ಗುಡ್ಡೆಹೊಸೂರಿನಲ್ಲಿ ವಾಹನ ತಪಾಸಣೆ
ಕೊಡಗು

ಗುಡ್ಡೆಹೊಸೂರಿನಲ್ಲಿ ವಾಹನ ತಪಾಸಣೆ

May 5, 2021

ಗುಡ್ಡೆಹೊಸೂರು, ಮೇ 4- ಕೊರೊನಾ ಮಹಾಮಾರಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ಹೆದ್ದಾರಿ ಬಳಿ ಬ್ಯಾರಿಕೇಡ್ ಅಳವಡಿಸಿ ಹೊರ ಜಿಲ್ಲೆ ಮತ್ತು ಹೊರರಾಜ್ಯಗಳಿಂದ ಬರುತ್ತಿರುವ ವಾಹನಗಳ ತಪಾಸಣೆ ನಡೆಸಲಾಯಿತು. ಈ ಸಂಧರ್ಭ ಕುಶಾಲನಗರ ಡಿವೈಎಸ್‍ಪಿ ಶೈಲೇಂದ್ರ, ವೃತ್ತನಿರೀಕ್ಷಕ ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು. ಹೊಟೇಲ್ ಮತ್ತು ಕ್ಯಾಂಟೀನ್‍ಗಳಿಂದ ಪಾರ್ಸಲ್ ನೀಡದೆ ಗುಂಪಾಗಿ ಸೇರಿಸಿ ವ್ಯಾಪಾರ ನಡೆಸುವ ಕ್ಯಾಂಟಿನ್ ಮಾಲೀಕರಿಗೆ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ದಾಳಿ ನಡೆಸಿ ದಂಡ ಹಾಕಿದರು. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಅಲ್ಲದೆ ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ಇತ್ತೀಚೆಗೆ ಜಿಲ್ಲೆಗೆ ಬಂದಿರುವ ಜನರ ಬಗ್ಗೆ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ಕಛೇೀರಿ, ಅಂಗನವಾಡಿ ಕಾರ್ಯಕರ್ತರಿಗೆ ಅಥವಾ ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ಈ ಸಂದರ್ಭ ಪಿ.ಡಿ.ಓ ಶ್ಯಾಂ ಮನವಿ ಮಾಡಿದರು.

Translate »