ಕೊರೊನಾ ಸೋಂಕಿತ ಮೃತರ ಅಸ್ಥಿ ವಿಸರ್ಜನೆಗೆ ತಡೆ
ಮಂಡ್ಯ

ಕೊರೊನಾ ಸೋಂಕಿತ ಮೃತರ ಅಸ್ಥಿ ವಿಸರ್ಜನೆಗೆ ತಡೆ

May 5, 2021

ಶ್ರೀರಂಗಪಟ್ಟಣ, ಮೇ 4(ವಿನಯ್ ಕಾರೇಕುರ)- ಬೆಂಗಳೂರಿನ ಮೃತ ಕೊರೊನಾ ಸೋಂಕಿತರ ಅಸ್ಥಿ ವಿಸರ್ಜನೆ ಮಾಡಲು ಬಂದವರನ್ನು ಈ ಭಾಗದ ನದಿ ತೀರದಲ್ಲಿ ಅಸ್ಥಿ ವಿಸರ್ಜನೆ ಮಾಡದಂತೆ ಗ್ರಾಮಸ್ಥರು ರಸ್ತೆಯಲ್ಲಿ ಮರವಿಟ್ಟು ತಡೆ ಮಾಡಿದ್ದಾರೆ.

ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಅಸ್ಥಿ ವಿಸರ್ಜನೆಗೆ ತಾಲೂಕು ಆಡಳಿತ ನಿಷೇಧ ಹೇರಿದರೂ ಸ್ಥಳೀಯ ಪುರೋಹಿತರಿಂದ ನಡೆಯುತ್ತಿದ್ದ ಅಕ್ರಮ ಅಸ್ಥಿ ವಿಸರ್ಜನೆ ಮುಂದುವರೆದಿರುವುದರಿಂದ ಸ್ಥಳೀಯ ವೈದಿಕ ಪುರೋಹಿತತರು ಬೆಂಗಳೂರಿ ನವರನ್ನು ಕರೆತಂದು ಊರಿನ ಸುತ್ತ ಮುತ್ತಾ ಅಸ್ಥಿ ವಿಸರ್ಜನೆ ಮಾಡಿಸುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶ್ರೀರಂಗಪಟ್ಟಣದ ಸುತ್ತಲು ಹರಿಯುವ ಕಾವೇರಿ ನದಿ ತೀರ ಪ್ರದೇಶದ ಸ್ಥಳಗಳಲ್ಲಿ ವಿಸರ್ಜನೆ ಮಾಡುವುದನ್ನು ತಡೆಯಬೇಕು ಎಂದು ಗಂಜಾಂ ಗ್ರಾಮಸ್ಥರು ತಡೆ ಮಾಡಿ ಅಸ್ಥಿ ವಿಸರ್ಜನೆ ಮಾಡಲು ಬಂದ ವಾಹನಗಳನ್ನು ವಾಪಸ್ ಕಳುಹಿಸಿದ್ದು, ತಾಲೂಕು ಆಡಳಿತ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದ್ದಾರೆ.

ಕಾವೇರಿ ಸಂಗಮ ಸೇರಿ ಘೋಸಾಯ್ ಘಾಟ್‍ನಲ್ಲಿ ಅಸ್ಥಿ ವಿಸರ್ಜನೆ ದಿನೇ ದಿನೆ ಹೆಚ್ಚುತ್ತಿದ್ದು, ಇದರಿಂದ ಅಸ್ಥಿ ವಿಸರ್ಜನೆ ಮಾಡಬಾರದು ಎಂದು ತಾಲೂಕು ಆಡಳಿತ ಆದೇಶ ಮಾಡಿದರೂ ಮೃತರ ಸಂಬಂಧಿಕರು ಹಾಗೂ ಪುರೋಹಿತರು ಅಸ್ಥಿ ವಿಸರ್ಜನೆಗೆ ಆಗಮಿಸುತ್ತಿದ್ದು ಇದ ರಿಂದ ಗ್ರಾಮದಲ್ಲಿ ಕೊರೊನಾ ಹರಡುವ ಭೀತಿ ಎದುರಾಗಿದೆ. ತಾಲೂಕು ಆಡಳಿತ ಅಸ್ಥಿ ವಿಸರ್ಜನೆಗೆ ನಿಷೇಧ ಹೇರಿದರೂ ಪೆÇಲೀಸ್ ವೈಫÀಲ್ಯ ಕಾರಣವೆಂದು ಪೆÇಲೀಸರ ವಿರುದ್ದ ಜನರ ಆರೋಪವಾಗಿದ್ದು, ಕೆಲವು ದಿನಗಳ ಮಟ್ಟಿಗೆ ಈ ಭಾಗದಲ್ಲಿ ಅಸ್ಥಿ ವಿಸರ್ಜನೆ ಮಾಡಬಾರದು ಎಂದು ಗ್ರಾಮದ ಸತೀಶ್, ಪೂರ್ಣ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

Translate »