ಮೈಸೂರು: ಮೈಸೂರಿನ ವಿಜಯನಗರ ವಾಟರ್ ಟ್ಯಾಂಕ್ ವೃತ್ತದ ಬಳಿ ಮಹದೇಶ್ವರ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ ಒಂದನೇ ಮುಖ್ಯ ರಸ್ತೆಯಲ್ಲಿ ಅನಧಿಕೃತ ವಾಣಿಜ್ಯ ಮಳಿಗೆಗಳು ತಲೆಯೆತ್ತಿದ್ದು, ಇದರಿಂದ ಈ ಭಾಗದ ನಿವಾಸಿಗಳ ನೆಮ್ಮದಿ ಹಾಳಾಗಿದೆ ಎಂದು ನೊಂದ ನಿವಾಸಿಗಳು ದೂರಿದ್ದಾರೆ.
ನೊಂದ ನಿವಾಸಿಗಳ ಪರವಾಗಿ ಕೃಷ್ಣಪ್ಪ ಎಂಬುವವರು ಗುರುವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಡಾವಣೆಯ 1ನೇ ಮುಖ್ಯ ರಸ್ತೆಂiÀiಲ್ಲಿ 3 ಚಹಾ ಅಂಗಡಿ, 3 ಸಿಗರೇಟ್ ಅಂಗಡಿ, ನಾಲ್ಕೈದು ದಮ್ ಬಿರಿಯಾನಿ ಅಂಗಡಿಗಳಿದ್ದು, ಕೆಲವು ವಸತಿ ನಿವೇಶನ ಗಳಲ್ಲೇ ನಡೆಯುತ್ತಿವೆ. ಇವೆಲ್ಲವೂ ಯಾವುದೇ ರಹದಾರಿ ಇಲ್ಲದ ಅನಧಿಕೃತ ಅಂಗಡಿಗಳಾ ಗಿವೆ. ವಸತಿ ನಿವೇಶನಗಳಲ್ಲೂ ಬಿರಿಯಾನಿ ಹೋಟೆಲ್‍ಗಳು ಆರಂಭವಾಗಿದ್ದು, ಇವುಗಳು ಅಕ್ರಮವಾಗಿ ನಡೆಯುತ್ತಿವೆ. ಈ ಅನಧಿಕೃತ ವಾಣಿಜ್ಯ ಚಟುವಟಿಕೆಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ನರಕಯಾತನೆ ಆಗಿದೆ. ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿರುವ ಸಿಗರೇಟ್ ಮಾರಾಟ ಹೊಗೆ ಸೇವನೆಯಿಂದ ಮಾನಸಿಕ ತೊಂದರೆ, ಪೋಲಿ-ಪುಂಡರ ಅನೈತಿಕ ಚಟುವಟಿಕೆ ಗಳಿಂದಾಗಿ ನಿವಾಸಿಗಳ ಸ್ಥಿತಿ ಹೇಳತೀರದಂತಾಗಿದೆ ಎಂದು ನೋವು ವ್ಯಕ್ತಪಡಿಸಿದರು.
ರಾತ್ರಿ ಬಹು ಹೊತ್ತಿನವರೆಗೆ ನಡೆಯುವ ಅನೈತಿಕ ಚಟುವಟಿಕೆಗಳಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಇಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದು, ಹಾದಿ ತಪ್ಪುತ್ತಿದ್ದಾರೆ. ಮದ್ಯ ವ್ಯಸನಿಗಳು ಸದಾ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದ ನಿವಾಸಿಗಳ ನೆಮ್ಮದಿಗೆ ಭಂಗವಾಗಿದೆ. ರಾತ್ರಿ ವೇಳೆಯಂತೂ ನಿವಾಸಿಗಳು ಮುಕ್ತವಾಗಿ ಓಡಾಡುವುದೇ ಕಷ್ಟವಾ ಗಿದೆ. ವಸತಿ ಪ್ರದೇಶದಲ್ಲಿ ಅನಧಿಕೃತ ವಾಣಿಜ್ಯ ಚಟುವಟಿಕೆಗಳ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು ಮತ್ತು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ ಪ್ರಯೋಜನ ವಾಗಿಲ್ಲ. ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಹುಶಃ ಅಧಿಕಾರಿಗಳ ಸಹಕಾರದಿಂ ದಲೇ ಇಂತಹ ಚಟುವಟಿಕೆಗಳು ಹೆಚ್ಚುತ್ತಿವೆ. ಇದನ್ನು ಪ್ರಶ್ನಿಸಿದವರಿಗೆ ಧಮಕಿ ಹಾಕಲಾಗು ತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಧಿಕಾರಿಗಳು ಈಗಲಾದರೂ ನಿವಾಸಿಗಳ ನೆಮ್ಮದಿಗೆ ಭಂಗ ಉಂಟು ಮಾಡುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದೇ ಇದ್ದರೆ ನಿವಾಸಿಗಳು ಧರಣಿ ನಡೆಸುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನೊಂದ ನಿವಾಸಿ ಗಳಾದ ನಂದೀಶ್ ಕುಮಾರ್, ಶಿವಣ್ಣ, ಡಾ.ಗೀತಾ ಗಣಪತಿ ಇನ್ನಿತರರು ಉಪಸ್ಥಿತರಿದ್ದರು.