ದಸರಾ ಉನ್ನತ ಮಟ್ಟದ ಸಮಿತಿ ನಿರ್ಧಾರಕ್ಕೆ: ಪ್ರತಾಪ್ ಸಿಂಹ
ಮೈಸೂರು

ದಸರಾ ಉನ್ನತ ಮಟ್ಟದ ಸಮಿತಿ ನಿರ್ಧಾರಕ್ಕೆ: ಪ್ರತಾಪ್ ಸಿಂಹ

September 3, 2020

ಮೈಸೂರು, ಸೆ.2(ಆರ್‍ಕೆಬಿ)- ಕೊರೊನಾ ಸಂಕಷ್ಟ ಸ್ಥಿತಿಯಲ್ಲಿ ಈ ಬಾರಿಯ ದಸರೆಯನ್ನು ಸರಳವಾಗಿ ಆಚರಿಸಬೇಕೇ? ಅಥವಾ ಕಳೆದ ವರ್ಷದಂತೆ ವಿಜೃಂಭಣೆಯಿಂದ ಆಚರಿಸಬೇಕೇ? ಎಂಬುದನ್ನು ದಸರಾ ಉನ್ನತ ಮಟ್ಟದ ಸಮಿತಿ ತೀರ್ಮಾನಿಸಲಿದೆ. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ದಸರಾ ಆಚರಣೆ ತೀರ್ಮಾನ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು.

ರೈಲ್ವೆ ಮ್ಯೂಸಿಯಂಗೆ ಬುಧವಾರ ಭೇಟಿ ನೀಡಿದ್ದ ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಕಳೆದ ಬಾರಿ ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದು ಕೇವಲ ಒಂದು ತಿಂಗಳಲ್ಲಿ ಮೈಸೂರು ಹಿಂದೆಂದೂ ಕಂಡರಿಯದಂತಹ ದಸರಾವನ್ನು ನಡೆಸಿಕೊಟ್ಟಿದ್ದಾರೆ. ಜಿಲ್ಲಾಡಳಿತ ಸಹ ದಸರಾ ಆಚರಣೆಗೆ ಸಜ್ಜಾಗಿದೆ. ಹಿಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಈಗಲೂ ಮೈಸೂರಿ ನಲ್ಲೇ (ಆಡಳಿತ ತರಬೇತಿ ಸಂಸ್ಥೆಯಲ್ಲೇ) ಇದ್ದಾರೆ. ಅವರ ಅನುಭವದ ಲಾಭ ಪಡೆದು ದಸರಾ ಆಚರಿಸ ಲಾಗುವುದು. ಎಲ್ಲರೂ ಸೇರಿ ಎಷ್ಟೇ ಕಡಿಮೆ ಸಮಯ ವಿದ್ದರೂ ಒಳ್ಳೆಯ ದಸರಾ ಆಚರಿಸಬಹುದು ಎಂದರು.

ದಸರಾ ಉದ್ಘಾಟಕರು?: ಈ ಬಾರಿ ದಸರೆ ಉದ್ಘಾಟನೆ ಯಾರಿಂದ ನಡೆಸಬೇಕೆಂಬ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡಲು ಇಚ್ಛಿಸಲ್ಲ. ಯಾವುದೇ ವಿಚಾರವನ್ನು ಮುಖ್ಯಮಂತ್ರಿಗಳ ಸಮ್ಮುಖ ವ್ಯಕ್ತಪಡಿಸಿದರೆ ಮಾತ್ರ ಅದಕ್ಕೆ ಬೆಲೆ ಇರುತ್ತದೆ. ಒಬ್ಬೊ ಬ್ಬರು ಒಂದೊಂದು ಹೆಸರು ಹೇಳುತ್ತಾ ಹೋದರೆ ಗೊಂದಲ ಸೃಷ್ಟಿಯಾಗುತ್ತದೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆ ಯಲ್ಲಿಯೇ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.

Translate »