ಮಡಿವಾಳ ಮಹಿಳಾ ಸಬಲೀಕರಣಕ್ಕೆ ನೋಂದಣಿ ಅಭಿಯಾನ ಆರಂಭ
ಮೈಸೂರು

ಮಡಿವಾಳ ಮಹಿಳಾ ಸಬಲೀಕರಣಕ್ಕೆ ನೋಂದಣಿ ಅಭಿಯಾನ ಆರಂಭ

March 29, 2021

ಮೈಸೂರು,ಮಾ.28(ಎಂಟಿವೈ)- ಮಡಿವಾಳ ಸಮುದಾಯದ ಮಹಿಳೆಯರ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಸಂಘಕ್ಕೆ ಸಮುದಾಯದ ಮಹಿಳೆಯರ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಸಂಘ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಎನ್.ಆರ್.ವಿಜಯಲಕ್ಷ್ಮೀ ಆಂಜನಪ್ಪ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿ ದಿದೆ. ಅದರಲ್ಲೂ ಸಮುದಾಯ ಮಹಿಳೆಯರು ಸಂಘಟನೆಯಿಂದ ದೂರವುಳಿದಿ ದ್ದಾರೆ. ಈ ಹಿನ್ನೆಲೆಯಲ್ಲಿ ಮಡಿವಾಳ ಸಮುದಾಯ ಮಹಿಳೆಯರನ್ನು ಸಂಘಟಿಸಿ, ಮುಖ್ಯವಾಹಿನಿಗೆ ತರುವುದರೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ, ಸಮುದಾಯ ಮಹಿಳೆಯರನ್ನು ಸಂಘಟಿಸಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಸಂಘ ರಾಜ್ಯ ಸಂಘಟನೆಯಾಗಿದ್ದು, ಸಮು ದಾಯ ಮಹಿಳೆಯರ ಏಳಿಗೆಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಮೈಸೂರು ಜಿಲ್ಲೆಯಲ್ಲೂ ನಮ್ಮ ಮಹಿಳಾ ಸಂಘಟನೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಮಟ್ಟದಲ್ಲಿ ರುವ ಮಡಿವಾಳ ಮಹಿಳೆಯರು ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮೈಸೂರು ನಗರದಲ್ಲೆ ಜಿಲ್ಲಾ ಮಟ್ಟದ ಮಡಿವಾಳ ಮಹಿಳಾ ಸಮಾವೇಶವನ್ನು ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಮಡಿವಾಳ ಸಮುದಾಯ ಹಿಂದುಳಿದಿದೆ. ರಾಜಕೀಯವಾಗಿ ಪ್ರಬಲವಾಗಿಲ್ಲ, ಈ ಹಿನ್ನೆಲೆಯಲ್ಲಿ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯವಾಗಿದ್ದು, ಈಗಾಗಲೇ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯವು ಶಿಕ್ಷಣದಿಂದ ವಂಚಿತವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಪೆÇ್ರ.ಅನ್ನಪೂರ್ಣಮ್ಮ ವರದಿಯನ್ನು ಜಾರಿಗೆ ತಂದು ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಆ ಮೂಲಕ ಸಮುದಾಯ ದವರಿಗೆ ವಿವಿಧ ಸವಲತ್ತುಗಳು ಸಿಗುವಂತೆ ಮಾಡಬೇಕು. ಮೀಸಲಾತಿಗಾಗಿ ದೊಡ್ಡ ಸಮುದಾಯಗಳು ಹೋರಾಟ ಮಾಡುತ್ತಿವೆ. ಆದರೆ, ಆ ಸಮುದಾಯಗಳು ಈಗಾಗಲೇ ಬಲಿಷ್ಠವಾಗಿವೆ. ಪಂಚಮಶಾಲಿ ಸಮುದಾಯದಲ್ಲಿ ವಿದ್ಯಾವಂತರು ಹೆಚ್ಚಿದ್ದಾರೆ. ಮಡಿವಾಳ ಸಮುದಾಯ ಶಿಕ್ಷಣದಿಂದಲೇ ವಂಚಿತವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಸಂಘದ ಉಪಾಧ್ಯಕ್ಷ ಭಾಗ್ಯಮ್ಮ, ಜಿಲ್ಲಾ ಅಧ್ಯಕ್ಷೆ ವಸಂತಕುಮಾರಿ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ, ಸವಿತಾ, ನೇತ್ರಾವತಿ ಶ್ರೀನಿವಾಸ ಉಪಸ್ಥಿತರಿದ್ದರು.

Translate »