ಪಾಂಡವಪುರದಲ್ಲಿ ಟಾಸ್ಕ್‍ಫೋರ್ಸ್ ಸಭೆ
ಮಂಡ್ಯ

ಪಾಂಡವಪುರದಲ್ಲಿ ಟಾಸ್ಕ್‍ಫೋರ್ಸ್ ಸಭೆ

May 5, 2021

ಪಾಂಡವಪುರ, ಏ 4- ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ತಾಪಂ ಇಓ ಆರ್.ಪಿ.ಮಹೇಶ್ ನೇತೃತ್ವದಲ್ಲಿ ತಾಲೂಕಿನ 24 ಗ್ರಾಪಂ ಮಟ್ಟದ ಟಾಸ್ಕ್‍ಫೋರ್ಸ್ ಸಭೆ ನಡೆಸಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಓಗಳು ಒಗ್ಗೂಡಿ ಪಣತೊಟ್ಟು ಹಗಲಿರುಳು ಶ್ರಮಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.

ತಾಪಂ ಇಓ ಆರ್.ಪಿ.ಮಹೇಶ್ ತಾಲೂಕಿನ ಕಸಬಾ-1, ಕಸಬಾ-2, ಚಿನಕುರಳಿ, ಮೇಲು ಕೋಟೆ ಹೋಬಳಿ ಸೇರಿದಂತೆ ತಾಲೂಕಿನ 24 ಗ್ರಾ.ಪಂ ಆಡಳಿತದ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು ಹಾಗೂ ಪಿಡಿಓಗಳ ಸಭೆ ಯನ್ನು ಆಯಾಯ ಹೋಬಳಿ ಮಟ್ಟದಲ್ಲಿ ನಡೆಸಿ, ಕೊರೊನೊ ನಿಯಂತ್ರಣಕ್ಕೆ ಹೆಚ್ಚು ಸಮಯ ಸೇವೆ ವ್ಯಯಿಸಬೇಕು ಎಂದು ಸರ್ಕಾರದ ನಿಯಮಗಳ ಮಾಹಿತಿ ನೀಡಿದರು.

ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಜನ ಸಂದಣಿ ಸೇರುವ ಸ್ಥಳದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸಿಂಗ್ ಮಾಡಬೇಕು. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಬೇಕು. ಗ್ರಾಮಕ್ಕೆ ಹೊಸಬರು ಅಥವಾ ಹೊರ ಜಿಲ್ಲೆಯಿಂದ ಆಗಮಿಸಿದರೆ ಅಂತವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು. ಗ್ರಾಪಂ ಟಾಸ್ಕ್‍ಫೋರ್ಸ್ ಹಾಗೂ ಗ್ರಾ.ಪಂ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿಯಿಂದ ಗ್ರಾ.ಪಂ ಆಡಳಿತ ಒಗ್ಗೂಡಿ ಗ್ರಾಮದಲ್ಲಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿ ದರೆ ಬಹಳ ಸುಲಭವಾಗಿ ನಿಯಂತ್ರಣ ತರಬಹುದಾಗಿದೆ. ಆಶಾ ಕಾರ್ಯಕರ್ತೆಯರು ಕೊರೊನಾ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾ.ಪಂ ಆಡಳಿತವೂ ಸಮರ್ಪಕವಾಗಿ ಕರ್ತವ್ಯ ನಿರ್ವಹಿ ಸುತ್ತಿದೆ. ಕೊರೊನಾ ಪ್ರತಿನಿತ್ಯ ಹೆಚ್ಚಾಗುತ್ತಿರುವು ದರಿಂದ ಗ್ರಾ.ಪಂ ಆಡಳಿತ ಮತ್ತಷ್ಟು ಸೇವೆ ಸಲ್ಲಿಸಬೇಕು ಎಂದರು. ಕೊರೊನಾ ಸೋಂಕಿ ತರು ಪತ್ತೆಯಾದರೆ, ತಕ್ಷಣ ಪ್ರಥಮ ಹಾಗೂ ದ್ವಿತೀಯ ಸಂಪರ್ಕದ ಪಟ್ಟಿ ಮಾಡಿ ಸಂಪರ್ಕದವರನ್ನು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತರ ಮನೆಯತ್ತ ನಿಗಾ ವಹಿಸಬೇಕು ಎಂದರು.

ಕೊರೊನಾಗೆ ಸಂಬಂಧಪಟ್ಟಂತೆ ಶಾಸಕ ಸಿ.ಎಸ್.ಪುಟ್ಟರಾಜು ಸಾಕಷ್ಟು ಶ್ರಮಿಸು ತ್ತಿದ್ದಾರೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಿದರೆ ಕೊರೊನಾ ನಿಯಂ ತ್ರಣಕ್ಕೆ ತರಬಹುದು ಎಂದು ತಾಪಂ ಇಓ ಆರ್.ಪಿ.ಮಹೇಶ್ ಮನವಿ ಮಾಡಿದÀರು.

Translate »