ಮೈಸೂರು ರೈಲ್ವೆ ಮ್ಯೂಸಿಯಂ `ವರ್ಚುವಲ್ ಟೂರ್’
ಮೈಸೂರು

ಮೈಸೂರು ರೈಲ್ವೆ ಮ್ಯೂಸಿಯಂ `ವರ್ಚುವಲ್ ಟೂರ್’

September 3, 2020

ಮೈಸೂರು, ಸೆ.2(ಆರ್‍ಕೆಬಿ)- ಮೈಸೂರು ವಿಭಾ ಗೀಯ ರೈಲ್ವೆ ಅಭಿವೃದ್ಧಿಪಡಿಸಿದ ವೆಬ್‍ಸೈಟ್ ಮೂಲಕ ವಿಶ್ವದೆಲ್ಲೆಡೆಯಿಂದ ರೈಲ್ವೆ ಮ್ಯೂಸಿಯಂ ವೀಕ್ಷಿಸಬಹು ದಾದ `ವರ್ಚುವಲ್ ಟೂರ್’ ಬುಧವಾರ ಆರಂಭ ವಾಗಿದೆ. 4 ದಶಕಗಳ ಇತಿಹಾಸವಿರುವ ರೈಲ್ವೆ ಮ್ಯೂಸಿಯಂ ಪ್ರವಾಸಿಗರನ್ನು ಆಕರ್ಷಿಸಲು ನವೀಕೃತ ಮ್ಯೂಸಿಯಂ ವೆಬ್‍ಸೈಟ್ ರೂಪಿಸಿದೆ.

ಬ್ರಿಟಿಷರ ಕಾಲದ ಉಗಿಬಂಡಿ, ಡೀಸೆಲ್-ವಿದ್ಯುತ್ ಲೋಕೋಮೋಟಿವ್, ಸ್ಟೀಮ್ ಪಂಪ್, ರಾಯಲ್ ಸಲೂನ್, ಸಿಗ್ನಲ್ ದೀಪ, ಮೈಸೂರ್ ಸ್ಟೇಟ್ ರೈಲ್ವೆ ಮೀಟರ್ ಗೇಜ್ ಜಿ ಟೈಪ್ ಡೈನಿಂಗ್ ಸಲೂನ್, ಟ್ಯಾಂಕ್ ಇಂಜಿನ್, ಮೈಸೂರ್ ಮಹಾರಾಣೀಸ್ ಸಲೂನ್ ಕಾರ್, ಹಳೆಯ ಟೆಲಿಕಾಂ ಉಪಕರಣಗಳು, 1910-20ರಲ್ಲಿ ಬಳಸುತ್ತಿದ್ದ ಡಬಲ್ ವೈರ್ ಕೇಸ್ ಪ್ಲೇಟ್‍ಗಳು, 1927ರ ನ್ಯಾರೋ ಗೇಜ್ ಕೋಚ್‍ಗಳು, ಕ್ರೇನ್, ಖಿISಅಔ ನಿರ್ಮಿತ ಹಳೆಯ ಸ್ಟೀಮ್ ಇಂಜಿನ್, ಇಂಜಿನ್‍ನ ಒಳಮಾದರಿ, ಟಾಯ್ ಟ್ರೈನ್ ಜಾಯ್ ರೈಡ್, ಒಲ್ಡ್ ಸ್ಟೀಮ್ ರೈಲ್ ಕ್ರೈನ್ ಅಲ್ಲದೆ, ಹಳೆಯ ರೈಲು ಬೋಗಿಯನ್ನೇ ವಿಶೇಷವಾಗಿ `ಕೋಚ್ ಕೆಫೆ’ಯಾಗಿ ಮಾರ್ಪಡಿಸಿರುವುದು ಗಮನ ಸೆಳೆಯಲಿವೆ. ವಚ್ರ್ಯುವಲ್ ಟೂರ್, 360 ಡಿಗ್ರಿ ನೋಟ ದಲ್ಲಿ ಸಂದರ್ಶಕರಿಗೆ ನೇರ ವೀಕ್ಷಣೆಯ ಅನುಭವವನ್ನೇ ನೀಡುತ್ತದೆ. ಇದನ್ನು https://mysururailmuseum.com/ ನಲ್ಲಿ ವೀಕ್ಷಿಸಬಹುದು. ಸಂಸದ ಪ್ರತಾಪ್ ಸಿಂಹ ಬುಧವಾರ ನವೀಕೃತ ರೈಲ್ವೆ ಮ್ಯೂಸಿಯಂಗೆ ಭೇಟಿ ನೀಡಿ `ವರ್ಚುವಲ್ ಟೂರ್’ಗೆ ಚಾಲನೆ ನೀಡಿದರು. ಈ ಸಂದರ್ಭ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್, ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಶಾಂತಿ ಬಾಬು, ವಿಭಾ ಗೀಯ ವಾಣಿಜ್ಯ ವ್ಯವಸ್ಥಾಪಕಿ ಹಾಗೂ ಜನಸಂಪರ್ಕಾ ಧಿಕಾರಿ ಪ್ರಿಯಾ ಶೆಟ್ಟಿ, ‘ವರ್ಚುವಲ್ ಟೂರ್’ ಸೃಷ್ಟಿಕರ್ತ ಮೈಸೂರು ಮೂಲದ ಐಟಿ ಸಲ್ಯೂಷನ್ಸ್ ಕಂಪನಿಯ ಅರುಣ್‍ಕುಮಾರ್ ಇನ್ನಿತರರಿದ್ದರು.

ಪ್ರವಾಸಿ ತಾಣ: ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ರೈಲ್ವೆ ಮ್ಯೂಸಿಯಂ ಸಹ ಪ್ರಮುಖ ಪ್ರವಾಸಿ ತಾಣವಾಗಿದೆ. ದಸರಾ ಸಂದರ್ಭ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರನ್ನು ಮೈಸೂರು ರೈಲ್ವೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲು ಕೋರುತ್ತೇನೆ. ಇದರಿಂದಾಗಿ ರೈಲ್ವೆ ಮ್ಯೂಸಿಯಂ ನಗರದ ನೋಡಲೇಬೇಕಾದ ಆಕರ್ಷಣೆಯ ಕೇಂದ್ರವಾಗಿ ಇನ್ನಷ್ಟು ಜನಪ್ರಿಯಗೊಳ್ಳಲು ಸಹಕಾರಿಯಾಗಲಿದೆ ಎಂದರು.

`ರೈಲ್ವೆ, ಹೈವೇ, ಏರ್‍ವೇ’ ಮೂರರಲ್ಲೂ ಅಭಿವೃದ್ಧಿ ಕಾಣುತ್ತಿರುವ ಮೈಸೂರು
ಮೈಸೂರು, ಸೆ.2(ಆರ್‍ಕೆಬಿ)- ನಾನು ಸಂಸದನಾದಾಗ ವಿಮಾನ ನಿಲ್ದಾಣ ಕಾರ್ಯ ಸ್ಥಗಿತಗೊಂಡಿತ್ತು. ಇಂದು ಮೈಸೂರು ವಿಮಾನ ನಿಲ್ದಾಣದಿಂದ ವಿವಿಧ ರಾಜ್ಯಗಳಿಗೆ 8 ವಿಮಾನಗಳು ಸಂಚರಿಸುತ್ತಿವೆ. 2250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ಮೈಸೂರು 10 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗುತ್ತಿದೆ. ಕುಶಾಲನಗರದ ಗುಡ್ಡೆ ಹೊಸೂರುವರೆಗೆ 4 ಪಥದ ರಾಷ್ಟ್ರೀಯ ಹೆದ್ದಾರಿ ಮಾಡುತ್ತಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾದಿಂದಾಗಿ ಮೈಸೂರು ವಿಮಾನ ನಿಲ್ದಾಣದಿಂದ ಕೆಲವು ವಿಮಾನ ಸೇವೆಗಳು ನಿಲ್ಲಿಸಲಾಗಿತ್ತು. ಆದರೂ ಚೆನ್ನೈ, ಹೈದರಾಬಾದ್, ಬೆಂಗಳೂರಿಗೆ ಸತತ ವಾಗಿ ವಿಮಾನ ಸಂಚರಿಸುತ್ತಿವೆ.

ಕೊರೊನಾದಿಂದ ಹೊರಬರುತ್ತಿದ್ದಂತೆ 8 ವಿಮಾನಗಳು ಪುನಾರಂಭಗೊಳ್ಳಲಿವೆ. ಕೊಚ್ಚಿನ್, ಹೈದರಾಬಾದ್, ಚೆನ್ನೈ, ಕಲಬುರಗಿ, ಬೆಂಗಳೂರು, ಬೆಳಗಾವಿ, ಗೋವಾಗೆ ವಿಮಾನ ಸಂಪರ್ಕ ಕೊಟ್ಟಿದ್ದೇವೆ ಎಂದರು.

ರನ್‍ವೇ ವಿಸ್ತರಣೆ: ಮೈಸೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆ ಆಗ ಬೇಕಿದ್ದು, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಬೇಕಿದೆ. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕಿದೆ. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಇದಕ್ಕೆ 170 ಕೋಟಿ ರೂ. ಅನುದಾನ ಮತ್ತು 114 ಎಕರೆ ಭೂಮಿಯನ್ನು ಸ್ವಾಧೀನ ಮಾಡಿ ಕೊಡಲು ಒಪ್ಪಿದ್ದಾರೆ. ಆದಷ್ಟು ಬೇಗ ಅದಕ್ಕೆ ಹಣ ಬಿಡುಗಡೆಯಾಗಿ ಭೂ ಸ್ವಾಧೀನ ಮಾಡಿ, ಅಂಡರ್‍ಪಾಸ್ ನಿರ್ಮಾಣಕ್ಕೆ ಕೈ ಹಾಕುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

ದಶಪಥ: ನನ್ನ ಚುನಾವಣಾ ಪ್ರಚಾರಕ್ಕೆ ಬಂದಿದ್ದ ನರೇಂದ್ರ ಮೋದಿ ಅವರು ಮೈಸೂರು ಪ್ರವಾಸೋದ್ಯಮ ವಿಷಯ ದಲ್ಲಿ ಪ್ಯಾರಿಸ್‍ನಂತೆ ಪ್ರವಾಸಿಗರನ್ನು ಆಕ ರ್ಷಿಸುವ ಶಕ್ತಿ ಹೊಂದಿದೆ ಎಂದಿದ್ದರು. ಪ್ಯಾರಿಸ್ ರೀತಿ ಪ್ರವಾಸಿಗರು ಮೈಸೂರಿಗೆ ಆಗಮಿಸಬೇಕೆಂದರೆ ಸಂಪರ್ಕ ಅಭಿವೃದ್ಧಿ ಆಗಬೇಕಿತ್ತು. ಹಾಗಾಗಿ 8 ಹೊಸ ರೈಲು ಗಳು ಬಂತು, ವಿಮಾನ ನಿಲ್ದಾಣ ಕೂಡ ಕಾರ್ಯರೂಪಕ್ಕೆ ಬಂದಿದೆ. ಈಗ 2550 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ಮೈಸೂರು ನಡುವೆ 10 ಪಥದÀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. 2022ರ ಜನ ವರಿಗೆ ಕಾಮಗಾರಿ ಪೂರ್ಣಗೊಳಿಸಲು ಸಮರೋಪಾದಿಯಲ್ಲಿ ಕಾಮಗಾರಿ ನಡೆ ಯುತ್ತಿದೆ ಎಂದರು.

ಕುಶಾಲನಗರವರೆಗೆ: ಕುಶಾಲನಗರದ ಗುಡ್ಡೆಹೊಸೂರುವರೆಗೆ 4 ಪಥದ ರಾಷ್ಟ್ರೀಯ ಹೆದ್ದಾಗಿ ಮಂಜೂರು ಮಾಡಿಸಿದ್ದೇನೆ. ನಾನು ಎಸ್ಟಿಮೇಟ್ ಕಮಿಟಿ ಸದಸ್ಯನಾಗಿರುವುದ ರಿಂದ ಒಟ್ಟು 3120 ಕೋಟಿ ರೂ.ಗಳ ಯೋಜನೆ ಯನ್ನು ಘೋಷಣೆ ಮಾಡಿಸಿದ್ದೇನೆ ಎಂದರು. ಮೈಸೂರು ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಿಕೊಂಡು ಅದರ ಡಾಂಬ ರೀಕರಣಕ್ಕೆ 140 ಕೋಟಿ ರೂ. ತಂದಿದ್ದೇನೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

Translate »