ದಕ್ಷ ಪಿಯು ಕಾಲೇಜು, ಗೆಟ್ಸ್ ಅಕಾಡೆಮಿ  ವತಿಯಿಂದ ಕೋವಿಡ್ ಲಸಿಕೆ ಅಭಿಯಾನ
ಮೈಸೂರು

ದಕ್ಷ ಪಿಯು ಕಾಲೇಜು, ಗೆಟ್ಸ್ ಅಕಾಡೆಮಿ ವತಿಯಿಂದ ಕೋವಿಡ್ ಲಸಿಕೆ ಅಭಿಯಾನ

July 20, 2021

ಮೈಸೂರು,ಜು.19(ಪಿಎಂ)- ಹುಣ ಸೂರು ರಸ್ತೆಯ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ದಕ್ಷ ಪಿಯು ಕಾಲೇಜು ಮತ್ತು ಗೆಟ್ಸ್ ಅಕಾಡೆಮಿಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಗಳು, ಬೋಧಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿದ್ದು, ಅದರ ಮುಂದುವರೆದ ಭಾಗವಾಗಿ ಲಸಿಕೆ ಸಹ ನೀಡಲಾಯಿತು. ಒಟ್ಟು 31 ಬೋಧಕರ ಪೈಕಿ 24 ಮಂದಿಗೆ ಕೋವಿಶೀಲ್ಡ್ ಮತ್ತು 7 ಮಂದಿ ಕೋವ್ಯಾ ಕ್ಸಿನ್, 27 ಬೋಧಕೇತರ ಸಿಬ್ಬಂದಿ ಪೈಕಿ 21 ಮಂದಿಗೆ ಕೋವಿಶೀಲ್ಡ್ ಮತ್ತು 6 ಮಂದಿಗೆ ಕೋವಾಕ್ಸಿನ್ ಲಸಿಕೆ ನೀಡಲಾಯಿತು.

ಇದೇ ವೇಳೆ ಸದರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಜಯಚಂದ್ರರಾಜು ಮಾತನಾಡಿ, ಸಂಸ್ಥೆಯು ಆರೋಗ್ಯ ಕೇಂದ್ರ ಸಹ ಹೊಂದಿದ್ದು, ಆರೋಗ್ಯ ಮತ್ತು ನೈರ್ಮ ಲ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸುರ ಕ್ಷಿತ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಸಂಸ್ಥೆಯ ಎಲ್ಲಾ ಸಿಬ್ಬಂದಿಗೆ ಕೋವಿಡ್ ಲಸಿಕೆ ಕೊಡಿಸ ಲಾಗಿದೆ. ಆ ಮೂಲಕ ಸಂಸ್ಥೆ ತನ್ನ ಜವಾ ಬ್ದಾರಿ ನಿರ್ವಹಿಸಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕಾಲೇಜಿಗೆ ಮರಳಲು ಬಯಸಿದ್ದು, ಅವರ ಕಲಿಕೆಗೆ ಉತ್ತೇಜನ ನೀಡಲು ಈ ಹಿಂದಿನಂತೆ ತರಗತಿ ನಡೆಯುವುದು ಅಗತ್ಯವಾಗಿದೆ. ಎಲ್ಲರೂ ಸಂಘಟಿತವಾಗಿ ಕೋವಿಡ್ ಮಹಾಮಾರಿ ನಿರ್ಮೂಲನೆ ನಮ್ಮ ಜವಾಬ್ದಾರಿ ಎಂಬುದನ್ನು ಅರಿಯಬೇಕಿದೆ ಎಂದರು.
ಸಿಇಟಿ, ನೀಟ್ ಮತ್ತು ಜೆಇಇ ಪರೀಕ್ಷೆ ಗಳಿಗೆ ತರಬೇತಿ ನೀಡಲು ಮೌಲ್ಯವರ್ಧಿತ ಸೌಲಭ್ಯ ಮತ್ತು ವ್ಯವಸ್ಥೆಗಳನ್ನು ದಕ್ಷ ಪಿಯು ಕಾಲೇಜು ಹೊಂದಿದೆ. ಅಲ್ಲದೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಗೆಟ್ಸ್ ಅಕಾಡೆಮಿಯೂ ಮೈಸೂರು ವಿವಿ ಮಾನ್ಯತೆಯೊಂದಿಗೆ ವಿಶೇಷ ಬಿ.ಕಾಂ ಮತ್ತು ಬಿಬಿಎ (ಹಾನರ್ಸ್) ಶಿಕ್ಷಣ ಕಾರ್ಯಕ್ರಮ ಗಳನ್ನು ನೀಡಲಿದೆ ಎಂದು ಹೇಳಿದರು.

Translate »