರಿಸಿ, ಮಾ.17ರಿಂದ ಜೂ.5ರವರೆಗೆ ಅವಧಿ ನಿಗದಿಪಡಿಸಲಾಯಿತು. ಎರಡನೇ ಬಾರಿಗೆ ಜೂ.25ರವರೆಗೆ ಹಾಗೂ ಮೂರನೇ ಬಾರಿಗೆ ಜು.30ರವರೆಗೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಿಸಲಾಗಿತ್ತು. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರು ವುದರಿಂದ ಸರ್ಕಾರ ಪ್ರವೇಶ ಪರೀಕ್ಷೆ ನಡೆಸಲು ಅನುಮತಿ ನೀಡದೆ ಇರುವುದರಿಂದ ನಾಲ್ಕನೇ ಬಾರಿಗೆ ಆಗಸ್ಟ್ 17ರಿಂದ ಆ.31ರವರೆಗೆ ಅರ್ಜಿಸಲ್ಲಿಕಗೆ ಅವಧಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

5000ಕ್ಕೂ ವಿದ್ಯಾರ್ಥಿಗಳು: ಈಗಾಗಲೇ 70 ವಿಷಯಗಳಿಂದ 5097 ವಿದ್ಯಾರ್ಥಿಗಳು ಪಿಹೆಚ್‍ಡಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಕೋವಿಡ್-19 ಹಿನ್ನೆಲೆ ಯಾವುದೇ ದಂಡ ಶುಲ್ಕವಿಲ್ಲದೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

 

 

Translate »