ಮಂಡ್ಯ, ಮೇ 4(ಮೋಹನ್‍ರಾಜ್)- ಮಂಡ್ಯ ಜಿಲ್ಲೆಯಲ್ಲಿರುವ ಆಕ್ಸಿಜನ್ ಕೊರತೆ ಯನ್ನು ನೀಗಿಸಲು ಬಳ್ಳಾರಿ ಜಿಲ್ಲೆಯಿಂದ ಪ್ರತಿನಿತ್ಯ 7ಕೆಎಲ್ ಆಕ್ಸಿಜನ್ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಂಡ್ಯ ನಗರದ ಮಿಮ್ಸ್ ಆವರಣ ದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ರಾತ್ರಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ತಾಂಡವವಾ ಡುತ್ತಿರುವ ಕೋವಿಡ್ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸೋಂಕಿತರು ಹೆಚ್ಚಾಗುತ್ತಾ ಹೋದಂತೆ ಬೆಡ್‍ಗಳ ಅವಶ್ಯಕತೆ ಸಹ ಹೆಚ್ಚುತ್ತಾ ಹೋಗು ತ್ತದೆ. ಮಂಡ್ಯ ಮಿಮ್ಸ್‍ನ ಆಕ್ಸಿಜನ್ ಟ್ಯಾಂಕ್ ಸದಾ ತುಂಬಿರಬೇಕು. ಹೆಚ್ಚುವರಿ ಯಾಗಿ 300ರಿಂದ 350 ಜಂಬೂ ಸಿಲಿಂಡರ್ ಆಕ್ಸಿಜನ್ ಮಂಡ್ಯಕ್ಕೆ ಅವಶ್ಯಕತೆ ಇರುವುದರಿಂದ ಬಳ್ಳಾರಿಯಿಂದ ಸರಬರಾಜಿಗೆ ಸೂಚಿಸಲಾಗಿದೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರು ಕ್ವಾರಂಟೈನ್ ಆಗಲೇಬೇಕು. ಈ ಬಗ್ಗೆ ಅಧಿ ಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 6 ಸಾವಿರ ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ವೈದ್ಯರು ಸೋಂಕಿ ತರಿಗೆ ಕೊಡುತ್ತಿರುವ ಚಿಕಿತ್ಸೆ ಸಾಲದು. ಇನ್ನು ಒಳ್ಳೆಯ ಚಿಕಿತ್ಸೆ ಕೊಡಲು ಒತ್ತು ನೀಡಬೇಕು. ಮತ್ತಷ್ಟು ಬೆಡ್‍ಗಳನ್ನು ಹೆಚ್ಚಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮುಂದಾಗಬೇಕು. ನಗರ ಪ್ರದೇಶದಲ್ಲಿದ್ದ ಕೊರೊನಾ ಇದೀಗ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಡುತ್ತಿರುವ ಪರಿಣಾಮ ನಾವು ಮತ್ತಷ್ಟು ಎಚ್ಚರಿಕೆ ವಹಿಸ ಲೇಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಂಡ್ಯ ಮಿಮ್ಸ್‍ನಲ್ಲಿ ಸದ್ಯ 300 ಕೋವಿಡ್ ಹಾಸಿಗೆಗಳಿದ್ದು, ಅದನ್ನು 600ಕ್ಕೆ ಹೆಚ್ಚಿಸು ವಂತೆ ಸೂಚಿಸಿದ್ದೇನೆ ಎಂದರು.
ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು ಸಹ ಸಾಕಷ್ಟು ಶ್ರಮ ವಹಿಸಿ ಕೋವಿಡ್ ನಿಯಂತ್ರಣಕ್ಕೆ ದುಡಿಯುತ್ತಿದ್ದಾರೆ. ಆಕ್ಸಿಜನ್ ಸಮಸ್ಯೆಯ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದೆ ಸುಮಲತಾ ಅಂಬರೀಷ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇ ಗೌಡ, ಮರಿತಿಬ್ಬೇಗೌಡ ಸಹ ನನಗೆ ಕರೆ ಮಾಡಿ ಮನವರಿಕೆ ಮಾಡಿದ್ದರು. ಇನ್ನು ಹಾಸನದ ಆಕ್ಸಿಜನ್ ಸಮಸ್ಯೆ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನಗೆ ಸುದೀರ್ಘ ಪತ್ರ ಬರೆದಿದ್ದು, ಹಾಸನಕ್ಕೆ ಖುದ್ದು ಭೇಟಿ ಕೊಟ್ಟು ಆಕ್ಸಿಜನ್ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುವೆ ಎಂದರು.
ಸರ್ಕಾರ ಸಹ ಕೋವಿಡ್ ನಿಯಂತ್ರಣಕ್ಕೆ ಸಮರೋಪಾಧಿಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದು, ಎಲ್ಲಾ ಸಚಿವರು, ಶಾಸಕರು, ಅಧಿ ಕಾರಿಗಳ ವರ್ಗ ಕೊರೊನಾ ನಿಯಂ ತ್ರಣಕ್ಕೆ ಶಕ್ತಿ ಮೀರಿ ದುಡಿಯುತ್ತಿದ್ದಾರೆ. ನೂರಕ್ಕೆ ನೂರರಷ್ಟು ಸಮರ್ಪಕವಾಗಿ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮಲ್ಲೂ ಇಂತಹ ಸಾಂಕ್ರಾಮಿಕ ರೋಗ ತಡೆಯು ವಾಗ ಕೆಲವು ನ್ಯೂನ್ಯತೆಗಳು ಉಂಟಾ ಗುತ್ತವೆ. ಅದನ್ನು ಮೀರಿ, ಪ್ರತಿಯೊಂದು ಜೀವ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಕೊರೊನಾ ನಿಯಂತ್ರಣಕ್ಕೆ ನಮಗೆ ಇನ್ನಷ್ಟು ಅಗತ್ಯ ಸೌಲಭ್ಯಗಳು ಬೇಕಿರುವು ದರಿಂದ ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದು, ಸೌಲಭ್ಯಗಳನ್ನು ಒದಗಿಸಿ ಕೊಳ್ಳುತ್ತಿದ್ದೇವೆ. ಅಧಿಕ ಆಕ್ಸಿಜನ್ ಪೂರೈಕೆ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳುತ್ತಿ ದ್ದೇವೆ. ರಾಜ್ಯದ ಅಧಿಕಾರಿಗಳ ವರ್ಗವನ್ನು ಕೋವಿಡ್ ನಿಯಂತ್ರಣಕ್ಕೆ ಬಳಕೆ ಮಾಡಿ ಕೊಳ್ಳುತ್ತಿದ್ದೇವೆ. ಪ್ರತಿ ಬೂತ್ ಹಂತದಲ್ಲಿ ಕೋವಿಡ್ ಟಾಸ್ಕ್‍ಫೋರ್ಸ್ ಮಾಡಿಕೊಳ್ಳಲು ಸೂಚಿಸಿದ್ದು, ಅಲ್ಲಿ ಆರೋಗ್ಯ ಇಲಾಖೆ, ಅಂಗನವಾಡಿ, ಶಿಕ್ಷಣ ಇಲಾಖೆ ಹೀಗೆ ನಾನಾ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವ ಹಿಸುತ್ತಾರೆ. ಐದಾರು ಜನ ಸೇರಿ ಒಂದು ಸಾವಿರದ ಮೇಲೆ ನಿಗಾ ವಹಿಸಲು ಸುಲಭ ವಾಗುತ್ತದೆ ಎಂಬ ನಿಟ್ಟಿನಲ್ಲಿ ಟಾಸ್ಕ್‍ಫೋರ್ಸ್ ರಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಸಿಇಓ ದಿವ್ಯಾಪ್ರಭು, ಉಪವಿಭಾಗಾಧಿಕಾರಿ ಐಶ್ವರ್ಯ, ಡಿಎಚ್‍ಓ ಡಾ.ಮಂಚೇ ಗೌಡ, ಮಿಮ್ಸ್ ನಿರ್ದೇಶಕ ಡಾ.ಹರೀಶ್, ನಗರಸಭೆ ಅಧ್ಯಕ್ಷ ಮಂಜು ಸೇರಿದಂತೆ ಅನೇಕರು ಹಾಜರಿದ್ದರು.