ಜಿಎಸ್‍ಟಿ ವಿಚಾರ: 18289 ಕೋಟಿ ರೂ. ಪರಿಹಾರ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ
ಮೈಸೂರು

ಜಿಎಸ್‍ಟಿ ವಿಚಾರ: 18289 ಕೋಟಿ ರೂ. ಪರಿಹಾರ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ

September 3, 2020

ಬೆಂಗಳೂರು, ಸೆ.2(ಕೆಎಂಶಿ)- ಜಿಎಸ್‍ಟಿ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರವು ಆಯ್ಕೆ ಒಂದರ ಅಡಿಯಲ್ಲಿ ಒಟ್ಟು 18289 ಕೋಟಿ ರೂ ಪರಿಹಾರ ಪಡೆಯುವುದನ್ನು ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ

ಜಿಎಸ್ಟಿ ಸಂಬಂಧ ಪ್ರತಿಪಕ್ಷದ ನಾಯಕರು ನೀಡಿದ ಹೇಳಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಅವರು ಪತ್ರಿಕಾ ಹೇಳಿಕೆ ನೀಡಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಇದು ಸಹಕಾರಿಯಾಗಲಿದೆ ಎಂದಿದ್ದಾರೆ.

ಜಿಎಸ್ಟಿಯಲ್ಲಿ ಪಾವತಿಸಬೇಕಾದ ಸಂಪೂರ್ಣ ಪರಿಹಾರದ ಅರ್ಹತೆಗೆ ಸಂಬಂಧಿಸಿದಂತೆ ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರ್ಕಾ ರವು ಗುರುತಿಸಿದೆ ಮತ್ತು ಅಂಗೀಕರಿಸಿದೆ ಎಂದು ಗಮನಿಸಿ ಇದರ ವಿಷಯವಾಗಿ ನಾವು ಸಂತೋಷಪಡುತ್ತೇವೆ. ಪರಿವರ್ತನೆ ಅವಧಿ ಯಲ್ಲಿ ಬಾಕಿಯಿರುವ ಪರಿಹಾರವನ್ನು 2022 ಆಚೆಗೆ ವಿಸ್ತರಿಸುವ ಮೂಲಕ ಪೂರೈಸಲಾಗುವುದು. ನಮ್ಮ ಆಯ್ಕೆ ಅಡಿಯಲ್ಲಿ ಕರ್ನಾ ಟಕದ್ದು ಒಟ್ಟು 18289 ಕೋಟಿ ರೂ. ಪರಿಹಾರವಾಗಿರುತ್ತದೆ. ಇದರಲ್ಲಿ 6965 ಕೋಟಿ ರೂ. ಸೆಸ್ ಸಂಗ್ರಹಿಸುವುದರಿಂದ ಬರುತ್ತದೆ. ಉಳಿದ 11324 ಕೋಟಿ ರೂ.ಗಳಿಗೆ ಕರ್ನಾ ಟಕವು ವಿಶೇಷ ವಿಂಡೋ ಮೂಲಕ ಸಾಲ ಪಡೆಯಲು ಅನುವು ಮಾಡಿಕೊಡಲಾಗಿದೆ. ಇದಲ್ಲದೆ ಜಿಎಸ್ಟಿಯ ಶೇ.1ರಷ್ಟು ಹೆಚ್ಚು ವರಿಯು ಯಾವುದೇ ಷರತ್ತಿಲ್ಲದೆ ಲಭ್ಯವಿರುತ್ತದೆ. ಉಳಿದ 8543 ಕೋಟಿ ರೂ.ಗೆ ಮಾರುಕಟ್ಟೆ ಸಾಲದ ಮೂಲಕ ಪಡೆಯಲು ಅವಕಾಶವಿರುತ್ತದೆ ಎಸ್ಡಿಪಿಐ ಶೇ.1ರಷ್ಟು ಇರುವವರೆಗೂ ಲಭ್ಯವಿರು ವುದಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ರಾಜ್ಯವು ಪಡೆಯ ಬಹುದಾದ ಅಂತಹ ಸಾಲದ ಮೊತ್ತವು ಗಣನೀಯವಾಗಿ ಅಂದರೆ 1817 ಕೋಟಿ ರೂ.ಗಳವರೆಗೆ ಫೆÇೀನ್ ಮೂಲಗಳಿಂದ ಪಾವತಿಸ ಬೇಕಾಗುತ್ತದೆ. ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ಆಯ್ಕೆ ಒಂದರಿಂದ ರಾಜ್ಯದ ಹಣಕಾಸುಗಳಿಗೆ ಹೆಚ್ಚು ಪ್ರಯೋಜನಕಾರಿ ಯಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರವು ಆಯ್ಕೆ ಒಂದಕ್ಕೆ ತನ್ನ ಆದ್ಯತೆಯನ್ನು ಭಾರತ ಸರಕಾರಕ್ಕೆ ತಿಳಿಸಲು ನಿರ್ಧರಿಸಿದೆ.

 

 

Translate »