ಡಾ.ಸಿಪಿಕೆ `ಚಿಂತನ ಚಿಂತಾಮಣಿ’ ಓದುವಂತೆ  ಪ್ರೇರೇಪಿಸುವ `ಚಿಂತನ ಚಿಂತಾಮಣಿ ಸಾರ’
ಮೈಸೂರು

ಡಾ.ಸಿಪಿಕೆ `ಚಿಂತನ ಚಿಂತಾಮಣಿ’ ಓದುವಂತೆ ಪ್ರೇರೇಪಿಸುವ `ಚಿಂತನ ಚಿಂತಾಮಣಿ ಸಾರ’

March 29, 2021

ಮೈಸೂರು, ಮಾ.28(ಆರ್‍ಕೆಬಿ)- ಓದಲು ಸಮಯವಿಲ್ಲದವರಿಗಾಗಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರ `ಚಿಂತನ ಚಿಂತಾಮಣಿ’ ಕೃತಿಯನ್ನು ಓದುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರೊ.ಕೆ.ಭೈರವ ಮೂರ್ತಿ `ಚಿಂತನ ಚಿಂತಾಮಣಿ ಸಾರ’ ವನ್ನು ಸಂಪಾದಿಸಿದ್ದಾರೆ ಎಂದು ವಿದ್ವಾಂಸ ಡಾ.ಕೆ.ಅನಂತರಾಮು ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಸಂವಹನ ಪ್ರಕಾಶನ, ಅಖಿಲ ಭಾರತ ಸರ್ವಜ್ಞ ಸಾಂಸ್ಕøತಿಕ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಪ್ರೊ.ಕೆ.ಭೈರವ ಮೂರ್ತಿ ಸಂಪಾದಿತ `ಚಿಂತನ ಚಿಂತಾ ಮಣಿ ಸಾರ’ ಕೃತಿ ಬಿಡುಗಡೆ ಮಾಡಿ, ಅವರು ಮಾತನಾಡಿದರು.

ಪಿಕೆ ಅವರ ದೊಡ್ಡ ಗ್ರಂಥ `ಚಿಂತನ ಚಿಂತಾಮಣಿ ಕೃತಿಯನ್ನು ಅಧ್ಯಯನ ಮಾಡಿ ಅದರ ಸಾರ ಕೊಡುವ ಕೆಲಸವನ್ನು ಪ್ರೊ. ಭೈರವಮೂರ್ತಿ ಮಾಡಿದ್ದಾರೆ. ಮೂಲ ಕೃತಿಯನ್ನು ಓದಲು ಉತ್ತೇಜಿಸುವಂತೆ ಮಾಡಿ ದ್ದಾರೆ. ದೊಡ್ಡ ಪುಸ್ತಕಗಳನ್ನು ಓದಲು ಸಮಯವಿಲ್ಲ ಎನ್ನುವ ಆಧುನಿಕ ಕಾಲ ದವರು ಈ ಪುಸ್ತಕವನ್ನು ಸುಲಭವಾಗಿ ಓದಬಹುದು ಎಂದು ಹೇಳಿದರು.

ಕೇಳಿದ್ದನ್ನು ಕೊಡುವ, ಬಯಸಿದ್ದನ್ನು ಕೊಡುವ `ಚಿಂತನ ಚಿಂತಾಮಣಿ. ಮೂರು ದಶಕಗಳ ಅವಿರತ ಶ್ರಮದಿಂದ ಬಂದ ಕೃತಿ ಇದು. ಮೂಲ ಗ್ರಂಥದ ಮಹಿಮೆ, ಹಿರಿಮೆಯನ್ನು ಭೈರವಮೂರ್ತಿ ಎತ್ತಿ ಹಿಡಿದಿ ದ್ದಾರೆ. ಚಿಂತಕರು, ಸಾಹಿತಿಗಳು, ಅಧ್ಯಾಪ ಕರು, ವಿದ್ಯಾರ್ಥಿಗಳು, ಭಾಷಣಕಾರರು, ರಾಜ ಕಾರಣಿಗಳು ಹಾಗೂ ಪತ್ರಕರ್ತರಿಗೆ ಈ ಪುಸ್ತಕ ಬಹಳ ಉಪಯುಕ್ತವಾಗಲಿದೆ ಎಂದರು.

ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಪೆÇ್ರ. ಕೆ.ಭೈರವಮೂರ್ತಿ, ಸಂವಹನ ಪ್ರಕಾಶನ ಮಾಲೀಕ ಡಿ.ಎನ್.ಲೋಕಪ್ಪ, ದಾಸ್ತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಡಿ. ತಿಮ್ಮಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಜಯಪ್ಪ ಹೊನ್ನಾಳಿ ಇನ್ನಿತರರು ಉಪಸ್ಥಿತರಿದ್ದರು.

Translate »