‘ದಾಸ ಸಾಹಿತ್ಯ’ಕ್ಕೆ ವಿಶ್ವದ ಯಾವ ಭಾಷೆ ಸಾಹಿತ್ಯವೂ ಸಮವಲ್ಲ
ಮೈಸೂರು

‘ದಾಸ ಸಾಹಿತ್ಯ’ಕ್ಕೆ ವಿಶ್ವದ ಯಾವ ಭಾಷೆ ಸಾಹಿತ್ಯವೂ ಸಮವಲ್ಲ

March 29, 2021

ಮೈಸೂರು,ಮಾ.28(ಪಿಎಂ)-`ದಾಸ ಸಾಹಿತ್ಯ’ದ ಹಿನ್ನೆಲೆಯಲ್ಲಿ ಕನ್ನಡಿಗರಾದ ನಾವು ಹೆಮ್ಮೆ ಪಡಬೇಕು. ಇಡೀ ವಿಶ್ವದ ಯಾವ ಭಾಷೆಯಲ್ಲೂ ಇದಕ್ಕೆ ಸಮನಾದ ಸಾಹಿತ್ಯ ಇಲ್ಲ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕøತ ಹಿರಿಯ ಸಂಸ್ಕøತ ವಿದ್ವಾಂಸ ಡಾ.ಹೆಚ್.ವಿ. ನಾಗರಾಜರಾವ್ ಅಭಿಪ್ರಾಯಪಟ್ಟರು.
ಮೈಸೂರಿನ ಜೆಎಲ್‍ಬಿ ರಸ್ತೆಯ ನಾದ ಬ್ರಹ್ಮ ಸಂಗೀತ ಸಭಾ ಸಭಾಂಗಣದಲ್ಲಿ ಪರಂಪರೆ, ಡಾ.ಟಿ.ಎನ್.ಎನ್.ಅಭಿನಂದನಾ ಸಮಿತಿ ಜಂಟಿ ಆಶ್ರಯದಲ್ಲಿ ಹರಿದಾಸ ಸಾಹಿತ್ಯ ಕ್ಷೇತ್ರದ ಹಿರಿಯ ವಿದ್ವಾಂಸರಾದ ಡಾ.ಟಿ.ಎನ್.ನಾಗರತ್ನ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ `ಡಾ.ಟಿ.ಎನ್. ನಾಗರತ್ನ-75’ ಶೀರ್ಷಿಕೆಯಡಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

ದಾಸ ಸಾಹಿತ್ಯದ ಕಾರಣಕ್ಕೆ ಕನ್ನಡಿಗರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ. ಇಡೀ ವಿಶ್ವದ ಸಮರ್ಥ ಸಾಹಿತ್ಯಕಾರರು ಬಂದರೂ ಅವರು ದಾಸ ಸಾಹಿತ್ಯಕ್ಕೆ ಇನ್ನಾ ವುದೇ ಭಾಷೆ ಸಾಹಿತ್ಯ ಸಮವೆಂದು ಹೇಳ ಲಾರರು. ಗ್ರೀಕ್, ಫ್ರೆಂಚ್, ಲ್ಯಾಂಟಿನ್, ಇಂಗ್ಲಿಷ್ ಇನ್ನಾವುದೇ ಭಾಷೆಯಲ್ಲೂ ದಾಸ ಸಾಹಿತ್ಯಕ್ಕೆ ಸಮನವಾದ ಸಾಹಿತ್ಯ ಸೃಷ್ಟಿ ಯಾಗಿಲ್ಲ. ಸಂಸ್ಕøತದ ಉಪನಿಷತ್ ಸಾಹಿತ್ಯಕ್ಕೆ ಸಮಾನವಾಗಿ ಋಷಿಗಳೇ ದಾಸರಾಗಿ ಬಂದು ಕೊಟ್ಟಿದ್ದು ದಾಸ ಸಾಹಿತ್ಯ. ಇಂತಹ ದಾಸ ಸಾಹಿತ್ಯವನ್ನು ಸಂಪಾದನೆ ಮಾಡು ವುದು ಸುಲಭದ ಕಾರ್ಯವಲ್ಲ. ಅಂತಹ ಕಠಿಣ ಪರಿಶ್ರಮ ಅಪೇಕ್ಷಿಸುವ ಕಾರ್ಯ ದಲ್ಲಿ ಸಾಧನೆ ಮಾಡಿದವರು ಡಾ.ಟಿ.ಎನ್. ನಾಗರತ್ನ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅದ್ಭುತ ವ್ಯಕ್ತಿ ಅಥವಾ ವಸ್ತು ಬಗ್ಗೆ ಗುಣ ಗಾನ ಮಾಡದಿದ್ದರೆ ನಮ್ಮ ನಾಲಿಗೆ ವ್ಯರ್ಥ ವಾಗುತ್ತದೆ. ಇಂದು ಒಬ್ಬ ಅದ್ಭುತ ವ್ಯಕ್ತಿಯಾದ ಡಾ.ನಾಗರತ್ನ ನಮ್ಮ ನಡುವೆ ಅಭಿನಂದಿತ ರಾಗಿದ್ದಾರೆ. ಅವರನ್ನು ಹೊಗಳಲು ಆದಿಶೇಷ ನಿಗೆ ಇದ್ದಂತೆ ಸಹಸ್ರ ನಾಲಿಗೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಭಾವನೆ ಮೂಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಡಾ.ಟಿ.ಎನ್.ನಾಗರತ್ನ ಅವರ `ಹರಿದಾಸ ಸಾಹಿತ್ಯ’ ಕೃತಿಯನ್ನು ನಾನು ಓದಿದಾಗ ಅಚ್ಚರಿ ಮೂಡಿತು. ಇಲ್ಲಿ ವಾದಿರಾಜರ ಕೃತಿಗಳನ್ನು ಅವರು ಅತ್ಯಾದ್ಭುತವಾಗಿ ವಿಮರ್ಶೆ ಮಾಡಿದ್ದು, ಅದು ನಿಜಕ್ಕೂ ವಿಸ್ಮಯವೇ ಸರಿ. ವಾದಿ ರಾಜ ಅವರಲ್ಲಿದ್ದ ಭಾಷಾ ಜ್ಞಾನ ಹಾಗೂ ಶಾಸ್ತ್ರ ನೈಪುಣ್ಯ ಕೃತಿ ಅವಲೋಕಿಸಿದರೆ ನಮ್ಮ ಕಣ್ಣಿಗೆ ಕಟ್ಟುತ್ತದೆ ಎಂದರು.

ಹರಿದಾಸ ಸಾಹಿತ್ಯದಲ್ಲಿ ವಾದಿರಾಜರು ಅತ್ಯಂತ ಸರಳವಾಗಿ ವಿಚಾರ ಮಂಡಿಸಿ ದ್ದಾರೆ. ವಾದಿರಾಜರು ಸಂಸ್ಕøತದಲ್ಲಿ ಮಹಾ ಭಾರತ ಕುರಿತು `ಮಹಾಭಾರತ ಲಕ್ಷಾ ಲಂಕಾರ’ ಗ್ರಂಥ ರಚನೆ ಮಾಡಿದ್ದಾರೆ. ಲಕ್ಷ ಸಂಖ್ಯೆಯಲ್ಲಿರುವ ಪ್ರತಿಯೊಂದು ಶ್ಲೋಕದ ಸ್ವಾರಸ್ಯವನ್ನು ಅವರು ಜಗತ್ತಿಗೆ ತಿಳಿಸಿದ್ದಾರೆ. ವಾದಿರಾಜರು 100ಕ್ಕೂ ಹೆಚ್ಚು ಗ್ರಂಥಗಳನ್ನು ರಚನೆ ಮಾಡಿದ ಮಹಾನುಭಾವರು. 120 ವರ್ಷ ನಮ್ಮ ನೆಲದಲ್ಲಿ ಜೀವಿಸಿದ್ದರು ಎಂದು ಸ್ಮರಿಸಿದರು.

ವಾದಿರಾಜರು ಸಾಮಾನ್ಯ ಜನರಿಗೆ ಹರಿಭಕ್ತಿಯ ತತ್ವ ಉಪದೇಶಿಸಲು ಅತ್ಯಂತ ಸರಳ ಕನ್ನಡದಲ್ಲಿ ಗ್ರಂಥ ರಚನೆ ಮಾಡಿ ದ್ದಾರೆ. ಸರಸ್ವತಿ ಕೊಡುವ ವರಗಳಲ್ಲಿ ಪ್ರಜ್ಞೆ ಮತ್ತು ಪ್ರತಿಭೆ ಎಂಬ ಎರಡು ವಿಧಗಳಿದ್ದು, ಪ್ರಜ್ಞೆ ಮತ್ತ ಪ್ರತಿಭೆ ಎರಡನ್ನೂ ಹೊಂದಿ ದ್ದವರು ವಾದಿರಾಜರು. ಅವರು ಪ್ರಜ್ಞೆ ಬಳಸಿ `ಯುಕ್ತಿ ಮಲ್ಲಿಕಾ’ ಬರೆದಿದ್ದರೆ, ಪ್ರತಿಭೆ ಮೂಲಕ ಹರಿದಾಸ ಸಾಹಿತ್ಯ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಡಾ.ಟಿ.ಎನ್. ನಾಗರತ್ನ ಹಾಗೂ ಅವರ ಪತಿ ಗುರುರಾಜ ಅವರನ್ನು ಸುತ್ತೂರು ಶ್ರೀಗಳು ಅಭಿನಂದಿಸಿ ದರು. ಇದೇ ವೇಳೆ ಬಿಡುಗಡೆಯಾದ ಡಾ. ಟಿ.ಎನ್.ನಾಗರತ್ನ ಅವರ ಅಭಿನಂದನಾ ಗ್ರಂಥ `ರತ್ನಪ್ರಭೆ’ ಕುರಿತು ಕನ್ನಡ ಪ್ರಾಧ್ಯಾ ಪಕ ಡಾ.ಮಾನಕರಿ ಶ್ರೀನಿವಾಸಾಚಾರ್ಯ ಮಾತನಾಡಿದರು. ಪರಂಪರೆ ಅಧ್ಯಕ್ಷ ಕೃ. ರಾಮಚಂದ್ರ, ಕಾರ್ಯದರ್ಶಿ ಪಿ.ಕೃಷ್ಣಕುಮಾರ್ ಸೇರಿದಂತೆ ಅಭಿನಂದನಾ ಗ್ರಂಥದ ಸಂಪಾ ದಕರು ಹಾಗೂ ಮತ್ತಿತರರು ಹಾಜರಿದ್ದರು.

Translate »