ಮೈಸೂರಿನ 3 ಕೇಂದ್ರಗಳಲ್ಲಿ ಎಪಿಪಿ ಹುದ್ದೆಗೆ ಸುಲಲಿತವಾಗಿ ನಡೆದ ಪರೀಕ್ಷೆ
ಮೈಸೂರು

ಮೈಸೂರಿನ 3 ಕೇಂದ್ರಗಳಲ್ಲಿ ಎಪಿಪಿ ಹುದ್ದೆಗೆ ಸುಲಲಿತವಾಗಿ ನಡೆದ ಪರೀಕ್ಷೆ

March 29, 2021

ಮೈಸೂರು,ಮಾ.28(ಆರ್‍ಕೆಬಿ)-ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ವಕೀಲರ 124 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಭಾನುವಾರ ಮೈಸೂ ರಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪರೀಕ್ಷೆ ನಡೆಯಿತು.
ಜಿಲ್ಲೆಯಲ್ಲಿ ಒಟ್ಟು 1,176 ಅಭ್ಯರ್ಥಿ ಗಳು ಪರೀಕ್ಷೆಗೆ ನೊಂದಾಯಿಸಿ ಕೊಂಡಿದ್ದರು. ಲಕ್ಷ್ಮೀಪುರಂ ಜೆಎಲ್‍ಬಿ ರಸ್ತೆ ಮಹಾರಾಜ ಸರ್ಕಾರಿ ಪಿಯು ಕಾಲೇಜು, ನಾರಾಯಣಶಾಸ್ತ್ರಿ ಮಹಾರಾಣಿ ಪಿಯು ಕಾಲೇಜು, ಒಂಟಿಕೊಪ್ಪಲು ಸರ್ಕಾರಿ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಎರಡು ಪತ್ರಿಕೆಗಳಲ್ಲಿ ಪರೀಕ್ಷೆ ನಡೆಯಿತು. ಸುಲಲಿತವಾಗಿ ಪರೀಕ್ಷೆ ಗಳನ್ನು ನಡೆಸುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲಿನ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಎಲ್ಲಾ eóÉರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿತ್ತು.

Translate »